top of page

'ವಸಂತೋಕ್ತಿ' ಡಾ.ವಸಂತ ಕುಮಾರ ಪೆರ್ಲ ಅವರ ಅಂಕಣ


ನಮ್ಮ ನಿಮ್ಮೆಲ್ಲರ*‘ಆಲೋಚನೆ.ಕಾಮ್’* ವೆಬ್ ಪತ್ರಿಕೆಗೆ ಕವಿ,ವಿಮರ್ಶಕ,ಅಂಕಣಕಾರ,ಸಂಶೋಧಕ,ಪತ್ರಕರ್ತ,ಸಂಸ್ಕೃತಿ ಚಿಂತಕ,ಅನುವಾದಕರಾಗಿರುವ .ಡಾ.ವಸಂತಕುಮಾರ ಪೆರ್ಲ ಅವರು ಪ್ರತೀವಾರ ಸಾಹಿತ್ಯ ಸಂಸ್ಕೃತಿ ಮತ್ತು ಸಾಮಾಜಿಕ ವಸ್ತುವಿಷಯಗಳ ಕುರಿತ *‘ವಸಂತೋಕ್ತಿ’* ಎಂಬ ಅಂಕಣವನ್ನು ಈ ವಾರದಿಂದ ಬರೆಯಲು ಒಪ್ಪಿಕೊಂಡಿದ್ದಾರೆ.

ಕಾವ್ಯ ಕಥೆ ಕಾದಂಬರಿ ವಿಮರ್ಶೆ ಸಂಶೋಧನೆ ಸಂಪಾದನೆ ವ್ಯಕ್ತಿಚಿತ್ರ ಅಂಕಣ ಚಾರಣ ಪ್ರವಾಸ ಅನುವಾದ ಮುಂತಾಗಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಐವತ್ತಕ್ಕಿಂತ ಹೆಚ್ಚು ಕೃತಿರಚನೆ ಮಾಡಿರುವ

ಡಾ. ವಸಂತಕುಮಾರ ಪೆರ್ಲ ಅವರು ಸಾಹಿತ್ಯ ಮಾತ್ರವೇ ಅಲ್ಲದೆ ಸಮೂಹ ಮಾಧ್ಯಮ, ರಂಗಭೂಮಿ, ಸಿನಿಮಾ, ಸಂಘಟನೆ, ಸಮಾಜಸೇವೆ ಮೊದಲಾದ ಇತರ ಕ್ಷೇತ್ರಗಳಲ್ಲಿಯೂ ತನ್ನನ್ನು ಕ್ರಿಯಾಶೀಲವಾಗಿ ತೊಡಗಿಸಿಕೊಂಡವರು. ಉತ್ತಮ ವಾಗ್ಮಿಗಳೂ ಹೌದು. ಭಾಷೆ, ವ್ಯಾಕರಣ, ಕಾವ್ಯಮೀಮಾಂಸೆ, ಸಂಸ್ಕೃತಿ ಅಧ್ಯಯನ ಮೊದಲಾದವು ಡಾ. ಪೆರ್ಲರ ಆಸಕ್ತಿಯ ಕ್ಷೇತ್ರಗಳು. ಇವರ ಕಥೆ ಕವನಗಳು ತುಳು ಕೊಂಕಣಿ ಮಲಯಾಳಂ ತಮಿಳು ತೆಲುಗು ಹಿಂದಿ ಪಂಜಾಬಿ ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದ ಆಗಿವೆ. ಇತ್ತೀಚೆಗೆ ಅವರ ‘ವಿಷ್ಣುಮಂಗಲ’ ಎಂಬ ಇಂಗ್ಲಿಷ್ ಕಥಾಸಂಕಲನ (ಅವರದೇ ಸಣ್ಣಕಥೆಗಳ ಅನುವಾದ) ಪ್ರಕಟವಾಗಿ ಹೆಸರಾಗಿದೆ. ರಂಗಭೂಮಿ ಬಗ್ಗೆ ಡಾಕ್ಟೊರೇಟ್ ಅಧ್ಯಯನ ಮಾಡಿ ಮೈಸೂರು ವಿ. ವಿ. ಯಿಂದ ಪಿಹೆಚ್. ಡಿ. ಪದವಿ ಪಡೆದಿದ್ದಾರೆ. ಆಕಾಶವಾಣಿಯ ಹಲವು ಕೇಂದ್ರಗಳಲ್ಲಿ ಸುಮಾರು ಮೂವತ್ತು ವರ್ಷ ಕಾಲ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಪ್ರಸ್ತುತ ಮಂಗಳೂರು ನಿವಾಸಿ.

ಸುಮಾರು ಇಪ್ಪತ್ತಕ್ಕಿಂತ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಇವರು ಸರಕಾರದ ಹಲವು ಸಮಿತಿಗಳಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಶ್ರೀಮತಿ ಹಾಗೂ ಮಕ್ಕಳು ಕೂಡ ಕವಿ ಲೇಖಕರಾಗಿ ಭರತನಾಟ್ಯ ಕಲಾವಿದರಾಗಿ ಹೆಸರಾಗಿದ್ದಾರೆ.ಬಹುಶ್ರುತರು,ಸೌಜನ್ಯದ ಸಾಕಾರವು ಆಗಿರುವ ಡಾ.ವಸಂತ ಕುಮಾರ ಪೆರ್ಲ ಅವರು ಮೊದಲಿನಿಂದಲು ನಮ್ಮ ಈ ಪತ್ರಿಕೆಯನ್ನು ಹಚ್ಚಿಕೊಂಡು ಅದರ ಬೆಳವಣಿಗೆಯಲ್ಲಿ ಭಾಗಿದಾರರಾದವರು. ಈಗ ತಮ್ಮ ಅಂಕಣದ ಮೂಲಕ ಪತ್ರಿಕೆಯ ಮೌಲ್ಯ ವರ್ಧನೆಗೆ ಕಾರಣವಾಗುತ್ತಿರುವ ಅವರಿಗೆ ಅನೇಕ ವಂದನೆಗಳು.

- ಡಾ. ಶ್ರೀಪಾದ ಶೆಟ್ಟಿ,

ಸಂಪಾದಕ, ಆಲೋಚನೆ.ಕಾಂ

.ಕಾಮ್

47 views0 comments

Comments


bottom of page