top of page

ವೇದನೆ - ನಿವೇದನೆ

ಅಚ್ಚ ಅನುಭವರಾಶಿ ಬಿಚ್ಚಿಬಯಲೊಳಗಿಟ್ಟೆ

ಮುಚರಚುಮರೆಯಿಲ್ಲ ಇದರಲ್ಲಿ‌! ನೀವಿದನು

ಹುಚರಚುತನವೆಂದ್ರು ನಡದೀತು !


ಕಡಲ ನೀರನು ತಂದು ಕೊಡದಲ್ಲಿ ತುಂಬಿದಡೆ

ಹಿಡಿದೀತು ಎಷ್ಟು ಒಡಲಲ್ಲಿ ! ಅದರಂತೆ

ಮೂಡಿ ನಿಂತನು ಅಕ್ಷರದಿ 

ಕನ್ನಡಿಯ ಹರಳಿನಲಿ ಕಂಡ ಕನಕಾಚಲವು

ಕಂಡಷ್ಟೆ ಎಂದು ಹೇಳುವುದು ! ಸರಿಯೇನು

ಖಂಡ ದೃಷ್ಟಿ ಇದು ಬಿಂಬಕ್ಕೆ !


ಗಾಳಿ ಧೂಳಿಯ ಸುಳಿಗೆ ಕಾಲಸಪ್ಪಳದುಲಿಗೆ

ಕಾಳುಕಡಿ ಆಯ್ವ ಗುಬ್ಬಿಯ ! ಚಿಲಿಪಿಲಿಗೆ

ಆಲಿಸುವೆ ನಿನ್ನ ಬರುವನ್ನು !

ಮಧುರ ನಿನ್ನು ನುಡಿಯು ಮಧುರ ನಿನ್ನಯ ನಡೆಯು

ಮಧುರ ನಿನ ಮುನಿಸು ಸೆಡವುಗಳು ! ನನನಲ್ಲ

ಮಧುರ ನಿನ ಕನಸು ನನಗೆಂದು !


ಮಲುದಿನದ ಕಾಲ್ತೊಡಕ ಕಳಚಿ ನಾ ಕಳಕೊಂಡೆ

ತಲೆಯ ಮೇಲಿನ ಗುಡ್ಡವು ! ಕರಗುತ್ತ

ಕೆಳಗೆ ಇಳಿಯಿತು ತಾನಾಗಿ !

ನಿಲ್ಲು ನಿಲ್ಲೆನ್ನುತ್ತ ಚಲ್ವ ನವಿಲನು ನಿಲಿಸಿ

ಎಲ್ಲ ರುಇಪಿಸಿದ ನಲ್ಲನು ! ಎಲ್ಲೆಂದು

ಗುಲ್ಲು ಮಾಡದಲೆ ಕೇಳಿದನು !

ಆರದಾರತಿ ಹಿಡಿದು ಹಾರುವ ಹೊನ್ನಿಯನು

ಯಾರಿಗೆ ಒಯ್ವೆ ಹೇಳೆಂದು ! ಕೇಳಿದ

ಮೀರಿದ ನಲ್ಲೆ ಭಾವದಲಿ !

ಮಾಣಿಕದ ಮೂಗಿನ ಜಾಣಗಿಣಿರಾಮನ್ನ

ಕಾಣದಡಗಿರುವ ದೇವನು ! ಎಲ್ಲಿಹನು

ಧ್ಯಾನಿಸಿ ಹೇಳೆಂದು ಕೇಳಿದನು !

ಇಲ್ಲಿಯೂ ಮುಗಿಯದ ಅಲ್ಲಿಯೂ ಮುಗಿಯದ

ಎಲ್ಲಿಯೂ ಅಂತ್ಯವಿಲ್ಲದ ! ಆಗಸಕೆ

ಎಲ್ಲಿ ನನ್ನರಸ ಎಂದವನು !

ಎಂದಿಗೂ ಇದ್ದವಮು ಇಂದಿಗೂ ಇರುವವನು

ಹಿಂದುಮುಂದರಿವ ಕಾಲನಿಗೆ ! ಕೇಳಿದನು

ಇಂದುಧರನೆಲ್ಲಿ ಅಡಗಿಹನು !

ಬರಲಾರನೆನ್ನುವರು ಬರುವನೆನುವರು ಕೆಲರು 

ಅನು ಹೇಳುವರು ಹಲವರು ! ಹಣಿಕಿ ಹಾಕಿ

ಗುಣಿಸಿ ಗುಣುಗುವರು ಇನ್ಕೆಲರು !

ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತು

ಬಂತು ಎಂಬುದು ಇದ್ದದ್ದು ! ಹೊಳೆಬಂತು

ಬಂತು ತುಂಬಿ ತಾ ತುಳುಕುತ್ತ !


-ಚಂದ್ರಗೌಡ ಕುಲಕರ್ಣಿ.

ಚಂದ್ರ ಗೌಡ ಕುಲಕರ್ಣಿ ಕವಿ,ವಿಮರ್ಶಕ,ಸಂಶೋಧಕ,ಮಕ್ಕಳ ಸಾಹಿತಿ,ವಿಶ್ರಾಂತ ಕನ್ನಡ ಪ್ರಾಧ್ಯಾಪಕ ,ಸ್ನೇಹ ಜೀವಿ.ಧಾರವಾಡ ಜಿಲ್ಲೆಯ ಕಡದಳ್ಳಿಯ ಚಂದ್ರಗೌಡ ಕುಲಕರ್ಣಿ ಅವರದು ಅಪ್ಪಟ ಜಾನಪದ  ಪ್ರತಿಭೆ. ಒಗಟ ಬಿಡಿಸೋಣ ಜಾಣ,ಯಾರಿಗೂ ಇದನ ಹೇಳಬಾರದು,ಟೂ ಟೂ ಬಿಟ್ಟೇನಿ ಇದು ಅವರ ಪ್ರಕಟಿತ ಕೃತಿಗಳು.ನಾಲ್ಕು ನೂರುಕಂದ ಪದ್ಯಗಳನ್ನು ಬರೆದಿರುವ ಅವರು ಮಹಾಭಾರತದ ಕಥನವನ್ನು ಮಕ್ಕಳಿಗೆ ಕವನದಲ್ಲಿ ಕಟ್ಟಿಕೊಡುತ್ತಿದ್ದಾರೆ.ಅವರ ಕವಿತೆ ನಿಮ್ಮ ಓದಿಗಾಗಿ.ಸಂಪಾದಕ.

73 views0 comments

Comments


bottom of page