ಯಾರ ಬರವಿಗಾಗಿ
ಕಾಯುತಿರುವೆ ಅಜ್ಜಿ?
ನೀನು ಹೊತ್ತು ಹೆತ್ತು
ಯಾರ್ಯಾರದೋ ಮನೆಗಳಲಿ
ಪಾತ್ರೆ ಬಟ್ಟೆಗಳ ತೊಳೆದು
ಬೆವರು ರಕ್ತ ಸುರಿಸಿ
ನಾಲ್ಕು ಕಾಸು ಗಳಿಸಿ
ಮಗನ ಓದಿಸಿದೆ,
ಬೆಳೆಸಿದೆ,
ಕೆಲಸಕ್ಕೆ ಹಚ್ಚಿ
ನೆಮ್ಮದಿಯ
ನಿಟ್ಟುಸಿರುಬಿಟ್ಟೆ
ಮುದಿತನದಲ್ಲಿ ನಿನ್ನ
ಯೋಗಕ್ಷೇಮ
ನೋಡಿಕೊಳ್ಳುತ್ತಾನೆ ,
ಏನೂ ಕಷ್ಟವಾಗದಂತೆ
ಸಾಕಿಸಲಹುತ್ತಾನೆಂಬ
ಕನಸು ಕಂಡೆ,
ಶಬರಿ ರಾಮನ ಕಾಯ್ದಂತೆ
ಕಾದು ಕುಳಿತೆ
ಅಲ್ಲವೇ ತಾಯಿ?
*
ನಿನ್ನ ಮಗ ಕೊನೆಗೂ
ಬರಲೇ ಇಲ್ಲ,
ಬರಲು ಅವನೇನು ಶ್ರೀರಾಮನೇ?
- ಎಲ್ಲೆಸ್
Comments