Dec 20, 20201 min readಸಂಜೆಯೊಳಗೊಂದು ಸುತ್ತು [ಕವನ] -ಮೋಹನ್ ಗೌಡ ಹೆಗ್ರೆ ಈ ಸಂಜೆ ಶರಣಾಗಿದೆಪಡುವಣದ ಹಾದಿ ಬೀದಿಯ ರಂಗಿಗೆಈ ಹಗಲಿನ ತುದಿಯೆಲ್ಲಿದೆಯೋಬೆಳಕು ಮಲಗುವ ಜಾಗೆಯೆಲ್ಲೋ...?ಹೆದ್ದಾರಿಯ ಅಂಚಿನ ಪಾಸ್ಟ್ ಪುಡ್ ಅಂಗಡಿಯಲ್ಲಿತರಾತರಿಯಲ್ಲಿ ಸದ್ದಿಲ್ಲದೇ ನಳಪಾಕ ತಯಾರಾಗುತಿದೆರಾಜ್ಯಗಳ ಗಡಿದಾಟಿ ಬಂದ ಗಾಡಿಯವಸಿಂಗಲ್ ಚಾ ಗೆ ಮೊರೆಹೊಗಿದ್ದಾನೆಬೆಳಕಿನ ಬೀಳ್ಕೊಡುಗೆಗೆಬೀದಿ ದೀಪಗಳು ಕಣ್ಣರಳಿಸಿವೆಮೆಲ್ಲಗೆ ಮುದುಡುತಿರುವ ಹೂದಳಗಳುಮುಂಜಾವಿನ ದುಂಬಿಯ ಸವಿಮುತ್ತ ನೆನೆದಿವೆಹಳ್ಳ, ನದಿ, ಕಡಲ ದಂಡೆಯಲಿಎಂತೆಂತದೋ ಪಟ್ಟಂಗದ ತಂಡಗಳುಸೂರ್ಯನ ಕುಂಕುಮದ ಮೈ ಬಣ್ಣವಮುಲಾಜಿಲ್ಲದೇ ನೋಡುತಿವೆ ಹಾಗೆಗೂಡಿಗೊರಟ ಹಕ್ಕಿಗಳುನಾಳೆ ಮೇಯುವ ಜಾಗವ ಕಾದಿರಿಸಿವೆಗದ್ದೆ ಬಯಲ ಮಣ್ಣ ಮೈಗಂಟಿಸಿಕೊಂಡ ಮಗುಬಚ್ಚಲ ಮನೆಯಲ್ಲಿ ಸಣ್ಣ ಗೊಣಗುವಿಕೆಯ ಸೃಷ್ಟಿಮಾಡಿದೆಈ ಕತ್ತಲನು ಗುತ್ತಿಗೆಗೆ ಪಡೆಯಬೇಕುಈ ಸಂಜೆಯೊಳಗೆ ಇರುಳು ಒಳ ನುಸುಳುವಕತ್ತಲು ಬೆಳಕು ದಾರಿ ಬದಲಿಸುವಕಂಡಲ್ಲಿ ಕಂಡಷ್ಟು ಈ ಸೃಷ್ಟಿಯ ಅಗೋಚರತೆಯನರಿಯಲು..... -ಮೋಹನ್ ಗೌಡ ಹೆಗ್ರೆ
-ಮೋಹನ್ ಗೌಡ ಹೆಗ್ರೆ ಈ ಸಂಜೆ ಶರಣಾಗಿದೆಪಡುವಣದ ಹಾದಿ ಬೀದಿಯ ರಂಗಿಗೆಈ ಹಗಲಿನ ತುದಿಯೆಲ್ಲಿದೆಯೋಬೆಳಕು ಮಲಗುವ ಜಾಗೆಯೆಲ್ಲೋ...?ಹೆದ್ದಾರಿಯ ಅಂಚಿನ ಪಾಸ್ಟ್ ಪುಡ್ ಅಂಗಡಿಯಲ್ಲಿತರಾತರಿಯಲ್ಲಿ ಸದ್ದಿಲ್ಲದೇ ನಳಪಾಕ ತಯಾರಾಗುತಿದೆರಾಜ್ಯಗಳ ಗಡಿದಾಟಿ ಬಂದ ಗಾಡಿಯವಸಿಂಗಲ್ ಚಾ ಗೆ ಮೊರೆಹೊಗಿದ್ದಾನೆಬೆಳಕಿನ ಬೀಳ್ಕೊಡುಗೆಗೆಬೀದಿ ದೀಪಗಳು ಕಣ್ಣರಳಿಸಿವೆಮೆಲ್ಲಗೆ ಮುದುಡುತಿರುವ ಹೂದಳಗಳುಮುಂಜಾವಿನ ದುಂಬಿಯ ಸವಿಮುತ್ತ ನೆನೆದಿವೆಹಳ್ಳ, ನದಿ, ಕಡಲ ದಂಡೆಯಲಿಎಂತೆಂತದೋ ಪಟ್ಟಂಗದ ತಂಡಗಳುಸೂರ್ಯನ ಕುಂಕುಮದ ಮೈ ಬಣ್ಣವಮುಲಾಜಿಲ್ಲದೇ ನೋಡುತಿವೆ ಹಾಗೆಗೂಡಿಗೊರಟ ಹಕ್ಕಿಗಳುನಾಳೆ ಮೇಯುವ ಜಾಗವ ಕಾದಿರಿಸಿವೆಗದ್ದೆ ಬಯಲ ಮಣ್ಣ ಮೈಗಂಟಿಸಿಕೊಂಡ ಮಗುಬಚ್ಚಲ ಮನೆಯಲ್ಲಿ ಸಣ್ಣ ಗೊಣಗುವಿಕೆಯ ಸೃಷ್ಟಿಮಾಡಿದೆಈ ಕತ್ತಲನು ಗುತ್ತಿಗೆಗೆ ಪಡೆಯಬೇಕುಈ ಸಂಜೆಯೊಳಗೆ ಇರುಳು ಒಳ ನುಸುಳುವಕತ್ತಲು ಬೆಳಕು ದಾರಿ ಬದಲಿಸುವಕಂಡಲ್ಲಿ ಕಂಡಷ್ಟು ಈ ಸೃಷ್ಟಿಯ ಅಗೋಚರತೆಯನರಿಯಲು..... -ಮೋಹನ್ ಗೌಡ ಹೆಗ್ರೆ
Comments