ಎರಡು ದಿವಸಗಳ ಕಾಲ ಜಿಲ್ಲೆಯ ಸಾಹಿತ್ಯ ಸಹೃದಯರನ್ನು ಒಗ್ಗೂಡಿಸಿ ಸಾಹಿತ್ಯದ ಸವಿ ಉಣ್ಣಿಸುವ ಮೂಲಕ ಯಶಸ್ಸಿನ ಮುನ್ನುಡಿ ಬರೆದಿದೆ.
ಹಿಚ್ಕಡದ ಕವಿ ಶಾಂತಾರಾಮ ನಾಯಕ ಅವರ ಸರ್ವಾಧ್ಯಕ್ಷತೆಯಲ್ಲಿ ಕಸಾಪ ಜಿಲ್ಲಾಧ್ಯಕ್ಚ ಬಿ.ಎನ್.ವಾಸರೆ ಅವರ ಸಾರಥ್ಯದ ಸಮ್ಮೇಳನ ಅರ್ಥಪೂರ್ಣತೆ ಪಡೆಯಿತು. ಪವಿತ್ರ ಉಳವಿಕ್ಷೇತ್ರದ ಶರಣರ ನೆಲದಲ್ಲಿ ಸಾಹಿತ್ಯ ಸಾಮರಸ್ಯದೆಡೆಗೆ ಸಾಕ್ಷಿಯಾಯಿತು.
ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ ಸಮ್ಮೇಳನ ಉದ್ಘಾಟಿಸಿ, ಕನ್ನಡ ನಾಡುನುಡಿಯ ಬದ್ದತೆಗೆ ನುಡಿಸೇವಕರು ಕಂಕಣ ಬದ್ದರಾಗಬೇಕು ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಸಮ್ಮೇಳನದಲ್ಲಿ ಭಾಗವಹಿಸಿ,ಗಡಿ ತಂಟೆಯ ಮೂಲಕ ಬಾಂದವ್ಯಕ್ಕೆ ದಕ್ಕೆ ತರುವವರಿಗೆ ಸಮ್ಮೇಳನ ತಕ್ಕ ಉತ್ತರ ನೀಡಬೇಕು ಎಂದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಝಮಿರುಲ್ಲಾ ಷರೀಪ ದ್ವಜ ಹಸ್ತಾಂತರಿಸಿದರು.
ಸಾಹಿತಿಗಳಾದ ವಿಷ್ಣು ನಾಯ್ಕ,ಡಾ.ಎನ್.ಆರ್. ನಾಯಕ,ಜನಪ್ರತಿನಿಧಿಗಳು ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಬದಲ್ಲಿ ಶಾಂತಾರಾಮ ನಾಯಕರ" ನೆನಪಿನ ಹಾಲಡಗಿ" ಹಾಗೂ ಆರ್.ಎನ್.ನಾಯಕರ " ಉದಾತ್ತ ನಾರಾಯಣ" ಕೃತಿಗಳ ಲೋಕಾರ್ಪಣೆ ಮಾಡಲಾಯಿತು.
ನಂತರ ಉ.ಕ.ಜಿಲ್ಲೆಯ ಬುಡಕಟ್ಟು ಬದುಕು,ಬವಣೆ ಸಂಸ್ಕೃತಿ ಕುರಿತಾಗಿ ಗೋಷ್ಠಿ ನಡೆಯಿತು.
ಬುಡಕಟ್ಟು ಕುಣಬಿಗಳ ಕುರಿತಾಗಿ ಲೇಖಕಿ ಸುನಿತಾ ಕುಣಬಿ,ಬುಡಕಟ್ಟು ಗೌಳಿಗರ ಕುರಿತು ಗೌಳಿ ಮುಖಂಡ ದೊಂಡು ಪಾಟೀಲ್, ಬುಡಕಟ್ಟು ಸಿದ್ದಿಗಳು ಕುರಿತಾಗಿ ಜುಲಿಯಾನ ಫರ್ನಾಂಡೀಸ್, ಬುಡಕಟ್ಟು ಹಾಲಕ್ಕಿಗಳು ಕುರಿತು ಡಾ.ಶ್ರೀಧರ ಗೌಡ ಉಪ್ಪಿನಗಣಪತಿ,ಬುಡಕಟ್ಟು ಗೊಂಡರ ಕುರಿತು ಲೇಖಕಿ ಎಂ.ಜಿ.ತಿಲೋತ್ತಮೆ ಭಟ್ಕಳ ಪ್ರಬಂಧ ಮಂಡಿಸಿದರು.ಎಂಎಲ್ಸಿ ಶಾಂತಾರಾಮ ಸಿದ್ದಿ ಅಧ್ಯಕ್ಷತೆ ವಹಿಸಿ,ಸೀಮಿತ ಅವಧಿಯಲ್ಲಿ ಪ್ರಬಂಧ ಮಂಡನೆಯಾಗಿದ್ದು,ಸರಕಾರ ಮಟ್ಟದಲ್ಲಿ ಬುಡಕಟ್ಟು ಸಮುದಾಯಗಳ ಸಮಗ್ರ ಏಳಿಗೆಗೆ ಶ್ರಮಿಸುವುದಾಗಿ ಹೇಳಿದರು.
ಕವಿಕಾವ್ಯ ಸಮಯ ಗೋಷ್ಠಿಯಲ್ಲಿ ಡಾ.ಶ್ರೀಪಾದ ಶೆಟ್ಟಿ ಅಧ್ಯಕ್ಷತೆ ವಹಿಸಿ,ಸಾಹಿತ್ಯ ಪರಂಪರೆ,ವರ್ತಮಾನದ ಓಘ,ಅದು ಸಾಗುತ್ತಿರುವ ವರೀತಿಯ ಮೇಲೆ ಬೆಳಕುಚೆಲ್ಲಿ ಕವಿತೆ ಸಹಜವಾಗಿ ಸೊಗಸೆನಿಸಬೇಕು.ಗಿಡ ಚಿಗುರಿ ಮೈಯರಳಿಸಿ,ಸೊಬಗೇರಿ ನಿಲ್ಲುವಂತೆ ಕವಿತೆ ಹೂರಣಗೊಳ್ಳಬೇಕು ಎಂದು ಅರ್ಥಪೂರ್ಣ ಮಾತುಗಳನ್ನಾಡಿದರು.ಅದರಂತೆ,ಕವಿಗಳ ಆಯ್ದ ಸಾಲುಗಳನ್ನು ಉಲ್ಲೇಖಿಸಿ ಕವಿಗಳಿಗೆ ಸ್ಪೂರ್ತಿಯ ಸೆಲೆಮೂಡಿಸಿದರು.ಡಾ.ಆರ್.ಜಿ.ಹೆಗಡೆ ಆಶಯ ನುಡಿಗಳನ್ನಾಡಿದರು.ಕವಿಗಳಾದ ಜೆ.ಪ್ರೇಮಾನಂದ,ಸಿಂಧುಚಂದ್ರ ಹೆಗಡೆ,ಸಾತು ಗೌಡ,ಬಾಲು ಪಟಗಾರ,ಮಂಜುನಾಥ ಯಲ್ವಡಿಕವೂರ,ಎಂಟಿ ನಾಯ್ಕ,ಉಮೇಶ ನಾಯ್,ಸಿ.ಡಿ.ಪಡುವಣಿ,ಗಣೇಶ ಜೋಶಿ,ರೇಣುಕಾ ರಮಾನಂದ,ಎಚ್.ಎಂ.ಮಾರುತಿ,ಸುಬ್ರಾಯ ಗಾಂವ್ಕಾರ ಬಿದ್ರೆಮನೆ, ದೇವಿದಾಸ ನಾಯಕ,ಎಂಎಸ್ ಹೆಗಡೆ,ಭೀಮಾಶಂಕರ ಅಜನಾಳ,ಮಮತಾ ನಾಯ್ಕ,ಸಂದ್ಯಾ ನಾಯ್ಕ,ನಾರಾಯಣ ಹೆಗಡೆ.ಸೀತಾ ದಾನಗೇರಿ,ಭವ್ಯಾ ಹಳಿಯೂರು,ದತ್ತಗುರು ಕಂಠಿ,ಶಿವಾಜಿ ಜೋಮಣ್ಣನವರ್,ಶಿವಲೀಲಾ ಹುಣಸಗಿ,ಶ್ರೀ ರಂಗ ಕಟ್ಟಿ,ಎನ್.ಡಿ.ಅಂಕೋಲೆಕರ್,ಶುಭಾ ಗಿರಣಿಮನೆ,ಉಷಾ ಭವಾನಿಶಂಕರ ಕವಿತೆ ವಾಚಿಸಿದರು.
ಎಡನೇಯ ದಿವಸ ಉ.ಕ ಜಿಲ್ಲೆಯ ವಾಭಿವೃದ್ದಿ ಮುನ್ನೋಟ ಗೋಷ್ಠಿಯ ಅಧ್ಯಕ್ಷತೆ ಯನ್ನು ಸಂಕಲ್ಪ ಅಧ್ಯಕ್ಷ ಪ್ರಮೊದ ಹೆಗಡೆ ವಹಿಸಿದ್ದರು. ವಿಮರ್ಶಕ ಆರ್.ಡಿ.ಹೆಗಡೆ ಆಶಯ ಮಾತನ್ನಾಡಿದರು.ಸಾಮಾಜಿಕ ಮತ್ತು ರಾಜಕೀಯ ಕುರಿತು ಜೆ.ಡಿ.ಮನೋಜೆ,ಸಾಹಿತ್ಯ ಸಂಸ್ಕೃತಿಯ ಕುರಿತು ಲೇಖಕಿ ನಾಗರೇಖಾ ಗಾಂವಕರ್,ಪರಿಸರ ಅಭಿವೃದ್ಧಿ ಕುರಿತು ಶಿವಾನಂದ ಕಳವೆ,ಯಕ್ಷಗಾನ ಜನಪದ ಕುರಿತು ಎಂ.ಆರ್ ನಾಯಕ ವಿಷಯ ಮಂಡಿಸಿ ಅರ್ಥಪೂರ್ಣ ಚಿಂತನೆಗೆ ದಾರಿಮಾಡಿಕೊಟ್ಟರು.
*ಸುಬ್ರಾಯ ಗಾಂವ್ಕಾರ ಬಿದ್ರೆಮನೆ*
Comments