top of page

ಯಲ್ಲಾಪುರ ನಗರಕ್ಕೆ ಗಂಗೆಯಾಗಲಿರುವ ತಟ್ಟಿಹಳ್ಳದ ನೀರು!

Updated: Sep 11, 2020

ಬೇಡ್ತಿ ಸರ್ವಕಾಲ ಕುಡಿಯುವ ನೀರಿನ ಯೋಜನೆ ಸರ್ವೆ ಆಗುತ್ತಿರುವಾಗಲೇ ಕರಾವಳಿ ಮುಂಜಾವು ತನ್ನ ಮುಖ ಪುಟದಲ್ಲಿ ಲೇಖನ ಪ್ರಕಟಿಸಿ ಈ ಯೋಜನೆ ಸಾದುವಲ್ಲವೆಂದು ಸಾರಿತ್ತು. ಆದರೆ ಆ ಯೋಜನೆ ಅನುಷ್ಠಾನಕ್ಕೆ ಬಂದು ಈಗ ವಿಫಲವಾಗಿರುವದು ವಾಸ್ತವ. ಕಳೆದ ಮೂರು ವರುಷಗಳಿಂದ ಬೇಡ್ತಿ ನದಿಯಿಂದ ನೀರು ಬರುತ್ತಿಲ್ಲ. ಆದರೆ ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರರು ಯಲ್ಲಾಪುರ ನಗರದಲ್ಲಿ ಬೆಳೆಯುವ ಜನಸಂಖ್ಯೆಯನ್ನು ಗಮನದಲ್ಲಿಟ್ಟು ಕೊಂಡು ಹೊಸ ಕುಡಿಯುವ ನೀರಿನ ಯೋಜನೆಗೆ ಕೈ ಹಾಕಿದ್ದಾರೆ. ಅದೇ, ಯಲ್ಲಾಪುರ ನಗರದಿಂದ 27 ಕಿ.ಮೀ.ದೂರದಲ್ಲಿರುವ ಹಳಿಯಾಳ ತಾಲೂಕಿನ ತಟ್ಟಿಹಳ್ಳ ಡ್ಯಾಮ್ ನಿಂದ ಯಲ್ಲಾಪುರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ. ಈ ತಟ್ಟಿಹಳ್ಳದ ಆಣೇ ಕಟ್ಟಿನ ನೀರು ಯಲ್ಲಾಪುರ ನಗರಕ್ಕೆ ಗಂಗೆಯಾಗಲಿದೆ. ಈ ಯೊಜನೆಗೆ ಬೇಡ್ತಿ ನೀರಿಗಾಗಿ ಕಟ್ಟಿದ ಮೇಘಾ ನೀರಿನ ಟ್ಯಾಕುಗಳನ್ನು ಹಾಗೂ ಕೆಲ ಪೈಪ್ ಲೈನುಗಳನ್ನು ಬಳಸಿ ಕೊಳ್ಳ ಬಹುದಾಗಿದೆ. ಎಲ್ಲರೂ ಅಂದುಕೊಂಡಂತೆ ಈ ಯೊಜನೆ ಯಶಸ್ವಿಯಾದಲ್ಲಿ ಯಲ್ಲಾಪುರ ನಗರಕ್ಕೆ ಇದು ವರವಾಗುವದಲ್ಲದೇ ಹೆಬ್ಬಾರರ ಹೆಸರು ‘ನೀರು ಹೆಬ್ಬಾರ’ ಎಂದು ಇತಿಹಾಸ ಸೇರಿಕೊಳ್ಳಲಿದೆ!


ಈಗಾಗಲೇ ಈ ಕುಡಿಯುವ ನೀರಿನ ಯೋಜನೆಯ ಸರ್ವೇ ಕಾರ್ಯವನ್ನು ಕರ್ನಾಟಕ ನೀರು ಸರಬರಾಜು ಮಂಡಳಿ ಪ್ರಾರಂಭಿಸಿದ್ದು ಇದಕ್ಕೆ ಯಲ್ಲಾಪುರದ ಪಟ್ಟಣ ಪಂಚಾಯತ ರೂ.3.8 ಲಕ್ಷ ಮಂಡಳಿಗೆ ನೀಡಿದೆ. ಸಚಿವರ ಸೂಚನೆಯ ಮೇರೆಗೆ ಕರ್ನಾಟಕ ನೀರು ಸರಬರಾಜು ಮಂಡಳಿ ಸರ್ವೇಕಾರ್ಯ ಮುಗಿದ ನಂತರ ಸಮಗ್ರ ಯೋಜನಾ ವರದಿಯನ್ನು ಸಿದ್ದ ಪಡಿಸಿ ಸರಕಾರಕ್ಕೆ ನೀಡಲಿದೆ.







ಬೇಡ್ತಿ ತಟ್ಟಿಹಳ್ಳ ಯೋಜನೆ


ಈ ಕುಡಿಯುವ ನೀರಿನ ಯೋಜನೆ ಅತ್ಯಂತ ಯಶಸ್ವಿಯಾಗಿ ಆದಷ್ಟು ಬೇಗ ಅನುಷ್ಠಾನಗೊಳ್ಳಲಿ ಎಂಬುದೇ ಯಲ್ಲಾಪುರದವರ ಹಂಬಲ.

-ಬೀರಣ್ಣ ನಾಯಕ ಮೊಗಟಾ.


1 Kommentar


shreepadns
shreepadns
11. Sept. 2020

ಬಹಳ ಉಪಯುಕ್ತವಾದ ಲೇಖನ ಬೀರಣ್ಣಾ.ಬರೆಯುತ್ತಾ ಇರು. ಡಾ.ಶ್ರೀಪಾದ ಶೆಟ್ಟಿ.

Gefällt mir

©Alochane.com 

bottom of page