
ಹಾಗೆ ಯೋಚಿಸುತ್ತ ಕುಳಿತಿದ್ದೇನೆ
ಕುಳಿತಿದ್ದೇನೆ
ಏನನ್ನು ಯೋಚಿಸಲಿ
ಎಂದು ತಿಳಿಯದೆ;
ಯಾರೋ ಹೇಳಿದ್ದಾರೆ
" ಯೋಚಿಸದಿರುವವರೇ
ಸುಖಿಗಳು" ಎಂದು.
ಯೋಚಿಸಿ ಯೋಚಿಸಿ ಕೆಟ್ಟರು
ಬುದ್ಧಿ ಹೆಚ್ಚಾದವರು
ಯೋಚಿಸದೇ ಕೆಟ್ಟರು
ಬುದ್ಧಿಯಿಲ್ಲದವರು
ಸಮಸ್ಯೆ ಇರುವುದೇ ಅಲ್ಲಿ;
ಸಣ್ಣವನಿದ್ದಾಗ
ಯೋಚಿಸಬೇಕೆಂಬುದೇ
ಗೊತ್ತಿರಲಿಲ್ಲ,
ದೊಡ್ಡವನಾದಾಗ
ಯೋಚಿಸುತ್ತ
ಕುಳಿತುಕೊಳ್ಳುವುದಕ್ಕೆ
ಸಮಯವೇ ಇರಲಿಲ್ಲ.
ವಯಸ್ಸಾದಾಗ
ಯೋಚಿಸುವ ಅಗತ್ಯವೇ
ಬೀಳಲಿಲ್ಲ;
ಯೋಚಿಸಿ ಪ್ರಯೋಜನವೂ
ಇರಲಿಲ್ಲ,
ಏಕೆಂದರೆ ಯೋಚಿಸುವ ಕಾಲ
ಮುಗಿದುಹೋಗಿತ್ತು.
ಇಂದು
ಯೋಚಿಸುವವರಿಗೂ
ಯೋಚಿಸದಿರುವವರಿಗೂ
ವ್ಯತ್ಯಾಸವೇನೂ ಉಳಿದಿಲ್ಲ.
ಅದೇ ಸುಖದ ಸಂಗತಿ!
- ಎಲ್. ಎಸ್. ಶಾಸ್ತ್ರಿ

Comments