ಚೈತ್ರಮಾಸದಿ
ಯುಗದ ಆರಂಭ
ಸೃಷ್ಟಿಯ ಪ್ರಾರಂಭ
ಕಾಲಕ್ಕೂ-ನಮಗೂ
ನೇರ-ನಂಟು
ಇದುವೇ ಬ್ರಹ್ಮಗಂಟು.
ಪಚ್ಚೆ ಹಸಿರ ತುಂಬಿ
ನಳನಳಿಸುವ
ಗಿಡ-ಮರ-ಬಳ್ಳಿ
ಬೋಳಾಗಿ
ಈ ನವಮಾಸದಲಿ
ಎಲೆ ಚಿಗುರಿ
ರೆಂಬೆ-ಕೊಂಬೆಯೆಲೆಲ್ಲಾ
ಹೂ-ಕೊನರಿ,
ಕಾಯಾಗಿ
ಕಾಯಿ-ಹಣ್ಣಾಗಿ
ಹಣ್ಣು-ಮಣ್ಣಳೊಂದಾಗಿ
ಮಣ್ಣಾಯಿತು ಜೀವರಸ.
ಮತ್ತದೇ ನಿಸರ್ಗಚಕ್ರ
ನಿತ್ಯನಿಯಮದ ಸೊಬಗಿನಾಟ.
ಸೃಷ್ಟಿ-ಲಯ
ಹಗಲು-ಇರುಳು
ಕತ್ತಲು-ಬೇಳಕು
ಹುಟ್ಟು-ಸಾವಿನಂತೆ
ಜೀವನ ಚಕ್ರವೂ
ಸುಖ-ದುಃಖ
ನೋವು-ನಲಿವುಗಳ
ಆಗರ,ನಿರಂತರ.
ಈ ಗಹನ ಸತ್ಯ
ಮನದಟ್ಟಾದಾಗಲೇ
ಬದುಕು ನಿತ್ಯ ವಸಂತ.
ಒಣಗಿದ ಮರದಲಿ
ಚಿಗುರು ಮೊನಸುವಂತೆ
ಬೇಸರ ಮನದಲಿ
ನೆಮ್ಮದಿ ಹೊರಹೊಮ್ಮಲಿ
ಜೀವನ ಹಬ್ಬವಾದರೇ
ಸಂತಸ ಚಿಲುಮೆಯಾಗಲಿ
ಬೇವು-ಬೆಲ್ಲದಂತೆ
ಸಮರಸದಿ ಸಾಗಲಿ
ಎಂದಿದೆ ಈ ನವ ಯುಗಾದಿ!!
*ಸೋಮನಾಥ.ಡಿ.*
ನಮ್ಮ ಬಳಗದ ಕವಿ ಚಿಂತಕ ಪ್ರಾಂಶುಪಾಲ ಸೋಮನಾಥ ಡಿ.ಅವರು ಯುಗಾದಿ ಕುರಿತು ಬರೆದ ನಿತ್ಯ ಸತ್ಯದ ಕವಿತೆಯನ್ನು ಇಂದು ಪ್ರಕಟಿಸುವ ಖುಷಿ ನನ್ನದು. ಸೋಮನಾಥ ಡಿ.ಅವರು ನಿತ್ಯ ಸತ್ಯವನ್ನು ತಮ್ಮ ಬರವಣಿಗೆಯಲ್ಲಿ ಪ್ರತಿಪಾದಿಸುತ್ತಿರಲಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
👌🙏🙏