top of page

ಸಂಜೆಯಲ್ಲಿ ಅವಳ ನೆನಪು


ಬಹುಶಃ ಈ ಆರ್ಟಿಕಲ್ ಬರೋಕೆ ಒಂದು ಮುಖ್ಯವಾದ ಕಾರಣ ಉಂಟು ಯಾಕೆ ಅಂದ್ರೆ.. ಯಾವುದೇ ಒಬ್ಬ ವ್ಯಕ್ತಿಯಾಗಲಿ ತನ್ನ ಜೀವನದಲ್ಲಿ ತನ್ನದೇ ಆದ ಕನಸುಗಳು ಆಸೆ ಆಕಾಂಕ್ಷಗಳನ್ನ ಹೊತ್ತು ತನ್ನ ಜೀವನದಲ್ಲಿ ಆ ಕನಸುಗಳಿಗೆ ಅತೀ ಹೆಚ್ಚು ಪ್ರಾಮುಖ್ಯತೆಯನ್ನ ಕೊಟ್ಟು. ಆ ವ್ಯಕ್ತಿ ಹಾಕೋ ಪರಿಶ್ರಮ ತನ್ನ ಗುರಿಯನ್ನ ತಲುಪಬೇಕು ಅನ್ನೋ ಛಲ ಇಂದು ಮಣ್ಣುಪಾಲು ಮಾಡಿದರೆ ಬಹುಶಃ ಆ ಕನಸಿಗೆ ಆ ಗುರಿಗೆ ಎನ್ ಬೆಲೆ ಸಿಗುತ್ತೆ ಅಲ್ವಾ..ಹಾಗಾದ್ರೆ ಅವಳು ಯಾರ್ ಹತ್ರ ತನ್ನ ಕನಸನ್ನ ಆ ಗುರಿಯನ್ನ ತಲುಪಬೇಕು ಅಂತ ಹೇಳ್ಕೊಬೇಕು.. ಈಗ ಜೀವನ ಹೆಂಗಾಗಿದೆ ಅಂದ್ರೆ ನೀನು ಹುಟ್ಟಿದಿಯಾ ಈಗ ಬದುಕು ಒಂದಿನ ಸಾಯ್ತಿಯ ಮಣ್ಣು ಮಾಡ್ತೀವಿ. ಅಷ್ಟೇ ಬದುಕು ನಿಮ್ಮ ಲೆಕ್ಕಕ್ಕೆ ಅಲ್ವ, ಹಾಗಾದ್ರೆ ಈ ಜೀವನ ಯಾಕೆ ಬೇಕು ಈ ತರ ನಾಲ್ಕು ಗೋಡೆಗಳ ಮಧ್ಯೆ ಬಾಳಿ ಬದುಕಬೇಕು ಅಂದ್ರೆ ಎಲ್ಲ ಆಸೆಗಳನ್ನ ಕನಸುಗಳನ್ನ ಮೂಟೆ ಕಟ್ಟಿ ಒಂದು ಮಸುಕು ತುಂಬಿರೋ ಕೋಣೆಯಲ್ಲಿ ಕೂಡಿ ಹಾಕಿದರೆ ಮುಗೀತು ಜೀವನ.ಒಂದು ದಿನ ಬರುತ್ತೆ ಮಗಳಿಗಾಗಿ ಗಂಡು ಹುಡುಕುತ್ತಾರೆ ವರ ಸಿಕ್ಕರೆ ಸಾಕು ಅವಳು ಓದೋದು ಬೇಡ, ಅವಳು ಕನಸು ಬೇಡ, ಗುರಿ ಬೇಡ ,ಏನು ಬೇಡ ಅವಳನ್ನ ಮನೆಯಿಂದ ಹೊರ ಹಾಕಿದರೆ ಸಾಕು ಈ ತಂದೆ ತಾಯಿಗೆ ಒಂದು ಒಳ್ಳೆ ಕೆಲ್ಸ ಮುಗೀತು ಅನ್ನೋ ಖುಷಿ ಅಲ್ವಾ. ನಿಮಗೆ...

ಎಲ್ಲ ಕಡೆ ನೋಡಿದ್ದೇನೆ ಕೆಲ ಕಡೆ ಕೇಳಿದ್ದೇನೆ.. ನಮಗೆ ಯಾರ್ ಸಹಾಯ ಮಾಡ್ತಾರೋ ಬಿಡ್ತರೋ ಗೊತ್ತಿಲ್ಲ ಆದ್ರೆ ನಮ್ಮ ಕನಸುಗಳಿಗೆ ಆ ಗುರಿಗೆ ನಾನು ಓದಬೇಕು ಅನ್ನೋ ಆಸೆಗೆ ನನ್ನ ಕಾಲಮೇಲೆ ನಾನು ನಿತ್ಕೊಬೇಕು ನಾನು ಒಳ್ಳೆ ಕೆಲಸ ತಗೋಬೇಕು ಅನ್ನೋ ಈ ಆಸೆಗಳಿಗೆ ಯಾರ್ ಸಹಾಯ ಮಾಡ್ತಾರೋ ಇಲ್ವೋ ಆದ್ರೆ ತಂದೆ ತಾಯಿ ಸಹಾಯ ಬೆಂಬಲ ಇದ್ದೇ ಇರುತ್ತಿತ್ತು.. ಈಗ ಎನ್ ಆಗ್ತಿದೆ ಅಂದ್ರೆ ಯಾವ ತಂದೆ ತಾಯಿ ಸಹಾಯ ಮಾಡ್ತಾರೆ ಅಂತ ಅಂದುಕೊಂಡರೆ ಈಗ ಅದೇ ತಂದೆ ತಾಯಿಯಾಗಿ ನಿಮ್ಮ ಸಹಾಯ ಮತ್ತು ನಿಮ್ಮ ಬೆಂಬಲ ಅವಳಿಗೆ ಸಿಗದೆ ಹೋದ್ರೆ ಅವಳು ಯಾರ್ ಹತ್ರ ಹೇಳ್ಕೊಬೇಕು ನೀವೇ ಹೇಳಿ.....

ಅದೊಂದು ದಿನ ಅವಳು ನನ್ ಜೊತೆ ಮೆಸೇಜ್ ಮಾಡುವಾಗ ಅವಳ ಮೆಸೇಜ್ ನೋಡಿ ನನ್ನ ಕಣ್ಣಲ್ಲಿ ನೀರು ತುಂಬಿ ಬಂತು.. ಅವತ್ತು ನನಗೆ ಅನಿಸ್ತು ಇಷ್ಟೇನಾ ಜೀವನಾ ಇನ್ನೂ ಮದುವೆ ಮಾಡಿ ಗಂಡನ ಮನೆಗೆ ಹೋಗಿ ಪಾತ್ರೆ ತೊಳಿಯೋದಕ್ಕೆ ಸಂಸಾರ ಮಾಡೋದಕ್ಕೆ ನಾವು ಅಷ್ಟು ಓದಬೇಕಿತ್ತ..ಅವಳು ಮಾಡಿದ್ದ ಮೆಸೇಜ್ ಇಂದು ಕೂಡ ಕಣ್ಣಿಗೆ ಕಟ್ಟಿದಂತಿದೆ. ಅವಳು ಮಾಡಿದ್ದ ಆ ಮೆಸೇಜ್ ಇಂದು ನನ್ನ ಬರವಣಿಗೆಯಲ್ಲಿ" ನನ್ನ ಹಣೆಬರಹ ಸರಿ ಇಲ್ಲ ಸಪೋರ್ಟ್ ಆಗಿ ಇರಬೇಕಾಗಿದ್ದ ನನ್ನ ಹೆತ್ತವರೇ ಸೆಲ್ಫಿಷ್ ತರ ಆಡ್ತಾರೆ ಕಣೆ..." ಈ ಒಂದು ಮಾತು ಮನಸ್ಸಿಗೆ ತುಂಬಾ ನೋವು ಉಂಟು ಮಾಡ್ತು.. ಈ ಆರ್ಟಿಕಲ್ ಓದಿದ ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳು ಅಥವಾ ಓದುವ ಪ್ರತಿಭೆಗಳಿಗೆ ನಿಮ್ಮ ಸಹಾಯ ಬಹಳ ಮುಖ್ಯ ಯಾಕೆ ಅಂದ್ರೆ ಈ ಹಿಂದೆ ನಾನು ಬರೆದ "ಮದುವೆಯೇ ಜೀವನವಲ್ಲ" ಆರ್ಟಿಕಲ್ ಅಲ್ಲಿ ಹೇಳಿದ್ದೆ ' ಈ ಮದುವೆನೇ ಜೀವನ ಅಂತ ಅಂದುಕೊಂಡರೆ ತಪ್ಪಾಗುತ್ತೆ, ಯಾಕೆ ಅಂದರೆ ಅದನ್ನು ಮೀರಿ ಒಂದು ಬದುಕು ಅನ್ನೋ ಜಗತ್ತು ಇದೆ, ಆ ಜಗತ್ತನ್ನ ಮೀರಿಸಬೇಕು ಅನ್ನೋ ಛಲ ಇದೆ. ಆ ಛಲ ಅನ್ನೋ ಕನಸನ್ನ ನನಸು ಮಾಡಬೇಕು ಅಂತ ಅವಳ ಹಂಬಲ ಇರುವಾಗ, ಆ ಚಲವನ್ನ, ಕನಸನ್ನ, ನನಸು ಮಾಡಬೇಕು ಅನ್ನೋ ಆಸೆ ಅವಳ ಹುದುಗಿದ ಮನದಲ್ಲಿರುವಾಗ, ಈ ಮದುವೆ ಅನ್ನೋ ಮೂರು ಅಕ್ಷರಗಳ ಜಂಜಾಟವೆಂಬ, ಈ ಸಂಸಾರದ ತೂಗುಯ್ಯಾಲೆಯ ಆಡಂಬರದಿಂದ, ಅವಳನ್ನ ಸ್ವಲ್ಪ ದೂರ ಮಾಡಿದರೆ, ಅವಳು ಅವಳದ್ದೇ ಜೀವನವನ್ನ, ಆ ಕನಸನ್ನ ನನಸು ಮಾಡಲು ಹಿಂದೇಟು ಹಾಕಲು ಹಿಂಜರಿಯುವುದಿಲ್ಲ ಅಲ್ಲವೇ....' ಈಗ ಒಂದು ಹೆಣ್ಣು ಈ ಸಮಾಜದಲ್ಲಿ ಒಳ್ಳೆ ಹೆಸರುಗಳಿಸಬೇಕು ಅಂತ ಅವಳೇ ಮನಸ್ಸು ಮಾಡಿರಬೇಕಾದ್ರೆ ತಂದೆಯಾಗಿ ತಾಯಿಯಾಗಿ ನಿಮ್ಮ ಸಪೋರ್ಟ್ ಇಲ್ಲ ಅಂದ್ರೆ ನಿಮ್ಮ ಎದುರು ನಿತ್ತು ಅವಳು ಹೇಗೆ ತಾನೇ ಕೇಳುತ್ತಾಳೆ ಹೇಳಿ.. ಬಹುಶಃ ಅವಳು ಕೇಳದೆ ನಿಮ್ಮ ಸಪೋರ್ಟ್ ಅವಳಿಗೆ ಇದ್ರೆ ಅವಳ ಕನಸನ್ನ ನನಸು ಮಾಡ್ಕೊಂಡು ಈ ಸಮಾಜದಲ್ಲಿ ಕುಷಿ ಇಂದ ಇರಲು ಸಾಧ್ಯ...

ಒಂದು ಹೆಣ್ಣು ಈ ಗಂಡು ಸಮಾಜದಲ್ಲಿ ಸರಿ ಸಮಾನವಾಗಿ ದೈರ್ಯದಿಂದ ಮುನ್ನುಗ್ಗಿ ಹೋಗುವಾಗ ಹೆತ್ತವರಾದ ನಾವು ಅವರ ಬೆಂಬಲಕ್ಕೆ ನಿಲ್ಲಬೇಕು.

ನನ್ನ ಮಗಳು ಅಕ್ಕಮಹಾದೇವಿ.... ಒನಕೆ ಓಬವ್ವ... ಕಿತ್ತೂರು ರಾಣಿ ಚೆನ್ನಮ್ಮ..... ಕಿರಣ್ ಬೇಡಿ. ತರ ಆಗದೆ ಇದ್ದರೂ ಪರವಾಗಿಲ್ಲ.... ಈ ಸಮಾಜದಲ್ಲಿ ತಲೆ ಎತ್ತಿ ತನ್ನ ಬದುಕು ಕಟ್ಟಿಕೊಳ್ಳಲಿ ಅನ್ನೋ ದೈರ್ಯ ತುಂಬಬೇಕು..... ಅದನ್ನ ಬಿಟ್ಟು..... ಮುಂದೆ ನೀನು ದುಡಿದು ನಮ್ಮನ್ನ ಸಾಕೋದು ಅಷ್ಟೇ ಇದೆ..... ಅಂತ ಹೇಳೋ ಒಂದು ಮಾತಿಗೆ ಅವಳನ್ನ ಯಾಕೆ ಓದಿಸಬೇಕು....? ಅಲ್ವಾ.

                                    ದೀಪಾ ಜಿ.ಎಸ್

15 views0 comments

Comments


bottom of page