ನೆಂಟನಲ್ಲ, ಇಷ್ಟನಲ್ಲ
ಬಂಧುವಲ್ಲ , ಬಳಗವಲ್ಲ
ಮಿತ್ರನಲ್ಲ, ಪರಿಚಿತನಲ್ಲ
ನಿನ್ನ ನಾ ನೋಡಿದ್ದು
ಚಿತ್ರದಲ್ಲಿ ಮಾತ್ರ.
ಆದರೂ
ನೀನು ಹೀಗೆ ಹೋಗುತ್ತ
ತಡೆಯಲಾಗದ
ನೋವು ಕೊಟ್ಟುಬಿಟ್ಟೆ
ಇನ್ನಷ್ಟು ಕಾಲ
ಬದುಕಿ ಬಾಳಿ
ಹೆಸರು ಗಳಿಸಿ
ಹೋಗಬೇಕಾದ
ಜೀವ ನಿನ್ನದು
ಅಕಾಲ ಮೃತ್ಯು
ನಿನ್ನನ್ನು ಈ ಜಗದಿಂದ
ದೂರ ಒಯ್ದುಬಿಟ್ಟಿತು
ನೀನು "ಸಂಚಾರಿವಿಜಯ" ಹೌದು
ಆದರೆ
ಪರಲೋಕ ಸಂಚಾರಕ್ಕೆ
ಇದು ಯೋಗ್ಯವಾದ
ಸಮಯವಾಗಿರಲಿಲ್ಲ.
ಹೋದೆ,
ಹೋಗುವಾಗಲೂ
ನಾಲ್ಕು ಜನರಿಗೆ
ಬದುಕ ಕೊಟ್ಟೇ ಹೊದೆ
ಅದು ಸಾರ್ಥಕ ಬದುಕು!
- ಎಲ್ಲೆಸ್

Comments