top of page

ವೃದ್ಧಾಶ್ರಮ ಜೀವನ

ಆ ಮುದುಕಿಯ ನೋಡಿದರೆ 

ಜೀವನವೆ ಸಾಕುಏನು ಮಾಡುವಳು ಪಾಪ  ಇನ್ನೂ ಆಯುಷ್ಯ ಇರಬೇಕು ಕಿವಿ ಕೇಳುವುದಿಲ್ಲ ಬಾಯಿ ಮುಚ್ಚುವವಳಲ್ಲ ಅವರಿಗೆ ಬೇಕಿಲ್ಲ ಇವಳೊಂದಿಗೆ ಮಾತು 

ಕೈ- ಕಾಲು ಗಟ್ಟಿಯಿದ್ದಾಗ  ಮಾಡಿದ್ದಾಳೆ ಜಪತಪ ಅದರೂ ಆ ದೇವರಿಗಿಲ್ಲ  ಇವಳ ಮೇಲೆ ಕರುಣೆ ಪಾಪ ಗೋಳು ಕೇಳುವವರಿಲ್ಲ ಆರೋಗ್ಯ ವಿಚಾರಿಸುವವರಿಲ್ಲ ಹಾಕುವ ಅನ್ನಕ  ಹಿಡಿಶಾಪ ಬೈಗುಳ ಗುಬ್ಬಚ್ಚಿಯಂತೆ ಸಾಕಿದ್ದಳು ಒಬ್ಬನೆ ಮಗನ ಈಗ ಅವನಿಗಿಲ್ಲ ತಾಯಿಯೆಡೆ ಗಮನ ಇದಕ್ಕಿಂತಲೂ ಲೇಸು ವೃದ್ಧಾಶ್ರಮ ಜೀವನ -ಸುಧಾ ಹಡಿನಬಾಳ


ಜೀವನೋತ್ಸಾಹ ಮತ್ತು ಕ್ರಿಯಾ ಶೀಲತೆಗೆ ಹೆಸರಾಗಿರುವ ಸುಧಾ ಭಂಡಾರಿ.ಹೊನ್ನಾವರ ತಾಲೂಕು ಸುಬ್ರಹ್ಮಣ್ಯದವರು; ಪ್ರಸ್ತುತ ಹಡಿನಬಾಳ ನಿವಾಸಿ. ವೃತ್ತಿಯಿಂದ ಶಿಕ್ಷಕಿ. ಪ್ರವೃತ್ತಿಯಿಂದ ಲೇಖಕಿ. ನಾಗರಿಕ ,ಕರಾವಳಿ ಮುಂಜಾವು,ಸಂಪ್ರಭಾ, ಜೀವನ ಶಿಕ್ಷಣ, ಮತ್ತು ಕೆಲ ಮಕ್ಕಳ ಪತ್ರಿಕೆಗಳಲ್ಲಿ ಅಂಕಣ ಬರಹ, ಲೇಖನಗಳನ್ನು ಬರೆಯುತ್ತಿದ್ದಾರೆ. ಇವರ ಮೂರು ಕೃತಿಗಳು ಪ್ರಕಟಗೊಂಡಿದ್ದು ಇನ್ನೆರಡು ಪ್ರಕಟಣೆಯ ಹಂತದಲ್ಲಿವೆ.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ.

40 views1 comment
bottom of page