top of page

ವಂದೇ ಗುರು ಪರಂಪರಾಮ್ -ಗ್ರಂಥ ದರ್ಶನ

ಡಾ.ಲೀಲಾ ಬಸವರಾಜು – ಆಧ್ಯಾತ್ಮ ಚಿಂತಕಿ ,

ಬೆಂಗಳೂರು - 87628 35104


ಪುಸ್ತಕದ ವಿವರ

‘ವಂದೇ ಗುರು ಪರಂಪರಾಮ್’ ಲೇಖಕರು : ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪ್ರಕಾಶಕರು : ಪ್ರಣವ ಮೀಡಿಯಾ ಹೌಸ್ ಪ್ರಕಾಶನ , ಬೆಂಗಳೂರು – 97393 69621

ಪುಟಗಳು : 184 ಬೆಲೆ : ರೂ 180/- ಆಕಾರ : ಡೆಮ್ಮಿ 1/8ಪ್ರತಿಯೊಬ್ಬರ ಜೀವನದಲ್ಲಿಯೂ ಗುರುವಿನ ಸ್ಥಾನ ಅನನ್ಯ. ಅದು ತಾರ್ಕಿಕ ಶಿಕ್ಷಣ ಆಗಲಿ, ಪಾರಮಾರ್ಥಿಕ ಶಿಕ್ಷಣವಿರಲಿ ಗುರು ಇರಲೇಬೇಕು. ನಮ್ಮ ಎಲ್ಲ ಅರಿವಿನ ಹಿಂದೆ ಒಂದು ಗುರುವಿನ ಕೃಪೆ ಇದ್ದೆ ಇರುತ್ತದೆ. ನಾವು ಯಾವ ಕೌಶಲ್ಯ, ಜ್ಞಾನ, ವಿದ್ಯೆ ಸಿದ್ಧಿಗಳನ್ನು ಗಳಿಸಿದ್ದರೂ ಅದು ಗುರುವಿನ ಕೃಪೆಯಿಂದ ಮಾತ್ರ ಸಾಧ್ಯ. ಗುರುವಿನ ಮಾರ್ಗದರ್ಶನವಿಲ್ಲದೆ ವಿದ್ಯೆ ಪೂರ್ಣವಾಗುವುದಿಲ್ಲ ಹೀಗೆ ನಮ್ಮ ಭರತ ಭೂಮಿಯಲ್ಲಿ ಆಧ್ಯಾತ್ಮಿಕ ವಿದ್ಯೆಯ ಪ್ರಾಪ್ತಿಗೆ ಅನೇಕ ಗುರುಪರಂಪರೆ ನೆಲೆಗೊಂಡಿದೆ.

ನಮ್ಮ ಭಾರತೀಯ ಸಂಸ್ಕೃತಿಯ ಜ್ಞಾನಭಂಡಾರವು ಅಪಾರ ವಿಫುಲ ಸಾಹಿತ್ಯ ಪರಂಪರೆಯಿಂದ ತುಂಬಿ ತುಳುಕುತ್ತಿದೆ. ಸಕಲ ಜೀವರಾಶಿಗಳ ಕ್ಷೇಮವೊಂದೇ ಈ ಎಲ್ಲ ಧರ್ಮ ಸಾಹಿತ್ಯದ ಮೂಲೋದ್ದೇಶ. ಸುಂದರ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕೆ ತಮ್ಮ ಅಪೂರ್ವ ಲೇಖನಿಯಿಂದ ಸಾರಸ್ವತ ಲೋಕದಲ್ಲಿ ಮನ್ನಣೆಗಳಿರುವ ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರ ಪ್ರಸ್ತುತ ಕೃತಿ `ವಂದೇ ಗುರು ಪರಂಪರಾಮ್’ನಲ್ಲಿ ಗುರುತತ್ತ್ವದ, ಮಹಿಮೆಯ ಸಂಗತಿಗಳು ಆಕೃತಿಗೊಂಡು ನೆಲೆನಿಂತಿವೆ.


ಭಾಷಾಸು ಮುಖ್ಯ ಮಧುರಾ ದಿವ್ಯಾಗೀರ್ವಾಣಭಾರತೀ | ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಂ|


ಸುಭಾಷಿತ ರತ್ನಬಾಂಢಾಗಾರ ಸಂಕಲನ ಗ್ರಂಥದ ಒಂದು ಮಾತಿದು. ಇದರಂತೆ ಭಾಷೆಗಳಲ್ಲಿ ಮಧುರ, ಮುಖ್ಯ ಆದದ್ದು ಸಂಸ್ಕೃತಭಾಷೆ. ಅದರಿಂದ ಆ ಭಾಷೆಗೂ ಕಾವ್ಯ ಮಧುರ ಅದ್ದಕ್ಕಿಂತಲೂ ಸುಭಾಷಿತ ಮಧುರ. ಇಲ್ಲಿ ಸುಭಾಷಿತ ಎಂದರೆ, ಒಳ್ಳೆಯ ಮಾತು ಮೌಲ್ಯವುಳ್ಳದ್ದು, ವ್ಯಕ್ತಿಹಿತ- ಒಳಗೊಂಡಿದ್ದು, ಇದು ಸಂಸ್ಕೃತಭಾಷೆಗೆ ಅನ್ವಯಿಸುವಂತೆಯೇ ತರುಣ ವಿದ್ವಾಂಸ ಬರಹದ ಕಲೆಯನ್ನು ರೂಢಿಸಿಕೊಂಡು ಬೆಳೆಯುತ್ತಿರುವ ಸಹೃದಯಿ ಡಾ. ಗುರುರಾಜ ಪೋಶೆಟ್ಟಿಹಳ್ಳಿಯವರಿಗೆ ಅನ್ವಯಿಸುತ್ತದೆ.


ಗುರು ಮಹಿಮೆಯನ್ನು ಸಕಲ ವೇದಶಾಸ್ತ್ರಗಳು, ಹರಿದಾಸರ ನುಡಿನಮನದಲ್ಲಿ ಗುರುಕಾರುಣ್ಯವನ್ನು ಬಹು ವಿಧವಾಗಿ ವರ್ಣಿಸಲಾಗಿದೆ. ಸಂಚಿತ, ಆಗಾಮಿ, ಪ್ರಾರಬ್ದ ಕರ್ಮಗಳ ಶಮನಕ್ಕೆ ನಾವು ಅನುಸರಿಸಬೇಕಾದ ಮಾರ್ಗಗುರುಗಳಿಗೆ ಶರಣರಾಗುವುದು. ಅದರಿಂದಲೇ ನಮಗೆ ಗೆಲುವು.


ಗುರು ಕೃಪೆಯಾಗದ ನರಜನ್ಮ ವ್ಯರ್ಥ|

ಅರಿತು ನೀ ಸಾಧಿಸು ಘನಪರಮಾರ್ಥ


ಎಂಬುದನ್ನು ಮನಗಾಣಬೇಕಾದವರು ಈ ಕೃತಿಯನ್ನು ಅವಶ್ಯ ಓದಲೇಬೇಕು. ಸರಳ ನಿರೂಪಣೆ, ಸಹಜವಾಗಿ ಓದಿಸಿಕೊಂಡು ಹೋಗುವ ಧಾಟಿ, ಅಷ್ಟೇ ಗಂಭೀರವಾಗಿ ವಿಷಯ ಸಂವಹನಗೊಳಿಸುವ ಶೈಲಿಯಿಂದ ಶ್ರೀಮಂತವಾಗಿದೆ.


- ಡಾ.ಲೀಲಾ ಬಸವರಾಜು – ಆಧ್ಯಾತ್ಮ ಚಿಂತಕಿ ,

ಬೆಂಗಳೂರು - 87628 35104
15 views0 comments

Comments


bottom of page