ಕ್ವೊವಿ ಕ್ವೊಟ್ಲಿಲ್ ಸತ್ತೋರ್ ಸಂಖ್ಯೆ
ಲೆಕ್ಕಕ್ ಸಿಕ್ಕ ಪಕ್ಕಾ ನೋಡಿ
ಮೇಯೂಕ್ ಸಿಕ್ದೆ ಅಡ್ಗೋಳ್ ಹಾಕ್ದ
ದನ್ಗೋಳ್ ಲೆಕ್ಕಾ ಇಟ್ಟೋರಿಲ್ಲಾ
ಕೋವೀ ಹಿಡ್ಕಂಡ್ ಮೀಸೆ ತಿರ್ವ
ಹಿಟ್ಲರ್ನಾಗು ಮನಸೇ ಜನ್ಕೆ
ವಿಟ್ಟಲ ಘಟ್ಟ ಹತ್ತು ಮನ್ಸು
ಯಾರಿಗು ಇಲ್ಲದ್ ಕಂಡೆ ನಾನು
ಸದ್ದಿನ್ ಕೋವಿ ಸದ್ದಾಮ್ ಎದ್ದ
ಮಸಣದ್ ಬೂದಿ ಹಚ್ಕಂಡ್ ಕುಣ್ದ
ಸುಡ್ಬಾಂಬ್ ಹಾಕಿ ದೀಗ್ಣಾ ಹೊಡ್ದ
ಸಂಕಾ ಮುರ್ದು ಸ್ನಾನಾ ಮಾಡ್ದ
ಲೋಕಾ ಸುಟ್ಟು ಸೊಡ್ಳಿ ಮಾಡಿ
ಕೊಂಡಕ್ ಬೀಳೂ ಮಾಸ್ತಿ ನೋಡಿ
ಗಾಲಿ ಮೀಸೆ ಕುಣಿಸಾಡ್ ಎದ್ದ
ತಬ್ಲಿ ಮಕ್ಳಾ ಕಾಲಲ್ ಒದ್ದಾ
ಕ್ವೊವೀ ಕ್ವಾಟ್ಲಿಲ್ ಸತ್ತೋರ್ ಕೋಟೀ
ಯುದ್ಧದ ಬಿಂಕಿಲ್ ಬಿದ್ದೋರ್ ಕೋಟೀ
ಸುಟ್ಟ ಪಟ್ಣಾ ಬಿಟ್ಟೋರ್ ಕೋಟೀ
ಲೋಕದ ಶಾಂತಿಗೆ ಸೇಸೆಯ ಹಾಕೋ
ಕ್ವೊವಿ ಕ್ವೊಟ್ಲಿಲ್ ಸತ್ತೋರ್ ಸಂಖ್ಯೆ
ಲೆಕ್ಕಕ್ ಸಿಕ್ಕ ಪಕ್ಕಾ ನೋಡಿ
ಮೇಯೂಕ್ ಸಿಕ್ದೆ ಅಡ್ಗೋಳ್ ಹಾಕ್ದ
ದನ್ಗೋಳ್ ಲೆಕ್ಕಾ ಇಟ್ಟೋರಿಲ್ಲಾ
ಕೋವೀ ಹಿಡ್ಕಂಡ್ ಮೀಸೆ ತಿರ್ವ
ಹಿಟ್ಲರ್ನಾಗು ಮನಸೇ ಜನ್ಕೆ
ವಿಟ್ಟಲ ಘಟ್ಟ ಹತ್ತು ಮನ್ಸು
ಯಾರಿಗು ಇಲ್ಲದ್ ಕಂಡೆ ನಾನು
ಸದ್ದಿನ್ ಕೋವಿ ಸದ್ದಾಮ್ ಎದ್ದ
ಮಸಣದ್ ಬೂದಿ ಹಚ್ಕಂಡ್ ಕುಣ್ದ
ಸುಡ್ಬಾಂಬ್ ಹಾಕಿ ದೀಗ್ಣಾ ಹೊಡ್ದ
ಸಂಕಾ ಮುರ್ದು ಸ್ನಾನಾ ಮಾಡ್ದ
ಲೋಕಾ ಸುಟ್ಟು ಸೊಡ್ಳಿ ಮಾಡಿ
ಕೊಂಡಕ್ ಬೀಳೂ ಮಾಸ್ತಿ ನೋಡಿ
ಗಾಲಿ ಮೀಸೆ ಕುಣಿಸಾಡ್ ಎದ್ದ
ತಬ್ಲಿ ಮಕ್ಳಾ ಕಾಲಲ್ ಒದ್ದಾ
ಕ್ವೊವೀ ಕ್ವಾಟ್ಲಿಲ್ ಸತ್ತೋರ್ ಕೋಟೀ
ಯುದ್ಧದ ಬಿಂಕಿಲ್ ಬಿದ್ದೋರ್ ಕೋಟೀ
ಸುಟ್ಟ ಪಟ್ಣಾ ಬಿಟ್ಟೋರ್ ಕೋಟೀ
ದುಡ್ಡೂ ದವ್ಲತ್ ಹೋದೋರ್ ಕೋಟೀ
ಕೆಂಪನ್ ಸೂರ್ಯನ್ ಕೆಂಡದ ಕಣ್ಣಿಗ್
ಪಟ್ಣಾ ಸುಟ್ಟೂ ಮಸ್ಣಾಗ್ ಬಿಟ್ಟೀದ್
ಅರಿವಿನ ಗುರುವೆ ಮಾರ್ಗವ ತೋರೋ
ಎದೆಗೂ ಎದೆಗೂ ಸಂಕಾ ಕಟ್ಟೋ
ಲೋಕದ ಶಾಂತಿಗೆ ಸೇಸೆಯ ಹಾಕೋ
ಎದೆಗುದಿ ಕಳೆಯಲು ಮಂಗಲ ಹಾಡೋ
ದುಡ್ಡೂ ದವ್ಲತ್ ಹೋದೋರ್ ಕೋಟೀ
ಕೆಂಪನ್ ಸೂರ್ಯನ್ ಕೆಂಡದ ಕಣ್ಣಿಗ್
ಪಟ್ಣಾ ಸುಟ್ಟೂ ಮಸ್ಣಾಗ್ ಬಿಟ್ಟೀದ್
ಅರಿವಿನ ಗುರುವೆ ಮಾರ್ಗವ ತೋರೋ
ಎದೆಗೂ ಎದೆಗೂ ಸಂಕಾ ಕಟ್ಟೋ
ಲೋಕದ ಶಾಂತಿಗೆ ಸೇಸೆಯ ಹಾಕೋ
ಎದೆಗುದಿ ಕಳೆಯಲು ಮಂಗಲ ಹಾಡೋ
ಡಾ.ಎನ್.ಆರ್.ನಾಯಕ
Comments