ಶ್ವಾನ (ನಾಯಿ)

ತಡೆಯಲಾಗುತ್ತಿಲ್ಲ ಬಿಡಾಡಿ ನಾಯಿಗಳ ಕಾಟ!

ಹಗಲು - ರಾತ್ರಿಯೆನ್ನದೆ ಅವುಗಳ ಬೊಗಳಾಟ!!


ನಡಿಗೆಗೆ ದೊಣ್ಣೆ ಜೊತೆಯಿರಲೇ ಬೇಕು!

ಹಿಂಬಾಲಿಸಿ ಬರುವುದ ತಡೆಯಲೇ ಬೇಕು!


ಅಡ್ಡಡ್ಡ ಬರುವುದು ವಾಹನಗಳ ಎದುರು!

ತೊಡಕಾಗುವುದು ಸಮತೋಲನ ತರಲು!


ಹೆಣಗಾಡಬೇಕು ಅಪಘಾತ ತಪ್ಪಿಸಲು!

ಬಡಪಾಯಿ ಶ್ವಾನಗಳ ಜೀವ ಉಳಿಸಲು!


ಸೂಕ್ತ ಕ್ರಮಕ್ಕಾಗಿ ಎಲ್ಲರ ಅಹವಾಲು!

ಯಾರಿಗೆ ಹೇಳುವುದು ನಮ್ಮ ಈ ಅಳಲು!!


ಸಾವಿತ್ರಿ ಶಾಸ್ತ್ರಿ, ಶಿರಸಿ

13 views0 comments