ರಾಘವೇಂದ್ರ ಸ್ವಾಮಿ

ತುಂಗಾ ತೀರ ವಾಸ,

ಯತಿ ರಾಘವೇಂದ್ರ

ಮಂತ್ರಾಲಯ ನಿವಾಸ!!


ಭಕ್ತಿಯಿಂದ ಪೂಜಿಸಲು

ಅನುಗ್ರಹಿಸುವ ಶ್ರೀರೂಪ!


ನಿನ್ನ ಆರಾಧನೆಯಿಂದ

ನೀಗುವುದು ಮನದ ತಾಪ!!


ಸಂಕಷ್ಟದ ಸಮಯದಲ್ಲಿ

ಕೃಪೆದೋರುವ ಶಕ್ತಿ ರೂಪ!!


ನಂಬಿ ಬರುವ ಭಕ್ತರಿಗೆ

ದಾರಿ ತೋರೋ ದೇವ ಸ್ವರೂಪ!!


ಸಾವಿತ್ರಿ ಶಾಸ್ತ್ರಿ, ಶಿರಸಿ

8 views0 comments