top of page

ಸಮಾಗಮ

ಶರಧಿಯ ಅಬ್ಬರಕೆ

ನದಿ ಬೆಚ್ಚುವುದಿಲ್ಲ

ಶಾಂತನಾಗುತ್ತಾನೆ ಸಮುದ್ರ ರಾಜ

ನದಿಗಳ ಮಹಾ‌ ಮಿಲನಕೆ

ಅಬ್ಬರಿಸಿ ಬೊಬ್ಬಿರಿಯುತ್ತವೆ ಜೊತೆಯಾಗಿ

ಆಮೋದ ಪ್ರಮೋದಕೆ|


ಪತಿಯ ರುದ್ರ ಕೋಪಕೆ

ಅಂಜುವುದಿಲ್ಲ ಪತ್ನಿ

ಮತ್ತೆ ಮತ್ತೆ ಕರಗುತ್ತಾನೆ

ಸುಖವನರಸಿ ಮಡಿಲು ಸೇರುತ್ತಾನೆ

ಅವಳ ಪ್ರೇಮಮಯಿ ತಾಯ್ತನಕೆ|


ಆಗಾಗ ಮೋಡದ ಮರೆಯಲ್ಲಿ

ಅವಿತುಕೊಳ್ಳುವ ಸೂರ್ಯ ದೇವನ

ಶಪಿಸುವುದಿಲ್ಲ ಭೂಮ್ತಾಯಿ

ಗೊತ್ತು ಅವಳಿಗೂ ಬಂದೇ ಬರುವ

ಇಳೆಯ ಮಕ್ಕಳ ನೋಡಲೆಂದು

ಧರೆಯ ದಾಹ ತಣಿಸಲೆಂದು|

ಪ್ರಕೃತಿ ಬಿಟ್ಟು ಪುರುಷನುಂಟೆ

ಬಿಟ್ಟರೆ ಸಂಸಾರ ಸಾಗುವುದುಂಟೆ

ಸರಸ ವಿರಸ ಜಗದ ನಿಯಮ

ಎಲ್ಲಕೂ ಉಂಟು ರಾಮಬಾಣ

ಪರಸ್ಪರ ಸಮಾಗಮ|


ಸುಧಾ ಹಡಿನಬಾಳ

10 views0 comments

Comments


bottom of page