top of page

ಯೋಚನೆ, ಯೋಜನೆ, ಯಶಸ್ಸು ಇತ್ಯಾದಿ

Updated: Aug 14, 2020


ಜಾಗತೀಕರಣ ಬಂದು ದಶಕಗಳೇ ಸಂದಿವೆ. ಈ ಜಾಗತೀಕರಣ ನಾಗರೀಕರನ್ನು ಹತ್ತಿರಕ್ಕೆ ತಂದಿದೆ. ಅಂದರೆ ಸಂಚಾರ ಮಾಧ್ಯಮದಲ್ಲಿನ ಅನ್ವೇಷಣೆ ಮತ್ತು ಸರಳೀಕರಣದಿಂದ ಕಂಪ್ಯೂಟರ್‌ ಈಗ ಬರೆಯುವ ಹಾಳೆಯಾಗಿದೆ. ಇದರಿಂದ ಅಂತರ್‌ಜಾಲದ ಕೆಲಸವನ್ನು ತಂತ್ರಜ್ಞಾನದ ಹೊಳವುಗಳಿಂದ (ಆಪ್ಸs) ಡಿಜಿಟಲ್‌ ಆಗಿ ಜನ ಸಾಮಾನ್ಯರಿಗೆ ಮುಟ್ಟುವ ಮೂಲಕ ಕಂಪ್ಯೂಟರಿನ ಕೆಲಸ ಕೇವಲ ಲೆಕ್ಕವಿಡುವ ಮತ್ತು ಅಂಕಿ ಅಂಶಗಳನ್ನು ಪರಿಶೀಲಿಸುವ ಮತ್ತು ಅದರ ಮೂಲಕ ಉದ್ದಿಮೆಗಳು ಹೆಚ್ಚಿನ ತರ್ಕೀಯ ಅಂಶಗಳನ್ನು ಬಿಡುಗಡೆ ಮಾಡುವ ಉಪಯುಕ್ತಕ್ಕಷ್ಟೇ ಸೀಮಿತವಾಗಿದೆ..ತಂತ್ರ ಜ್ಞಾನದಷ್ಟೇ ಮನುಷ್ಯನೂ ತನ್ನ ಪ್ರವ್ರತ್ತಿಯಲ್ಲಿ ದೊಡ್ಡವನಾಗುವ ಅಂದರೆ ಪ್ಯಪೋಟಿಯಲ್ಲಿಗೆಲುವು ಸಾಧಿಸುವ ಮೂಲಕ ವಿಶೇಷ ವ್ಯಕ್ತಿಗಳಲ್ಲಿ ಒಬ್ಬನಾಗುವ ಆಕಾಂಕ್ಷೆಗೆ ಉದ್ದಿಮೆ/ಉದ್ಯೋಗ ದಾರನಿಗಲ್ಲಿ ಹೇರಳ ಅವಕಾಶವಿದೆ

೧೫-೨೦ ವರ್ಷಗಳ ಹಿಂದೆ "ದೊಡ್ಡದ್ದನ್ನೇ ಯೋಚಿಸಿ"ಎಂದು ಕೆಲವು ಅಂತರ ರಾಷ್ಟ್ರೀಯ ಲೇಖಕರು ಪುಸ್ತಕಗಳನ್ನು ಬರೆದಾಗ ಕನಸನ್ನು ಮಾರಾಟ ಮಾಡುವ ಒಂದು ಸೂತ್ರವಾಗಿ ಪುಸ್ತಕಗಳನ್ನು ಪ್ರಕಟಿಸುವ ದೊಡ್ಡ ಪ್ರಕಾಶಕರು ಹಣ ಮಾಡುತ್ತಿದ್ದಾರೆಂದು ಆರೋಪ ಬರುತ್ತಿತ್ತು. ಆದರೆ ಆಗಿನ ಭಾವನಾತ್ಮಕ ಹೇಳಿಕೆಗಳು ಈಗಿನ ಯಶಸ್ಸಿಗೆ ಕಥೆಗಳಾಗಿ ನಮ್ಮೆದುರು ಬಂದು ನಿಂತಿರುವುದು ಆಶ್ಚರ್ಯವಲ್ಲ. ೩೨-೩೩ ಹರೆಯದ ಫ್ಲಿಪ್-ಕಾರ್ಟಿನ ಬನ್ಸಾಲ್‌ ಸಹೋದರರು ಐದಾರು ವರ್ಷಗಳಲ್ಲಿ ಅಮೇರಿಕಾದ ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಕಂಪನಿಯಾದ ಅಮೇಜಾನ್‌ನನ್ನು ಕಣ್ಣಿಗೆ ಕಣ್ಣು ತಾಗಿಸಿ ಪೈಪೋಟಿಗೆ ನಿಂತಿದ್ದು, ಇದೊಂದು ಉದಾಹರಣೆಗಷ್ಟೇ ಉದ್ದರಿಸಿದ್ದೇನೆ ಅಂದರೆ ಹಿಂದೆ ವ್ಯಾಪಾರ ಕ್ಷೇತ್ರದಲ್ಲಿ ಕೆಲವೇ ಕುಟುಂಬಗಳ ಆಡಳಿತದಲ್ಲಿರುವ ಸಂಸ್ಥೆಗಳು ತಮ್ಮ ಲಾಭದಿಂದ ಮತ್ತೊಂದು ಕಂಪನಿಯ ಸೃಷ್ಟಿಗೆ ಅಥವಾ ಖರೀದಿಗೆ ಹೋಗುವುದು ಬಿಡಿ, ಅಂತಹ ಕಲ್ಪನೆಯೂ ಸಾಧ್ಯವಿರಲಿಲ್ಲ. ಈಗ ಚಿಕ್ಕ ಚಿಕ್ಕ ಔದ್ಯೋಗಿಕ ಸಂಸ್ಥೆಗಳು ಲಾಭವಿಲ್ಲದಿರಲಿ ಆದರೆ ಒಂದು ದಶಕದ ನಂತರವೂ ಖರೀದಿಸುವ/ಮಾರಲ್ಪಡುವ ಕಂಪನಿಯ ಬೆಲೆಯು ಆಕರ್ಷಕವಾಗಿ ಕಂಡರೆ ಹಲವರಿಂದ ಸಾಲ ಪಡೆದಾದರೂ ದೊಡ್ಡ ಸಂಸ್ಥೆಗಳಾಗಿ ನಮ್ಮೆದುರು ನಿಂತ ವಿವರಗಳು ಸಿಗುತ್ತಿವೆ.

ಅಂದರೆ ಈಗಿನ ಉದ್ದಿಮೆಯ ಕಾರ್ಯಕ್ಷೇತ್ರ ಬಹು ದೊಡ್ಡ ಸವಾಲಲ್ಲ. ಬದಲಾಗಿ ಆ ಕಾರ್ಯಕ್ಷೇತ್ರ ಹೇಗೆ ತನ್ನನ್ನು ಒಬ್ಬ ಯಶಸ್ಸಿನ ಹರಿಕಾರನನ್ನಾಗಿ ತಮ್ಮ ಇತರ ಔದ್ಯೋಗಿಕ ಸಂಸ್ಥೆಗಳು ಗುರುತಿಸಲ್ಪಡುವುದೇ ಒಂದು ರೀತಿಯ ಉತ್ತೇಜನ ಎಂದು ಈಗ ಪರಿಗಣಿಸಲ್ಪಡುತ್ತಿದೆ. ಅದಕ್ಕಾಗಿ ಪತ್ರಿಕೆಗಳು ಕೊಡುವ ವಿಶೇಷ ಪ್ರಶಸ್ತಿ ಸಮಾರಂಭಗಳು ವಾರ್ಷಿಕ ವಾಗಿ ನಡೆಯುತ್ತವೆ

ಆದ್ದರಿಂದ ಈಗ ಈ ವೇಳೆಯಲ್ಲಿ ಮನುಷ್ಯನ ಮನಸ್ಸು ತಿರುಗುವುದು ನಾನು ಹೇಗೆ ದೊಡಡ ಯಶಸ್ಸಿನ ಹರಿಕಾರನಾಗುವುದು ಎಂದೇ ಆಗಿದೆ. ಅಂದರೆ ಯೋಚನೆ, ಯೋಜನೆ, ನಿರ್ಣಯ, ಅಗತ್ಯತೆ, ವಿಸ್ತರಣೆ, ಕಲ್ಪನೆ, ಕನಸು, ಸ್ಪರ್ಧೆ,ಗೆಲುವು ಇವೇ ಅದರ ಪರಿಕರಗಳು. ದೊಡ್ಡದಾಗಿ ಯೋಚಿಸು, ದೊಡ್ಡದಾಗಿ ಪ್ರಾರಂಭಿಸು, ದೊಡ್ಡವನಾಗಿ ಎಲ್ಲರ ಮುಂದೆ ನಿಲ್ಲು, ಎನ್ನುವುದೇ ಈಗಿನ ಮಾನಸಿಕತೆ. ನನ್ನ ಸ್ನೇಹಿತನ ಪ್ರಕಾರ ತನ್ನ ಈಗಿನ ಜವಾಬ್ದಾರಿಯ ಯಶಸ್ಸಿಗಾಗಿ ಇಲ್ಲಿ

೧) ಯಾರೂ ಯಾರನ್ನು ಗುರುತಿಸುವುದಿಲ್ಲ. ಆದರೆ ವ್ಯಾಪಾರಕ್ಕೆ ಗುರುತುಬೇಕಿಲ್ಲ. ಗುರುತು ನಿಮ್ಮ ಕೆಲಸ ಎನ್ನುವುದು ಮೂಲಮಂತ್ರ.

೨) ಉದ್ಯಮ/ಉದ್ಯೋಗದಲ್ಲಿ ಭಾವನೆಗೆ ಅವಕಾಶವಿಲ್ಲ. ಭಾವನೆಯಿದ್ದರೆ ಸಂಬಂಧವೂ ಕೈ ಚಾಚಿ ಕುಳಿತುಕೊಳ್ಳುತ್ತದೆ. ಆದ್ದರಿಂದ ಭಾವನೆ, ಪಾಪ ಪುಣ್ಯ, ಸಂಬಂಧಿತನ, ಈ ಎಲ್ಲವನ್ನೂ ದೂರವಿಟ್ಟೇ ಉದ್ಯೋಗ ಪ್ರಾರಂಭಿಸಬೇಕು.

೩) ನಿಮ್ಮ ಯೋಚನೆ, ಯೋಜನೆ, ನಿರ್ಣಯ ಸರಿಯಾಗಿದೆ ಎನಿಸಿದಲ್ಲಿ ಇನ್ನೊಬ್ಬರ ಪುಕ್ಕಟ್ಟೆ ಸಲಹೆಗಳನ್ನು ಸ್ವೀಕರಿಸದಿರಿ. ನಿಮ್ಮ ನಿರ್ಣಯಕ್ಕೆ ನೀವೇ ಜವಾಬ್ದಾರರು. ಎನ್ನುವುದನ್ನು ಮರೆಯಬೇಡಿ.

ಈ ಮೂರು ಅಂಶಗಳು ನನ್ನ ಸ್ನೇಹಿತ ಅನುಸರಿಸಿ ಯಶಸ್ವಿ ಆಗಿದ್ದಾನೆ, ಈಗ ಅವನು ತನ್ನ ಉದ್ಯಮದ ವಿಸ್ತರಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.

ಉದ್ಯಮ ಅಥವಾ ಉದ್ಯೋಗದಲ್ಲಿರುವಾಗ ಹಲವಾರು ಯೋಚನೆಗಳೂ ಬರಲು ಸಿದ್ದವಿದೆ. ಕೆಲವು ಕಾಲ ತಾನು ಕೆಲವು ವರ್ಷ ಉದ್ಯೋಗಿಯಾಗಿದ್ದು ಕೈತುಂಬಾ ಹಣ ಪಡೆಯುತ್ತಿದ್ದಾಗ, ತನ್ನ ಕೋಟಿ ರೂಪಾಯಿಯ ನೌಕರಿಗೆ ತಿಲಾಂಜಲಿ ಇತ್ತು ಒಬ್ಬ ಲೇಖಕನಾಗಿ, ಉಪನ್ಯಾಸಕಾರನಾಗಿ, ರಾಜಕೀಯ ವಿಶ್ಲೇಷಕನಾಗಿ ತನ್ನ ಕಾರ್ಯಕ್ಷೇತ್ರವನ್ನು ಬದಲಿಸಿದ್ದಿದೆ. ಇತ್ತೀಚೆಗೆ ಇಪ್ಪತ್ತು ವರ್ಷಗಳಿಂದಲೂ NDTVಗೆ ಏಂಕರ್‌ ಆಗಿ ಕೆಲಸ ಮಾಡುತ್ತಿದ್ದ ನಿಧಿ ರಾಜ್ದಾನ್‌ ಎನ್ನುವ ಮಹಿಳೆ ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಅಸಿಸ್ಟೆಂಟ್‌ ಪ್ರೊಫೆಸರ ಹುದ್ದೆ ಸ್ವೀಕರಿಸಿ ಜರ್ನಲಿಸಂ ಅನ್ನು ವಿದ್ಯಾರ್ಥಿಗಳಿಗೆ ಕಲಿಸಲಿದ್ದಾಳೆ. ಅಂದರೆ ನಿಮ್ಮ ಯೋಚನೆ, ಯೋಜನೆ, ಕಲ್ಪನೆಗಳು ಹಠಾತ್‌ (ಪ್ರಕರಗೊಂಡು)ಸ್ತಬ್ದಗೊಂಡು ಇನ್ನೇನೋ ತಿರುವು ತೆಗೆದುಕೊಳ್ಳುವಲ್ಲಿ ಒಬ್ಬನ ಯಶಸ್ಸು ಅಡಗಿರಬಹುದು. ಆದರೆ ಇದು ಸಹ ಒಂದು ರೀತಿಯ ಕಠಿಣ ನಿರ್ಣಯ. ಈ ತಿರುವು ತನ್ನೆಲ್ಲಾ ಉದ್ದೇಶಗಳನ್ನು ಪ್ರಶ್ನಿಸಬಹುದು. ಆ ಸಂದರ್ಭದಲ್ಲಿ ತಂದೆ ತಾಯಿಗಳು, ಕುಟುಂಬಸ್ಥರು, ಇಷ್ಟೆಲ್ಲ ಹಣ ಗಳಿಸಿದ್ದೀಯಾ ಮತ್ತೆನಾಗಬೇಕಿದೆ. ಒಬ್ಬನೇ ಮಗ. ಅವನನ್ನು ಸಂಭಾಳಿಸಿದರೆ ಆಯಿತು: ನೀನು ಏನಾದರೂ ಕನ್ಸ್‌ಲ್ಟೆಂಟ್‌ (ಸಲಹೆಗಾರ) ಆಗಿ ದಿನ ನೂಕು, ಎಂದು ಒಂದು ರೀತಿಯ ಸಾಂತ್ವನದ ಆದರೆ ತನ್ನ ಉದ್ದೇಶವನ್ನೇ ಮರೆಸುವ ಇಂತಹ ಸಲಹೆಗಳಿಂದ ದೂರವಿರಬೇಕು. ಆದ್ದರಿಂದ ನಿಮಗೆ ಯಾವುದು ಸರಿಯೆನ್ನಿಸುತ್ತೊ ಅದನ್ನು ನೀವು ಪ್ರಾಮಾಣೀಕವಾಗಿ ಮಾಡಿ. ಒಂದು ಉದ್ಯೋಗ ಅಥವಾ ಉದ್ದಿಮೆಗೆ ಒಂದು ರೀತಿಯ ಜಡತ್ವ ಬರುತ್ತದೆ. ಮಾಡಿದ್ದನ್ನೇ ಮಾಡುವ ಕೆಲಸ ಕೆಲವೊಮ್ಮೆ ನಮ್ಮ ವಿಶೇಷ ವಾದ ಪ್ರತಿಭೆಯಿಂದ ಹೊಸತನ್ನು ಮಾಡುವ ಪ್ರೇರಣೆಯನ್ನು ಇದ್ದ ಸ್ಥಾನದಲ್ಲಿ ಸಿಗುವಂತಿದ್ದರೆ ಅದನ್ನು ಮಾಡಿ. ಉತ್ತಮವಾದ ಸಲಹೆಗೆ ನಿಮ್ಮ ಹಿರಿಯ ಆಡಳಿತ ಮಂಡಳಿಯವರಿಗೆ ಖುಷಿ ಕೊಡುವ ಸಂಗತಿಗಳಾಗಬೇಕು. ಒಂದು ಮಾತು ನೆನಪಿಡಿ. ನೀವು ಕೊಡುವ ಸಲಹೆ ಕಾರ್ಯರೂಪಕ್ಕೆ ಬರುವಂತಿರಬೇಕು. ಅಕಸ್ಮಾತ್ತು ನಿಮಗೆ ನೀವು ಕೊಟ್ಟ ಸಲಹೆಯನ್ನು ಕಾರ್ಯರೂಪದಲ್ಲಿ ತರಲು ಅವಕಾಶಕೊಟ್ಟರೆ, ನೀವು ಆ ಉದ್ದೇಶವನ್ನು ತನ್ನದಾಗಿ ಸ್ವೀಕರಿಸಿ ಯಶಸ್ವಿಯಾಗಿ ನಿಲ್ಲಬೇಕು. ಇಲ್ಲದಿದ್ದರೆ ನೀವು ಕೇವಲ ಸಲಹೆ ಕೊಡುವ ವ್ಯಕ್ತಿಯಾಗಿ ನಿಮ್ಮ ವ್ಯಕ್ತಿತ್ವ ಕುಂದಬಾರದು. ಸಾಮಾನ್ಯವಾಗಿ ಮೇಲೆ ಹೇಳಿದ ಕಾರಣಗಳೂ ದಿನನಿತ್ಯ ಕೇಳುವಂತವುಗಳು. ಇವು ಅತ್ಯಂತ ದೊಡ್ಡದಾದ ಹುದ್ದೆಗೂ ಅನ್ವಯವಾಗುವುದು.

ಈ ಅವಕಾಶಗಳನ್ನು ಸದುಪಯೋಗ ಪಡಿಸಲು ಅತ್ಯಂತ ಸಾಂದರ್ಭಿಕ ಗುಣ ಎಂದರೆ ಮನುಷ್ಯನ ಆಸಕ್ತಿ. ಆಸಕ್ತಿ ಅವನನ್ನು ಪ್ರೋತ್ಸಾಹಿಸುತ್ತದೆ. ದೊಡ್ಡದಾಗಿ ಯೋಚಿಸುವುದಿದ್ದರೆ ಅದು ಆಸಕ್ತಿ ಎಂಬ ವಿಟಮಿನ್‌ನಿಂದ ಸಾಧ್ಯ. ಆಸಕ್ತಿಯೇ ಅನ್ವೇಷಣೆಗೆ ಮೂಲ. ಆದ್ದರಿಂದ ಯಾವುದರಲ್ಲಿ ತಾನು ದೊಡ್ಡದಾಗಿ ಚಿಂತಿಸಬಹುದು, ಅದು ಯಾವುದೇ ಕ್ಷೇತ್ರವಿರಬಹುದು ಅಥವಾ ತಾನು ಕೆಲಸ ಮಾಡದೇ ಇರುವಂತಹ, ಅದರ ಬಗ್ಗೆ ವಿಶೇಷ ಜ್ಞಾನ ಇರದಂತಹ ಕ್ಷೇತ್ರವಿರಬಹುದು. ಆದರೆ ನಿಮ್ಮ ಆಸಕ್ತಿ ನಿಮ್ಮ ಯೋಚನೆಯ ಮೇಲೆ ಪ್ರಭಾವ ಬೀರುತ್ತದೆ. ಅಂತಹ ಪ್ರಭಾವ ನಿಮ್ಮನ್ನು ತಕ್ಕುದಾದ ನಿರ್ಣಯ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಹಲವಾರು ಉದಾಹರಣೆಗಳು ನಮಗೆ ಸಿಗುತ್ತದೆ. ಮುಕೇಶ ಅಂಬಾನಿಯಲ್ಲೂ ಹಣವಿದೆ ಅಷ್ಟರಲ್ಲಿ ತೃಪ್ತಿ ಪಟ್ಟಿದ್ದರೆ ಜಿಯೋ ಸಂಸ್ಥೆ ಬರುತ್ತಲೇ ಇರಲಿಲ್ಲ. ಕಾರಣ ಅದು ಅವರ ಕಾರ್ಯಕ್ಷೇತ್ರವಲ್ಲ. ಆದರೆ ಆಸ/ಕ್ತಿ ಅವರನ್ನು ಅಂತಹ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಇನ್ನೂ ಒಂದು ಕಾರಣವಿರಬಹುದು. ಅವನಿಗೆ ಹಣ/ ಸಂಬಳ ಗಳಿಸುವ ಈಗಿನ ಸಂಸ್ಥೆ ಗಳು ಹೊಸತನ್ನ ತರದೇ .ಜಡತ್ವಹೊಂದಿರಬಹುದು. ಅದೇ ರೀತಿಯ ಕೆಲಸ ನೋಡಿ ಅವನಿಗೆ ತನ್ನ ಸಂಸ್ಥೆಯು ಇನ್ನೊಂದು ರೀತಿಯ ಉದ್ಯೋಗಕ್ಕೆ ಪ್ರೇರೇಪಿಸಿರಬಹುದು. ಆದ್ದರಿಂದ ದೊಡ್ಡದಾಗಿ ಯೋಚಿಸಲು

೧) ಸ್ವಂತ ಆಸಕ್ತಿ

೨) ನಿರ್ಣಯ ತೆಗೆದುಕೊಳ್ಳುವ ಕ್ಷಮತೆ (ಅಂದರೆ ಸೋತರೂ ಹಿಂಜರಿಯದೇ ಮತ್ತೊಂದು ಅವಕಾಶವನ್ನು ತನ್ನದಾಗಿಸಿಕೊಳ್ಳುವ ನಾಯಕತ್ವ)

೩) ತಕ್ಕುದಾದ ಸಂಪನ್ಮೂಲದ ಜೋಡಣೆ ಅಥವಾ ಉಪಯೋಗ

೪) ತನಗೆ ತನ್ನ ಮೇಲಿನ ಭಾರವಸೆ) ಮುಂತಾದವುಗಳೂ...

ಇಷ್ಟೆಲ್ಲಾ ನಾವು ಚರ್ಚಿಸಿದ್ದು ಯಾವುದಕ್ಕಾಗಿ? ಏನನ್ನು ಹೇಳಲು? ಬಯಸಿದ್ದೇವೆ?

ಜಾಗತಿಕ ಸಂದರ್ಭದಲ್ಲಿ ಖಾಸಗಿ ಅಥವಾ ಚಿಕ್ಕ ಉತ್ಪಾದನಾ ಸಂಸ್ಥೆಗಳು ದೊಡ್ಡ ಉತ್ಪಾದನಾ ಸಂಸ್ಥೆಗಳೊಂದಿಗಿನ ಪೈಪೋಟಿಯ ದಿನಗಳಿವು. ಅವನು ಉದ್ಯೋಗದಲ್ಲಿದ್ದರೆ ಯಾವ ರೀತಿಯಲ್ಲಾದರೂ ಉತ್ಪಾದನಾ ಮೌಲ್ಯಗಳನ್ನು ಕಡಿಮೆ ಮಾಡಬಹುದು, ಅದರ ಮೂಲಕ ಲಾಭದಲ್ಲಿ ಏರಿಕೆಯಾದರೆ ಆ ಉದ್ಯೋಗಿಗೆ ಆ ಉತ್ಪಾದನಾ ಸಂಸ್ಥೆಗಳು ಹೆಚ್ಚು ಸಂಬಳ ನೀಡಿ ಮುಂದಿನ ಹುದ್ದೆ ನೀಡಿ ಗೌರವಿಸಬಹುದು. ಆದ್ದರಿಂದ ಈ ಪ್ರಶ್ನೆ ಉದ್ಯೋಗಿಗೂ/ಔದ್ಯೋಗಿಕ ಸಂಸ್ಥೆಗೂ ಅನ್ವಯಿಸುತ್ತದೆ. ೧೦೦೦೦ ವರ್ಷಗಳ ಹಿಂದೆ ಕಾಣಿಸಿಕೊಂಡಾಗ ಮನುಷ್ಯ ತನ್ನ ಇರುವಿಕೆಯ ಬಗ್ಗೆ, ತನ್ನ ಆಹಾರದ ಬಗ್ಗೆ, ಅದರ ಪೂರೈಕೆ ಬಗ್ಗೆ ಯೋಚಿಸಲು ಶುರುಮಾಡಿದ ನಂತರ ಅವನ ಮನಸ್ಸಿನಲ್ಲಿ ಮೂಡಿದ "ಯೋಚನೆ"ಅವನನ್ನು ಮುಂದೆ ಇನ್ನೊಬ್ಬರ ಯೋಚನೆಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲ ಮಾಡಿತು. ಹೀಗೆ ಹುಟ್ಟಿದ "ಯೋಚನೆಗಳ "ಪ್ರಪಂಚ ಅಷ್ಟೊಂದು ರೀತಿಯಲ್ಲಿ ಮಾರ್ಪಾಡು ಕಂಡಿತು ಎಂದು ಕೆನಡಾದ ಸಂಜಾತ, ಮನೋವಿಜ್ಞಾನಿ "ಮರ್ಲಿನ್‌ ಡೊನಾಲ್ಡ"ಹೇಳುತ್ತಾನೆ ಇವೆಲ್ಲ ಅಂಶಗಳನ್ನು ಒಟ್ಟಿಗೆ ಗಮನಿಸಿದಾಗ, ಮನುಷ್ಯನ ದೊಡ್ಡ ಆಸ್ಥೆಯಿಂದರೆ ದುಡಿಯುವುದು. ಈ ದುಡಿಮೆ ಅವನಿಗೆ ಬೇಕಾದ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಮತ್ತು ಅದರ ಮೂಲಕ ಸಮಾಜದ, ಜನಗಳ ಅವಶ್ಯಕತೆಗಳನ್ನ ಪೂರೈಸುವ ವಿಶೇಷ ವ್ಯಕ್ತಿಯಾಗಿ ಬೆಳೆದುಬರುತ್ತಾನೆ ಎಂಬುದು ಮುಖ್ಯವಾಗುತ್ತದೆ.

ಹೀಗೆ ಜನರಲ್ಲಿ ಸಾಮಾನ್ಯನಾಗದೇ ಒಬ್ಬ ವಿಶೇಷ ವ್ಯಕ್ತಿಯಾಗಿ ಪುನರುತ್ಥಾನಗೊಳ್ಳಲು ಸಂಶೋಧನೆ ನಡೆಸುತ್ತಾನೆ. ಈ ಸಂಶೋಧನೆ ತನ್ನ ಅಗತ್ಯಗಳನ್ನು ಪೂರೈಸಲು (Necessity is the mother of invention) ಅನುಕೂಲವಾಗುವಂತೆ ನಮಗಿಂತ ಶಕ್ತಿಶಾಲಿ ದೇವರು ಎನ್ನುವ ಪರಿಕಲ್ಪನೆಗೆ ದಾರಿ ಮಾಡಿಕೊಟ್ಟಿತು. ದೇವರು ಒಬ್ಬ ಶಕ್ತಿಯುತ ಮತ್ತು ಚರ್ಚಾತೀತ ಶಕ್ತಿಯಾಗಿ ಮೂಡಿಬಂದ. ಹೀಗೆ ಪ್ರಕೃತಿಯಲ್ಲಿ ಜನ್ಮ ಪಡೆದು ಪ್ರಕೃತಿಯೊಂದಿಗೆ ಸಂವಾದ ನಡೆಸುತ್ತಲೇ ತನ್ನ ಇರುವಿಕೆಯನ್ನು ಸಾರಿದ ದೇವರು ಮನುಷ್ಯ ಯಾವುದೋ ಇರದ ಒಂದು ವಸ್ತುವಿಗಾಗಿ ಹಾತೊರೆಯುತ್ತಾನೆ. ಅದು ಅವನಿಗೆ ಶಕ್ತಿಯನ್ನು, ಸುತ್ತಲಿನ ಪ್ರಕೃತಿಯನ್ನು ಅರಿಯುವ ಕ್ರಮವನ್ನು ಮನಸ್ಸಿಗೆ ʼಹಿತʼವನ್ನು ʼಸಂತೋಷʼವನ್ನು ಭೋಗಿಸಲು ಸ್ಥಿತನಾದ. ತಾನು ಮಾಡುವ ಕೆಲಸದಲ್ಲಿ ಖುಷಿ ತರುವ, ಹಿತವ ಪೊರೆಯುವ ಮೌಲ್ಯವನ್ನುನಾವು "ಯಶಸ್ಸು"ಎಂದು ಕರೆಯುತ್ತೇವೆ. ಕನ್ನಡದಲ್ಲಿ ಯಶಸ್ಸು ಸಕ್ಸಸ್ successಗೆ ಸಂವಾದಿಯಾಗಿ ಬಂದಿದೆ. ಈ ಯಶಸ್ಸು ಅಷ್ಟು ಬೇಗ ಸಿಗುವಂತಹ ವಸ್ತುವಲ್ಲ.

ಹಾಗಾದರೆ ಸಕ್ಸಸ್‌ ಎಂದರೆ ಏನು? ಕೆಲವು ಮಾರ್ಗದರ್ಶಿ ಪುಸ್ತಕಗಳನ್ನು ಬರೆದವರ ಅಭಿಪ್ರಾಯದಲ್ಲಿ ಸಕ್ಸಸ್‌ ಎಂದರೆ ಗೆಲವು. ಅಂದರೆ ತನ್ನ ಕೆಲಸದಲ್ಲಿ ಅಥವಾ ಇನ್ನಾವುದೇ ತೊಡಗುವಿಕೆಯಲ್ಲಿ ತನಗೆ ಒಪ್ಪಿಗೆಯಾದ ಹಾಗೆ ನಿರ್ಣಯ ಬರುವುದು ಎಂದು ಅನ್ನಬಹುದು. ಹಾಗೆಯೇ ಸಕ್ಸಸ್‌ ಎಂದರೆ ಗೆಲುವು ಅಂದರೆ ನಾವು ಸೂಚಿಸಿದ ಪರಿಹಾರ ಒಪ್ಪಿಗೆಯಾಗಿ ನಮ್ಮ ಒಪ್ಪಿಗೆಗೆ ಮನ್ನಣೆ ಸಿಗುವುದು. ಬ್ರಿಟನ್ನಿನ ಡೇವಿಡ್‌ ಕ್ವಾರ್ಟ್ಸಜ್ ಎನ್ನುವ ಬ್ರಿಟನ್‌ ಸಂಜಾತ ಮ್ಯಾನೇಜ್‌ಮೆಂಟ್‌ ಗುರು. ಗೆಲವು ಎನ್ನುವುದು ಯಶಸ್ಸು, ಯಶಸ್ಸು ಜೀವನದ ಉದ್ದೇಶ ಎನ್ನುತ್ತಾನೆ.

ಅಂದರೆ ಗೆಲುವು ಸಕಾರಾತ್ಮಕ ಸನ್ನಿವೇಷಗಳ ಅಥವಾ ಘಟನೆಗಳ ಒಟ್ಟು ಮೊತ್ತವದು. ಗೆಲುವು

ಅಂದರೆ ಯಶಸ್ಸು ಎಂದರೆ ಸಂಪತ್ತು ಅಂದರೆ ಮನೆ ,ಹೊಸ ವಸ್ತುಗಳು, ಆರ್ಥಿಕ ಸದೃಡತೆ ಎಂದು ಒಟ್ಟು ಅಭಿಪ್ರಾಯ ಬರುತ್ತದೆ. ತನ್ನ ಬಗ್ಗೆ ಜನರ ಒಳ್ಳೆಯ ಅಭಿಪ್ರಾಯ.. ವ್ಯಾಪಾರದಲ್ಲಿ ಏಳಿಗೆ ಕಾಣುವುದು, ವೈಯಕ್ತಿಕ ಮತ್ತು ಸಾಮಾಜಿಕವಾಗಿ ಗುರುತಿಸಲ್ಪಡುವುದು ಮತ್ತು ಹಿಂಬಾಲಕರನ್ನು ಹೊಂದಿರುವುದು, ಹೆದರಿಕೆ, ಯೋಚನೆ, ಅಸಹಾಯಕತೆ ಮತ್ತು ಸೋಲು ಇರದ ಜೀವನ ಇನ್ನು ಮುಂತಾದವು ಮತ್ತು ಅವುಗಳು ನಿಜಕ್ಕೂ ಜೀವನಕ್ಕೆ ಶಾಂತಿ, ಮತ್ತು ಆತ್ಮ ತೃಪ್ತಿ ಇವೆಲ್ಲವೂ ಯಶಸ್ಸನ್ನು ಗಳಿಸುವ ಮಾರ್ಗಗಳು, ಉಪಾಯಗಳು ಅಥವಾ ಬಯಕೆಗಳುʼ ಎಂದು ಡೇವಿಡ್‌ ತನ್ನ ಪುಸ್ತಕದಲ್ಲಿ ಬರೆಯುತ್ತಾನೆ.

ಆದ್ದರಿಂದ ಯೋಚನೆ, ಮತ್ತು ಯೋಜನೆಯ ಮೂಲಕ ಯಶಸ್ಸು ಪಡೆಯುವುದೇ ಜೀವನದ

ಉದ್ದೇಶ. ಜೀವನದಲ್ಲಿ ಕೊನೆಯವರೆಗೂ ಶಾಂತಿ, ಸಂಪನ್ನತೆ ಮತ್ತು ಖುಷಿ ಸಂತೋಷ ಹೊಂದುವುದಕ್ಕಾಗಿ ಮಾಡುವ ಪ್ರಯತ್ನ ಗೆಲುವಿನ ಪ್ರಮಾಣ, ನೀವು ಆಯ್ಕೆ ಮಾಡಿದ ಗೆಲುವಿನ ಸೀಮೆಯನ್ನು ಅವಲಂಬಿಸಿರುತ್ತದೆ. ನಾವು ಇದುವರೆಗೆ ಒಂದು ವಿಷಯದ ಬಗ್ಗೆ ಚರ್ಚೆ ಮಾಡಿಲ್ಲ. ಅದು ಮನುಷ್ಯನ ಒಳತೋಟಿಗೆ ಸಂಬಂಧ ಪಟ್ಟಿದ್ದು. ಅದು ಅಂತರಂಗದ ಹೋರಾಡುವ ಶಕ್ತಿ. ಅದುವೇ ನಂಬಿಕೆ. ನಂಬಿಕೆಯೇ ಸಾಧ್ಯವಾಗುವಂತೆ ಮಾಡುವ ಶಕ್ತಿ. ಗೆಲ್ಲುತ್ತೇನೆ ಎಂಬ ನಂಬಿಕೆ ಆತ್ಮಸ್ಥೈರ್ಯವನ್ನೂ ಸರಿಯಾದ ಯೋಚನೆಯನ್ನೂ ಗೆಲ್ಲುವ ಯೋಜನೆಯನ್ನೂ ಸುಗಮ ಗೊಳಿಸುತ್ತದೆ. ನಂಬಿಕೆ ನಮ್ಮ ಆಶ್ರಯವಲ್ಲ. ಅದು ಒಂದುರೀತಿಯ ಮಾನಸಿಕ ಶಕ್ತಿ. ನಂಬಿಕೆಯ ಹಿಂದೆ ನೆರಳಂತೆ ನಮ್ಮ ಪ್ರಯತ್ನವೂ ಇರಬೇಕು. ನೀವು ಗುರಿ ತಲುಪಲು ಅಗತ್ಯವಾದ ಜ್ಞಾನ, ಅದಕ್ಕೆ ಬೇಕಾದ ವಿವರಣೆ, ಜೊತೆ ಜೊತೆಗೆ ಅಚಲ ಭರವಸೆ ಬೇಕು. ಇವೆಲ್ಲವೂ ಇದ್ದಾಗ ʼಆಲ್‌ ಇಸ್‌ ವೆಲ್‌ʼ ಎಂದು ಹೇಳುವ ಆಮೀರ್‌ ಖಾನ್ ತ್ರಿ ಈಡಿಯಟ್ಸ್‌ʼ ನಲ್ಲಿ ಈಡಿಯಟ್ಸ ಹಾಗೆ ಪ್ರಿನ್ಸಿಪಾಲರಿಗೆ ಕಂಡರೂ, ತಮ್ಮ ಪ್ರಯತ್ನ ಮತ್ತು ಜ್ಞಾನದೊಂದಿಗಿನ ಅವರ ನಂಬಿಕೆ, ಅಚಲ ಭರವಸೆ (total conviction,) ಉತ್ಕಟವಾಗಿ ಇದ್ದಿದ್ದರಿಂದಲೇ ಅವನು ಬುದ್ದಿವಂತನೆಂದು ಕರೆದುಕೊಳ್ಳಲು ಇಷ್ಟ ಪಡುತ್ತಿದ್ದ ರಟ್ಟ ಹೊಡೆಯುತ್ತಿದ್ದ ʼಪುಸ್ತಕದ ಹುಳುʼ ವಿನ ವಿದ್ಯಾರ್ಥಿಗೆ ಕೊನೆಗೂ ತನ್ನ ಮೂರ್ಖತನವನ್ನು ಒಪ್ಪಿಕೊಳ್ಳಬೇಕಾಯಿತು.

ತನ್ನ ಯೋಜನೆಗಿಂತ ಮಿಗಿಲಾಗಿ ತನ್ನ ಯೋಚನೆಯ ಬಗ್ಗೆ ಯೋಚಿಸುತ್ತಾರೆ. ಹಣವಿದ್ದವನೇ ದೊಡ್ಡದು ಯೋಚಿಸುವುದಿಲ್ಲ ಬದಲಾಗಿ ಅವನ ಸಾಮರ್ಥ್ಯದ ಬಗ್ಗೆ ಅರಿತ ಹೂಡಿಕೆದಾರ ಯಾವಾಗಲೂ ಧೈರ್ಯ ತೋರಿದ ಉದಾಹರಣೆಗಳಿವೆ. ತನ್ನ ನಂಬಿಕೆಯನ್ನು ಮತ್ತು ನಂಬಿಕೆಯ ಶಕ್ತಿಯನ್ನು ಬೆಳೆಸುವುದು ಹೇಗೆ?

(೧) ಯಾವಾಗಲೂ ನಿಮ್ಮ ನಂಬಿಕೆಯನ್ನು ಶಕ್ತಿಯುತವಾಗಿಸಲು, ಹಿಂದೆ ಪಡೆದ ಯಶಸ್ಸನ್ನು ಯಾವಾಗಲೂ ನೆನಪಿಸಿ ಕೊಳ್ಳಿ. ಯಾವ ಸಂದರ್ಭದಲ್ಲೂ ಸೋತ ಘಟನೆಗಳನ್ನು ನೆನಪಿಸದಿರಿ. .

೨) ಯಾವಾಗಲೂ ನಿಮ್ಮ ನಂಬಿಕೆ ನಿಮ್ಮನ್ನು ಸೋಲಿಲ್ಲದ ಸರದಾರನಂತೆ ಯಾವ ಸಂದರ್ಭದಲ್ಲೂ ನಿರಾಶೆಗೆ ಎಡೆಮಾಡಿಕೊಡಬಾರದು.

೩) ಯಾವಾಗಲೂ ನಿಮ್ಮ ನಂಬಿಕೆ ದೊಡ್ಡದಾಗಿರಬೇಕು. ನಿಮ್ಮ ನಂಬಿಕೆಯಷ್ಟೇ ಯಶಸ್ಸು ಸಹ ಅಷ್ಟೇ ಬಲವಾಗಿರುತ್ತದೆ. ನಿಮ್ಮ ನಂಬಿಕೆ ಮತ್ತು ಯಶಸ್ಸು ನಿಮ್ಮ ಮನಸ್ಸನ್ನು ಅಷ್ಟೇ ದೊಡ್ಡದಾಗಿ ಯೋಚಿಸುವಂತೆ ಪ್ರೇರೇಪಿಸುತ್ತದೆ.

ಹಾಗಾಯೇ ಆರೋಗ್ಯದ ಬಗ್ಗೆ ನಿಮ್ಮ ನಂಬಿಕೆ ನಿಮ್ಮ ಆರೋಗ್ಯದ ಬಗ್ಗೆ ಯಶಸ್ಸಿನಂತೆ ಕೆಲಸ ಮಾಡುತ್ತಧೆ. ಅದಕ್ಕಾಗಿ ಈ ವಿಷಯಗಳಲ್ಲಿ ಮುತುವರ್ಜಿ ವಹಿಸಿ.

ಅ) ಆರೋಗ್ಯದ ಬಗ್ಗೆ ಯಾವಾಗಲೂ ಮಾತನಾಡಬೇಡಿ. ತನ್ನ ಆರೋಗ್ಯದ ಬಗ್ಗೆ ಯಾವಾಗಲೂ ಒಳ್ಳೆಯದನ್ನೇ ಮಾತನಾಡಿ.

ಬ) ಆರೋಗ್ಗಯದ ಬಗ್ಗೆ ಚಿಂತಿಸುವುದನ್ನು ಬಿಡಿ. ಅದನ್ನು ನೆನಪಿಗೆ ತರದಂತೆ ಯೋಗ ಮಾಡಿ.

ಸಿ) ಆದರೆ ಆರೋಗ್ಯದ ಬಗ್ಗೆ ಸರಿಯಾದ ವಿವರ ನಿಮ್ಮಲ್ಲಿರಬೇಕು. ಅದು ಸಂದರ್ಭ ಬಂದಾಗ ಅವುಗಳ ವಿಷಯವನ್ನು ಡಾಕ್ಟರ್‌ ಹತ್ತಿರ ಚರ್ಚಿಸಬಹುದು.

ಡ) ದೇಹ ತುಕ್ಕು ಹಿಡಿದು ನಿಷ್ಪ್ರಯೋಜಕ ಆಗುವುದಕ್ಕಿಂತ, ದೇಹ ಇತರ ಸಂತೋಷದ ಕ್ಷಣಗಳಲ್ಲಿ ಭಾಗವಹಿಸಲಿ.

ಈ) ಅಪಯಶಸ್ಸಿನ ಬಗ್ಗೆ ಹೆದರುವುದು ಮೂರ್ಖತನ. ದೇವರು ಸಹ ಸೋತಿರುವ ಕಥೆಗಳಿವೆ. ತಮ್ಮ ಹೇಳಿಕೆಗಳಿಗೆ ಸತ್ಯದ ಪರೀಕ್ಷೆಯಲ್ಲಿ ಗೆಲ್ಲಬೇಕು. ಅದಕ್ಕಾಗಿ ವಿಷಯದ ಬಗ್ಗೆ ಅರಿವು ಮತ್ತು ಜ್ಞಾನ ನಿಮ್ಮ ನಂಬಿಕೆಯನ್ನು ಬಲಗೊಳಿಸುತ್ತದೆ.

ದೊಡ್ಡದಾಗಿ ಯೋಚಿಸಲು ಸಾಧ್ಯವಾಗುವುದು ನಿಮ್ಮ ಆರೋಗ್ಯದಿಂದ. ,ನೀವಿರುವ ವಾತಾವರಣ ಮತ್ತು ವಿಷಯದ ಬಗ್ಗೆ ಮಾಹಿತಿ ಮತ್ತು ಮನಸ್ಸಿನ ಪ್ರಫುಲ್ಲತೆ ಬಗ್ಗೆ ಹೇಳಿದ್ದೇವೆನಿಮ್ಮ ಭಾಷೆ ಯಾವಾಗಲೂ ಧನಾತ್ಮಕವಾಗಿರಬೇಕು. ಭಾಷೆ ಬಳಕೆ ಜಾಗ್ರತೆಯಾಗಿದ್‌ದರೆ ಆಗುವ ಋಣಾತ್ಮಕ ಪರಿಣಾಮವನ್ನು ತಡೆಯಬಹುದು. ನಮ್ಮಷ್ಟಕ್ಕೆ ಜನರು ತೆಗೆದುಕೊಂಡ ವಿಷಯದ ಬಗ್ಗೆ ಅವರು ಸಹ ಸಕ್ರೀಯವಾಗಿ ಭಾಗವಹಿಸಬೇಕು.

ನಮ್ಮ ಮಾತು ಆರೋಗ್ಯಕರವಾಗಿರಬೇಕು. ಬಳಸುವ ಶಬ್ಧಗಳು ವಿಷಯಕ್ಕೆ ಸಂಬಂಧ ಪಟ್ಟಿದ್ದಾಗಿರಬೇಕು ಮತ್ತು ಇತರರಿಗೆ ಅದು ಅರ್ಥವಾಗುವಂತಿರಬೇಕು.. ನಾಯಕತ್ವದ ಗುಣವನ್ನು ಪಡೆದು ಸರಿಯಾದ ತರಬೇತಿ ಪಡೆದರೆ ಯೋಚನೆ, ಯೋಜನೆಯಾಗಿ ಒಂದು ಉತ್ತಮ ಫಲಿತಾಂಶಕ್ಕೆ ಕಾಯದೇ ನಾವು ನಮ್ಮ ಸಂಸ್ಥೆಗೆ ಒಂದು ಒಳ್ಳೆಯ ಹೊಸ ವಿಭಾಗ ಅಥವಾ ಹೊಸ ಸಂಸ್ಥೆಗೆ ಅಂಕುರ ಹಾಕುವ ಅನುಭವ ನಿಮ್ಮದಾಗಬಹುದು.

ಆದರೂ ದೊಡ್ಡದಾಗಿ ಕಾಣುವ ಕನಸು ಮತ್ತು ಅದರ ಹಿಂದೆ ಪ್ರೇರಣೆಯಾಗಿ ನಿಂತ ನಂಬಿಕೆಯಿಂದ ಯಾವಾಗಲೂ ಯಶಸ್ಸು ಸಾಧ್ಯವಿಲ್ಲ. ಕಾರಣ ಪಾಲುದಾರ ವ್ಯಕ್ತಿಗಳ ಅಂತರಂಗದ ಹಾಗೂ ಬಹಿರಂಗದ ಒತ್ತಡಗಳನ್ನು ನಾವು ಸರಿಯಾದ ರೀತಿಯಲ್ಲಿ ವಿಶ್ಲೇಷಣೆಗೆ ಗುರಿ ಮಾಡಿಲ್ಲ. ಆದ್ದರಿಂದ ಇಷ್ಟದಂತೆ ಯಶಸ್ಸು ಬರದಿದ್ದರೆ ನಿರಾಶರಾಗುತ್ತೇವೆ. ಜೀವನ ದಃಖದಾಯಕವಾಗಿ, ಮನೋಭಾವವೇ ಬೇರೆಯಾಗಬಹುದು. ಆದ್ದರಿಂದ ಮಾನಸಿಕ ರೋಗ ಪೀಡಿತನಾಗುವ ಸಾಧ್ಯತೆಯಿದೆ. ಆದ್ದರಿಂದ ಕನಸ್ಸನ್ನು ಕಾಣುವುದು ಮತ್ತು ಯಶಸ್ಸುನ್ನು ಪಡಯುವುದರಲ್ಲಿ ವೈಯಕ್ತಿಕವಾಗಿ ನೀವೇ ಅದರ ಜವಾಬ್ದಾರಿಯನ್ನು ಹೊರುವುದು ಸರಿಯಲ್ಲ. ಅದರಲ್ಲಿ ಅನೇಕರ ಸಹಕಾರ ಮತ್ತು ಸಂವೇದನೆಗಳು ಕಾರಣವಾಗುತ್ತವೆ. ಆದ್ದರಿಂದ ನಾವು ನಮ್ಮ ಈ ಅನುಭವವನ್ನು ನಾವು ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಉಪಯೋಗಿಸಬೇಕು. ಯಶಸ್ಸು ಮತ್ತು ಸೋಲಿನ ಮಧ್ಯೆ ಮುಖ್ಯವಾಗಿ ಇರುವುದು ನಮ್ಮ ಮನೋಭೂಮಿಕೆ (Attitude) ಅಥವಾ ಮನೋಭಾವ ಆಯಾಯ ಸಂದರ್ಭದಲ್ಲಿ ನಮ್ಮ ನಡವಳಿಕೆಗೆ ಕಾರಣವಾಗುತ್ತದೆ.

ಆದ್ದರಿಂದ ಒಂದು ಮಾತು ನೆನಪಿಡಬೇಕು. ಸೋಲು ಗೆಲುವಿಗಿಂತ ನಮ್ಮ ಉದ್ದೇಶ ಒಳ್ಳೆಯದಿದ್ದರೆ ಅದು ಗುರಿ ಇಲ್ಲದವನ ಜೀವನಕ್ಕಿಂತ ಹೆಚ್ಚಿನ ಶಸ್ತು, ಬುದ್ಧಿವಂತಿಕೆಯ ಶಕ್ತಿ ಪಡೆದಿರುತ್ತಾನೆ. ಆದ್ದರಿಂದ ನಮ್ಮ ಯಶಸ್ಸು ನಮ್ಮ ಜೀವನದ ಕೆಲವು ಉದ್ದೇಶಗಳ ಈಡೇರಿಕೆಗೆ ಸಹಾಯ ಮಾಡುತ್ತದೆ. ಆದರೆ ಆ ಯಶಸ್ಸೇ ಜೀವನವಲ್ಲ. ಜೀವನ ದೊಡ್ಡದು ಬದುಕು ದೊಡ್ಡದು. ನಮ್ಮ ಅದೃಷ್ಟ ಸರಿಯಿಲ್ಲ ಎಂದು ತನ್ನ ಸೋಲಿಗೆ ಕಾರಣ ಕೊಡುವುದರಿಂದ ನಮಗೆ ಏನು ಉಪಯೋಗವಾಗದು. ತಮ್ಮ ಉದ್ದೇಶದ ಹಿಂದೆ ತಮ್ಮ ಕರ್ತವ್ಯದ ಪುಸ್ತಕವನ್ನು ತೆರೆದಿಡಬೇಕು. ನಮ್ಮ ದೃಷ್ಟಿಯಲ್ಲಿ ಉದ್ದೇಶ ಮತ್ತು ನಂಬಿಕೆ ಯಶಸ್ಸನ್ನು ತರದೇ ಇರಲಿಕ್ಕಿಲ್ಲ. ನಮ್ಮ ಪ್ರಯತ್ನ ನಮ್ಮದೇ. ಆದ್ದರಿಂದ ಯಶಸ್ಸು ನಮ್ಮದೇ ಆದ್ದರಿಂದ ಸೋಲನ್ನು ವಿಶ್ಲೇಷಿಸಲು ತಯಾರಾಗಿ ಉತ್ತಮ ಜೀವನ ನಿಮ್ಮದಾಗಲಿ.

ಕೊನೆಯದಾಗಿ ಫುಟ್‌ ಬಾಲಿನಲ್ಲಿ‌ ಕೊನೆಗೆ ನಿರ್ಣಯಿಸುವುದು ಆಟಗಾರ ಎಷ್ಟು ಗೋಲು ಹೊಡೆದಿದ್ದಾನೆ ಮತ್ತು ಪ್ರತಿಯೊಬ್ಬನ ಗೋಲು ಒಟ್ಟಾಗಿ ಒಂದು ಟೀಮ್ನ ಎಷ್ಟು ಗೋಲು ಹೊಡೆದಿದೆ ಎನ್ನುವುದು ಮುಖ್ಯ..ಅದೇ ರೀತಿ ಹಾಕಿಯಲ್ಲಿ. ಎಲ್ಲ ಆಟಗಾರರು ಚೆನ್ನಾಗಿ ಆಡಿದರು.ಆದರೆ ಟೀಮ್‌ ಸೊತಿತು. ಆಧರೂ ಯಶಸ್ಸು ಒಳ್ಳೆಯ ಆಟ ಆಡಿ ಸೋತಿತು ಎನ್ನಬಹುದೇನೋ







ವಿವೇಕ ಶಾನಭಾಗ ಅವರು ವಿ.ಎಸ್.ಶಾನಭಾಗ ಎಂದೆ ಪರಿಚಿತರು. ನಿವೃತ್ತ ಬ್ಯಾಂಕ ಉದ್ಯೋಗಿಯಾಗಿರುವ ಇವರ ಹಿರಿಯರು ಮೂಲತಃ ಗೋಕರ್ಣದವರು. ಶ್ರೀಯುತರು ಮುಂಬೈಯಲ್ಲಿ ನೆಲೆಗೊಂಡಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಇವರು ಈಗಾಗಲೇ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಈ ಬರಹ ತಮ್ಮ ಓದಿಗಾಗಿ. -ಸಂಪಾದಕರು

60 views0 comments

Comments


bottom of page