top of page

ರಾತ್ರಿ

ರಾತ್ರಿಯಾದರೆ ಗಮನಿಸಿ

ಅದು ಕತ್ತಲಷ್ಟೇ ಅಲ್ಲ

ನಕ್ಷತ್ರ ಹೊಳೆಯಲು ಹಾಸಿಗೆ


ರಾತ್ರಿಯಾದರೆ ಗಮನಿಸಿ

ಹೂ ಬಳ್ಳಿಯ ಗುಸುಗುಸು

ಹಾದಿಗಳಿಗೆ ಉಣಬಡಿಸುವಿಕೆ


ರಾತ್ರಿಯಾದರೆ ಗಮನಿಸಿ

ಸೂರ್ಯನಿಗೆ ಪೈಪೋಟಿ ನೀಡಲು

ಮಿಂಚುಹುಳು ಕುಣಿಯಲು ವೇದಿಕೆ


ರಾತ್ರಿಯಾದರೆ ಗಮನಿಸಿ

ಕಣ್ಣುಗಳ ಧ್ಯಾನ ಮನಗಳ ಮೌನ

ಮಿಲನಗೊಂಡು ನಿದ್ರಿಸಲು ಭೂಮಿಕೆ


ರಾತ್ರಿಯಾದರೆ ಗಮನಿಸಿ

ಹಗಲಿನ ವೇಷ ಕಳಚಿ

ಕನಸಿನಲ್ಲಿ ವಿಹರಿಸಲು ಘಳಿಗೆ


ರಾತ್ರಿಯಾದರೆ ಗಮನಿಸಿ

ಅದು ಹಗಲಿನ ಶೃತ್ರುವಲ್ಲ

ಬೆಳಕಿನ ನೆರಳಿನ ಸಾಂಕೇತಿಕೆ


ರಾತ್ರಿಯಾದರೆ ಗಮನಿಸಿ

ಅದು ಭಯವಲ್ಲ ತಂಗಾಳಿಯ ಬೆರಳು

ನಿಮ್ಮ ತೋಳ ಅಪ್ಪುಲು ಸೋಜಿಗತೆ


ರಾತ್ರಿಯಾದರೆ ಗಮನಿಸಿ

ಅದು ಅಂಧಕಾರವಲ್ಲ

ಚಂದಿರ ಮಲಗಲು ನಡೆಸಿರುವ ಸಿದ್ಧತೆ


ರಾತ್ರಿಯಾದರೆ ಗಮನಿಸಿ... ನೀವು




ಎಂ.ಜಿ.ತಿಲೋತ್ತಮೆ

ಭಟ್ಕಳ

109 views0 comments

Commentaires


bottom of page