top of page

ವರುಷ ನೂರಾದರೇನು?

ಡಾ.ಡಿ.ಎಸ್.ಕರ್ಕಿ ಅವರ ಸ್ಮರಣೆ



("ಹಚ್ಚೇವು ಕನ್ನಡದ ದೀಪ"--ಜನಪ್ರಿಯ ಗೀತೆಯ ಕವಿ ಡಾ.ಡಿ.ಎಸ್.ಕರ್ಕಿ.ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಕೊಪ್ಪ ಗ್ರಾಮದವರು)

ಕರ್ಕಿ

ಬೆಳೆಯಗೊಡುವುದಿಲ್ಲ

ಏನನ್ನೂ

ಆಚೀಚೆ

ಆದರೆ

ಹಾಗಲ್ಲ ನಮ್ಮ ಕರ್ಕಿ

ಬೆಳೆಸಿದರು

ಸಾಹಿತ್ಯ ಬಳಗವನ್ನು ತಮ್ಮ ಸುತ್ತ

ಕರ್ಕಿ ಇಷ್ಟ

ಗಣಪನಿಗೆ

ಯಾಕೆಂದರೆ

ದುರ್ಗಣಗಳು ಬೆಳೆಯುವುದಿಲ್ಲ

ಅದಕ್ಕೇ

ಕರ್ಕಿ ಪ್ರಿಯರು ನಮಗೆ

ಸದ್ಗುಣ ಸಂಪಣ್ಣರು

ಇಲ್ಲೇ

ಸನಿಹದಲ್ಲೇ

ಇದ್ದರು

ನೂರೊಂದು ವರ್ಷದ ಹಿಂದೆ

ಹಿರೇಕೊಪ್ಪದಲ್ಲಿ

ದೂರದಲ್ಲೆಲ್ಲೋ ಬೆಳೆದರು

ಅಷ್ಟೇ ಅಲ್ಲ

ಬೆಳೆಸಿದರು ಕನ್ನಡ ಸಾಹಿತ್ಯವನ್ನು

ಹಚ್ಚಿಹೆವು ನೋಡಿ

ಕನ್ನಡದ ದೀಪ

ಆ ಬೆಳಕಲ್ಲಿ ಕಂಡಿದೆ

ಶಾಸ್ತ್ರೀಯ ಸ್ಥಾನಮಾನ

ಆರದದು ದೀಪ

ಉರಿಯುತಿದೆ ನಿತ್ಯ

ಇದು ಸತ್ಯ

ಕೊಡಬಲ್ಲೆವೆಷ್ಟು ನಾವು ನಿಮಗೆ

ಸದಾ ಹಾಡುವೆವು

ಹಾಡುತ್ತಲೇ ಇರುವೆವು

ಬೆಳಗಿಸುತ್ತಲೇ ಇರುವೆವು

"ಕನ್ನಡದ ದೀಪ"

"ಕರುನಾಡ ದೀಪ"

ಶತಮಾನ ಕಳೆದರೂ

ಮರೆತಿಲ್ಲ ನಾವು

ಈಗಲೂ ಇಟ್ಟಿದ್ದೇನೆ

ತಮ್ಮನ್ನು ಜೀವಂತ

ಎಲ್ಲಿದೆ ಸಾವು ಪ್ರತಿಭೆಗಳಿಗೆ

ತಾವಿತ್ತ ಮೇರು ಕೃತಿಗಳಿಗೆ?


ಪ್ರೊ.ವೆಂಕಟೇಶ ಹುಣಶಿಕಟ್ಟಿ


ನಮ್ಮ ನಡುವಿನ ಕ್ರಿಯಾಶೀಲ ವ್ಯಕ್ತಿ,ದಣಿವರಿಯದ ಬರಹಗಾರ,ಸೃಜನಶೀಲ ಕವಿ ಪ್ರೊ.ವೆಂಕಟೇಶ ಹುಣಶಿಕಟ್ಟಿ ಅವರು ತಮ್ಮ ತಾಲೂಕಿನ ಹಿರೆಕೊಪ್ಪ ಗ್ರಾಮದ ಮಹಾನ್ ಪ್ರತಿಭೆ,ಕನ್ನಡ ಛಂದೋವಿಕಾಸದ ಕರ್ತೃ,ಕವಿ ಡಾ.ದುಂಡಪ್ಪ ಸಿದ್ದಪ್ಪ ಕರ್ಕಿ ಅವರನ್ನು ನೆನಪಿಸಿಕೊಂಡು ಬರೆದ ಕವಿತೆ ನಿಮ್ಮ ಓದು ಮತ್ತು ಪ್ರತಿಸ್ಪಂದನಕ್ಕಾಗಿ.

ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

 
 
 

Recent Posts

See All
ದೀಪಾವಸಾನ

ಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---

 
 
 
ವ್ಯವಸ್ಥೆ

ಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---

 
 
 

Comments


©Alochane.com 

bottom of page