ಏಳನೆತ್ತಿ ದಾಟಿಲ್ಲ
ಹೆಸರಾಂತ ಪುರೋಹಿತ
ಕೂಲಿ ಮಾಡಿ ಕುಡಿದು ಮತ್ತೇರುವವ
ಮಹಾ ಮಾಟಗಾರ
ಖಾಸಗಿ ಸಂಬಳ ಸಾಲದವ
ಇನ್ನೊಬ್ಬರ ಭವಿಷ್ಯ ಹೇಳುವವ
ಹೆಬ್ಬೆಟ್ಟು ಒತ್ತುವವ ಕುಂತಲ್ಲೆ
ಜಾತಕ ಜಾಲಾಡಿ ಬಿಡುವವ |
ಸ್ವಯಂ ಘೋಷಿತ ದೇವ ಮಾನವರನೇಕರು
ಕಂಬಿ ಹಿಂದೆ ದಿನ ಎಣಿಸುತಿಹರು
ಮಹಾ ಸತಿಗಳೆಲ್ಲಾ
ಮಾಸ್ತಿ ಕಲ್ಲುಗಳಾಗಿ
ಮಾಸ್ತಿ ಕಲ್ಲುಗಳೆಲ್ಲಾ
ಮಾಸ್ತಿ ಗುಡಿಗಳಾಗಿ
ಅಲ್ಲೊಬ್ಬ ಪೂಜಾರಿ
ಮುಂದೊಂದು ಕಾಣಿಕೆ ಡಬ್ಬ
ಪರ್ವಾಗಿಲ್ಲ ಎಲ್ಲೆಲ್ಲೂ ವ್ಯವಹಾರ ಜೋರು
ವರ್ಷ ಕಳೆವುದರೊಳಗೆ
ಮನೆ ಮುಂದೆ ಕಾರು |
ಸಾಕ್ಷರತೆಯಲ್ಲೇನೊ ಏರಿಕೆ
ಮೌಢ್ಯತೆಯಲ್ಲಿಲ್ಲ ಇಳಿಕೆ
ಹಲವರಿಗೆ ಸಖತ್ ಗಳಿಕೆ
ಬರವಿಲ್ಲ ಬೌದ್ಧಿಕ ದಾರಿದ್ರ್ಯಕೆ |

ಸುಧಾ ಭಂಡಾರಿ
ಹೊನ್ನಾವರ, ಉತ್ತರ ಕನ್ನಡ
೯೪೮೧೧೧೧೧೯೩