top of page

ಸಂದು ಬಳ್ಳಿ ನೋಡಿ ರಚನೆ ಹೇಗೆ ಸಂದು ಸಂದು ಗಳಿಂದ ಹೇಗೆ ಜೋಡಣೆ ಆಗಿದೆ.


ಸಸ್ಯಶಾಸ್ತ್ರೀಯ: ಸಿಸ್ಸಸ್ ಕ್ವಾಡ್ರಾಂಗುಲಾರಿಸ್

ಕುಟುಂಬ: ವೈಟೇಸಿ

ಸಂಸ್ಕೃತ: ವಜ್ರವಲ್ಲಿ/ಅಸ್ತಿಶೃಂಖಲಾ

ಹಿಂದಿ: ಹಡ್ ಜೋಡ್

ಇಂಗ್ಲೀಷ :. ಬೋನ್ ಸೆಟ್ಟರ್


ಪರಿಚಯ & ಬೆಳೆಯುವ ಪ್ರದೇಶ

ಇದನ್ನು ವಿಶೇಷ ಆರೈಕೆ ಇಲ್ಲದೇ ಬೆಳೆಯ ಬಹುದು ಅಲಂಕಾರಿಕ ಗಿಡವಾಗಿಯೂ ಬೆಳೆಯ ಬಹುದು ಹಾಗೆ ಮರದ ಆಧಾರ ಸಿಕ್ಕಲ್ಲಿ ಅತೀ ಎತ್ತರ ಬೆಳೆಯುವ ಬಳ್ಳಿ ಹಾಗೆ ಮರದಿಂದ ಇಳಿ ಬಿದ್ದಿರುತ್ತದೆ ಅದು ಮರಕ್ಕೆ ಜೋತುಬಿದ್ದಂತೆ ಕಾಣುವುದರಿಂದ ( ಮಂಗನಂತೆ) ಮಂಗರಬಳ್ಳಿ ಅಂತಾನೂ ಕರೆಯುತ್ತಾರೆ. ಇದೂ ಒಂದುರೀತಿಯ ಕಳ್ಳಿಯಂತೆ ಕಾಣುತ್ತದೆ ಹಾಗೆ ಕಳ್ಳಿ ಕುರುಚಲು ಕಾಡಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಈಗ ಕೈತೋಟದಲ್ಲಿ ಮತ್ತು ಔಷಧಗಳಿಗಾಗಿ ನೆಡುತ್ತಾರೆ .


ಔಷಧೀಯ ಉಪಯೋಗ:

೧. ಸಂದುವಾತಕ್ಕೆ ೨, ಎಲುಬು ತೂತಿಕೆ ರೋಗ ( ವಿವರ್ ಒನಕೆ ಗಡ್ಡೆ ಔಷಧ ನೋಡಿ).೩ಮೂಗಿನಿಂದ ರಕ್ತ ಒಸರುವುದಕ್ಕೆ.೪. ಅನಿಯಮಿತ ಮುಟ್ಟು. ೫.ಪಶುಗಳಲ್ಲಿ ಹಾಲು ಹೆಚ್ಚಳಕ್ಕೆ  ಇತ್ಯಾದಿ.

ಬಹು ಬಗೆಯ ಉಪಯೋಗ. 


ಬಳಸುವ ರೀತಿ:


  • ಸಂದುವಾತಕ್ಕೆ

ಸಂದುವಾತಕ್ಕೆ ಪ್ರತೀದಿನ ಒಂದು ಗೆಣ್ಣು ಸಂದುಬಳ್ಲಿ ತೆಗೆದುಕೊಂಡು ಜಜ್ಜಿ ಅರ್ಧ ಚಮಚ ಜೀರಿಗೆಯೊಂದಿಗೆ  ಸಣ್ಣ ೪ಲೋಟ ನೀರಿಗೆ ಹಾಕಿ ಕುದಿಸಿ ೧ ಲೋಟಕ್ಕೆ ಇಳಿಸಿ ಕುಡಿಯಿರಿ.

  • ಎಲುಬು ತೂತಿಕೆ ರೋಗಕ್ಕೆ 

ಖಾತ್ರಿ ಯಾದ ನಂತರ ಸಂದುಬಳ್ಳಿ ಒಣಗಿಸಿ ಪುಡಿ ಮಾಡಿ ಅದನ್ನು ರೋಗದ ತೀವ್ರತೆಗೆ ಅನುಸಾರವಾಗಿ ೧ರಿಂದ ೨ ತೊಲೆ ಪುಡಿಯನ್ನು ಬಿಸಿ ಹಾಲಿಗೆ ನಾಟಿಹಸುವಿನ ಹಾಲಿಗೆ ಸೇರಿಸಿ ಕುಡಿಯಿರಿ ದಿನಕ್ಕೆರಡು ಬಾರಿ ೯೦ ದಿನ ಕನಿಷ್ಠ ಪಕ್ಷ ಕುಡಿಯಿರಿ.

  • ಮೂಗಿನಲ್ಲಿ ರಕ್ತ 

ಮೂಗಿನಲ್ಲಿ ಕೆಲವರಿಗೆ ಆಗಾಗ ರಕ್ತ ಸೋರುತ್ತದೆ ಇದಕ್ಕೆ ಸಂದುಬಳ್ಳಿ ಜಜ್ಜಿ ರಸತೆಗೆದು ಹತ್ತಿಯಲ್ಲಿ ಅದ್ದಿ ಮೂಗಿನ ಹೊಳ್ಳೆಯೊಳಕ್ಕೆ ಬಿಡಿ ಹೀಗೆ ಆಗಾಗ ಮಾಡುತ್ತಿರ ಬೇಕು. ರಸತೆಗೆಯುವ ಮೊದಲು ಅನುಕೂಲತೆ ಇದ್ದರೆ ಹೀಗೆ ಮಾಡಿ ಸಂದು ಬಳ್ಳಿ ಚೂರನ್ನು ಬಾಳೆ ಎಲೆಯಲ್ಲಿ ಸುತ್ತಿ ಬಿಸಿ ಬೂದಿಯಲ್ಲಿ ಹುಗಿದು ಹದವಾಗಿ ಬೆಂದನಂತರ ಜಜ್ಜಿ ರಸತೆಗೆಯಿರಿ

  • ಅನಿಯಮಿತ ಮುಟ್ಟು

ಕೆಲವರಿಗೆ ಕಾಲ ಕಾಲಕ್ಕೆ ಸರಿಯಾಗಿ ಮುಟ್ಟು ಆಗದು ಇದು ತೊಂದರೆಯೇ.ಹಾಗಾಗಿ ಪರಿಹಾಕ್ಕಾಗಿ ಸಂದುಬಳ್ಳಿಯ ಚೂರ್ಣ ವನ್ನು ೧ತೊಲೆ ದಿನಕ್ಕೆರಡು ಸಲದಂತೆ ಮುಟ್ಟಾದ ೫ ನೇ ದಿನದಿಂದ ೪೫ ದಿನ ಆಹಾರದ ನಂತರ ಬಿಸಿ ಹಾಲಿಗೆ ಹಾಕಿ ಕುಡಿಯಿರಿ ಅನುಕೂಲತೆ ಇದ್ದರೆ ದೇಶೀ ಹಸುವಿನ ಹಾಲು ಕರೆದ ತಕ್ಷಣ ಬಿಸಿ ಆರುವ ಮೊದಲೇ ಬೆಳಿಗ್ಗೇನೇ ಕುಡಿಯಿರಿ ನಂತರ ಅರ್ಧಗಂಟೆ ಬಿಟ್ಟು ಆಹಾರ ಸೇವಿಸಿರಿ.

  • ಪಶುಗಳ ಹಾಲು ಹೆಚ್ಚಳಕ್ಕೆ

ಇತರ ಮೇವು ಅಥವಾ ಹಿಂಡಿಯಲ್ಲಿ ಸಂದುಬಳ್ಳಿಯನ್ನು ಸುಮಾರು ಅರ್ಧ ಕಿಲೊ ಮಿಶ್ರಣ ಮಾಡಿ ಕೊಡಿ ಹಿಗೆ ಒಂದೆರಡು ತಿಂಗಳು ನೀಡಿರಿ.

  • ಹಸಿವಾಗದೇ ಇದ್ದಾಗ 

ಜೀರ್ಣಾಂಗ ವ್ಯವಸ್ಥೆ ಸುಧಾರಣೆ ಗೆ ಸಂದು ಬಳ್ಳಿ ಸೊಪ್ಪಿನ ಪಲ್ಯ ಮಾಡಿ ತಿನ್ನಿರಿ

  • ಸಂದು ವಾತದ ನೋವಿಗೆ ಎಣ್ಣೆ

ಒಂದುಪಾಲು ಸಂದು ಬಳ್ಳಿ (ಹಸಿದಾದ)ಇದಕ್ಕೆ ಮೂರುಪಾಲು ಎಳ್ಳೆಣ್ಣೆ ಸೇರಿಸಿ ಬಿಸಿ ಮಾಡಿ ಅದನ್ನು ಸೋಸಿ ಬಾಟಲಿಯಲ್ಲಿ ತುಂಬಿಟ್ಟು  ನೋವಿದ್ದಲ್ಲಿ ಹಚ್ಚಿ ಸಾವಕಾಶವಾಗಿ ಮಾಲಿಶ್ ಮಾಡಿ ೧ ತಾಸುಬಿಟ್ಟು ಬಿಸಿನೀರಿನಿಂದ ಸ್ನಾನಮಾಡಿ. ಸಂದುಬಳ್ಳಿ ಜಜ್ಜಿ ತೈಲಪಾಕಮಾಡಿರಿ.

  • ಕಿವಿನೋವಿಗೆ.

ಈಮೇಲೆ ಹೇಳಿದಂತೆ ಬಿಸಿ ಬೂದಿ ಯಲ್ಲಿ ಹುಗಿದು ರಸತೆಗೆದು ಸ್ವಚ್ಛ ಬಟ್ಟೆಯಲ್ಲಿ ಸೋಸಿ ಕಿವಿಗೆ ಹಾಕಿರಿ.

  • ಬೊಜ್ಜು.

ಈ ಸಮಸ್ಯೆಯಿಂದ ಬಳಲುವವರು ಮೂರುಭಾಗ ಸಂದು ಬಳ್ಳಿ ಚೂರ್ಣ +ತ್ರಿಪಲಾ ಚೂರ್ಣ ಮಿಶ್ರಣವನ್ನು ಪ್ರತೀದಿನ ರಾತ್ರಿ ಮಲಗುವ ಮುನ್ನ೧ ಚಮಚ ಚೂರ್ಣವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ೪೫ ದಿನ ಸೇವಿಸಿರಿ.

  • ಮೂಲವ್ಯಾಧಿ

ಇದಕ್ಕೆ ಸಂದು ಬಳ್ಳಿ ರಸ ತೆಗೆದು ಜೇನುತುಪ್ಪದೊಂದಿಗೆ ಸೇವಿಸಿ೨ ಚಮಚ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸಾಕು.


 ಇಲ್ಲಿ ಅಸ್ತಿಶೃಂಖಲಾ / ಬೋನ್ ಸೆಟ್ಟರ್ ಅಂದಿದ್ರಿ ಅದರಬಗ್ಗೆ ಪ್ರಸ್ತಾಪವೇ ಇಲ್ಲಾ ಅಂತೀರಾ ? ಹಾಗಾದರೆ  ನಿಮಗೆ ತಿಳಿಯದ ಅಪರೂಪದ ಗಿಡಮೂಲಿಕೆ ಇದರೊಂದಿಗೆ ಅಗತ್ಯ ಅದನ್ನು ಸೇರಿಸದೇ ಇದು ಅಪೂರ್ಣ ಹಾಗಾಗಿ ಹೇಳಿಲ್ಲ ಆದರೂ ಸ್ವಲ್ಪದರಲ್ಲಿ ವಿವರಿಸುತ್ತೇನೆ. .ಮಾಲೆಬಂದಿ,

ಕರಿಕೋಲು,ಹುಳಿಕೋಲು,ಸಂದುಬಳ್ಳಿ ಇದನ್ನು ಜಜ್ಜಿ ಸ್ವಲ್ಪ ರಸ ಸೇವನೆ ಮಾಡಿ ಚರಟ ಮೂಳೆ ಮುರಿದಲ್ಲಿ ಕಟ್ಟುವುದು. ಈಗ ಪ್ಲಾಸ್ಟರ್ ಇದೆ ಹಾಗಾಗಿ ಇವನ್ನು ಕಾಯಿಯೊಂದಿಗೆ ಅರೆದು ಕಾಲಿ ಹೊಟ್ಟೆಯಲ್ಲಿ ೫ ದಿನ ಸೇವಿಸಿರಿ.‌ 


ಪ್ರದೀಪ ಜಿ.ಹೆಗಡೆ ಬರಗದ್ದೆ ಕುಮಟಾ.


ಪ್ರದೀಪಕುಮಾರ ಗಣಪತಿ ಹೆಗಡೆಯವರು ಕುಮಟಾ ತಾಲೂಕಿನ ನೀಲ್ಕೋಡ ಅಂಚೆಯ ಬರಗದ್ದೆ ಗ್ರಾಮದವರು.ಬಿ.ಎ.ಪದವೀದರರಾದ ಇವರು ಪರಿಸರ ಪ್ರಿಯರು.ಅವರು ನಮ್ಮ ಆಲೋಚನೆ.ಕಾಂ ಪತ್ರಿಕೆಗೆ ಔಷಧಿ ಸಸ್ಯಗಳು ಮತ್ತು ಅದರ ಉಪಯೋಗದ ಬಗ್ಗೆ ಬರೆಯಲಿದ್ದಾರೆ.ಪ್ರದೀಪ ಅವರ ಬರಹಗಳಿಗೆ ಸ್ವಾಗತ. ಸಂಪಾದಕ.

362 views0 comments

Kommentare


bottom of page