ಸಕಲಶಾಸ್ತ್ರ - ವೇದ ಪರಿಣಿತ
ಹರನ ರೂಪ - ದೇವ ಸ್ವರೂಪ
ನಮೋ ನಮೋ!
ಆದಿ ಶಂಕರ -ಆಚಾರ್ಯ ಶಂಕರ
ಅದ್ವೈತ ವೇದಾಂತಿಗೆ ನಮೋ ನಮೋ!!
ಸನಾತನ ಸಂಸ್ಕೃತಿಯ ಎಲ್ಲೆಡೆ ಸಾರಿದ
ಧ್ಯಾನ ಚಿಂತಕ ನಮೋ ನಮೋ!
ಆಧ್ಯಾತ್ಮಿಕ ಪರಂಪರೆಯ ಮಹತ್ವವ ತಿಳಿಸಿದ
ಸದ್ಗುರು ಶಂಕರ ನಮೋ ನಮೋ!!
ಹಿಂದೂ ಧರ್ಮವ ಪುನರುಜ್ಜೀವನ ಗೊಳಿಸಿದ!
ಸಾಧಕ ಗುರುವೇ ನಮೋ ನಮೋ!!
ಅಲ್ಪ ವಯಸ್ಸಲೇ ಅತಿಶಯ ಸಾಧನೆ
ಕೃತಿಗಳ ನೀಡಿದ ಸಂತ ಶಂಕರ ನಮೋ ನಮೋ!!
ಭಕ್ತಿಪೂರ್ವಕ ಆರಾಧಿಸುತಾ
ಚರಣಕೆ ನಮಿಸುವೆ ನಮೋ ನಮೋ!!
ಸಾವಿತ್ರಿ ಶಾಸ್ತ್ರಿ, ಶಿರಸಿ
Comments