[ದಿ. ಶ್ರೀಪಾದ ಹೆಗಡೆಯವರಿಗೊಂದು ಕಾವ್ಯರೂಪಿ ನುಡಿನಮನ ]

ಸ್ವರ್ಗಸೇರುವದಾರಿ
ಹೆಜ್ಜೆ ನೂರಾರು
ಬಂದಾಗ ಮಿಂಚಿಲ್ಲ
ತೆರಳೆ ಮಳೆಯಿಲ್ಲ!
ಯಕ್ಷರಂಗದ ಗಗನ
ಮಿಂಚಾಗಿ ಬಂದು
ಬಣ್ಣಬಣ್ಣದ ಮುಗಿಲು
ಮಳೆಗರೆರೆದರಿವರು
ಕುಂತಾಗ
ಲೊಂದು ತೆರ
ನಿಂತಾಗ ಲೊಂದು
ಮಾಟದಲಿ ಒನಪಿತ್ತು
ನೆನಪು ಗುರುವಿನದು
ಹೆಜ್ಜೆಯಿಟ್ಟರೆ ಅಲ್ಲಿ ತಾಳ ಕಟೆದಿತ್ತು
ಬೆರಳ ಚಾಚಿದರಲ್ಲಿ
ನುಡಿಯ ಮೊನಚಿತ್ತು
ವೇಷಧರಿಸಿದ ಕ್ಷಣವೆ
ಪಾತ್ರದಾವೇಷ
ಅಲ್ಲಿಲ್ಲ ಲೌಕಿಕದ ನೋಟ ಮರುಳಾಟ
ಮಾನ್ಯತೆಗೆ ಮೆರಗಾದ
ಕುಶಲ ಕಲೆಗಾರ
ಕುಂಚ ವಿಟ್ಟರು ಚಿತ್ರ
ಇಹುದು ಬಹುಕಾಲ
ಗುರುಕರುಣೆ ಗುರುಕರುಣೆ ಗುರುಕರುಣೆ ಮಾರ್ಗ
ಹೊರಟಿದ್ದು ಗುರುವಾರ
ಮುಟ್ಟಿದರು ಪಾದ.

Comments