ವಯಸ್ಸಿನ ರೇಖೆಗಳು
- ಆಲೋಚನೆ
- Sep 20, 2022
- 1 min read
ವಯಸ್ಸಿನ ರೇಖೆಗಳು
ಮುಖದ ಮೇಲೆ ಬಂದಾಗ
ಚಿಂತೆಗಿಂತ ಹೆಚ್ಚು
ಚಿಂತನೆಗಳನ್ನು ಮಾಡಬೇಕು
ಅನುಭವದ ಮೂಸೆಯಲ್ಲಿ
ಅರಿವಿನ ಅರ್ಥಗಳ
ಅರೆಅರೆದು ಕುಡಿಯಬೇಕು
ಕುಡಿಸಬೇಕು
ತನ್ನ ಬದುಕಿನ ಅರ್ಥ
ಅರಿಯಲಾರದವನು
ಪರರ ಬದುಕಿಗೇನನ್ನೂ
ನೀಡಲಾರ,
ಬದುಕು ತನಗಾಗಿ ಮಾತ್ರವಲ್ಲ
ಎಂದರಿತುಕೊಂಡವನು
ಬೇರೆಯವರ ಬದುಕಿಗೂ
ಒಂದಿಷ್ಟು ಚೈತನ್ಯ ನೀಡಬಲ್ಲ,
ಜೀವನ ಅನಿಶ್ಚಿತವೆಂಬ ಸತ್ಯ
ಗೊತ್ತಿದ್ದರೂ
ಚಿರಂಜೀವಿಯೆಂಬ
ಭ್ರಮೆಯಲ್ಲಿರುವವರು
ನಾಳೆಗಳ ಹುಡುಕುತ್ತಿರುತ್ತಾರೆ
ಕವಿವಾಣಿ ಹೇಳುತ್ತದೆ -
" ನಿನ್ನೆ ನಿನ್ನೆಗೆ
ಇಂದು ಇಂದಿಗೆ
ಇರಲಿ ನಾಳೆಯು ನಾಳೆಗೇ.."
ನಿನ್ನೆ ಕಳೆದುಹೋಗಿದೆ
ನಾಳೆ ನಮ್ಮದಲ್ಲ
ನಮಗಿರುವದು
" ಇಂದು " ಮಾತ್ರ.
- ಎಲ್. ಎಸ್. ಶಾಸ್ತ್ರಿ

Comentários