top of page

🍁🍁🌷🍁🍁🌷🍁🍁 ಮುಪ್ಪು, ವಾರ್ಧಕ್ಯ, ಮುದಿತನ, ಜೀವನದ ಸಂಧ್ಯಾಕಾಲ ಅಥವಾ ೬೦+..ಏನಂತೀರೋ ಅನ್ರೀ...

ಮುಪ್ಪಿಗನೂ ಭಾಳಽಽ ಛಂದ ಛಂದ ಹೆಸರು ಅವ..

ಒಬ್ರ ಅಂತಾರ ಸನ್ಯಾಸಾಶ್ರಮ....

ಇನ್ನೊಬ್ರು ಅಂತಾರ ವಾನಪ್ರಸ್ಥಾಶ್ರಮ......

ನಾನಂತೀನಿ "ಆನಂದಾಶ್ರಮ".....


ಮುಪ್ಪಿನ್ಯಾಗ ಹೆಂಗ ಇರಬೇಕು....

ಮನ್ಯಾಗ ಇದ್ರ ಆಶ್ರಮದಾಗ ಇದ್ಧಂಗ ಇರಬೇಕು...

ಆಶ್ರಮದಾಗ ಇದ್ರ ಮನ್ಯಾಗ ಇದ್ಧಂಗ.......


ಇಲ್ಲದ್ರಾಗ ತಲೀ ಹಾಕೋಹಂಗಿಲ್ಲಾ....

ಹಳೇ ನೆನಪು ತಗಿಯೋಹಂಗಿಲ್ಲಾ......

"ನಮ್ಮ ಜಮಾನಾದಾಗ" ಅನ್ನೋ ಹಂಗಿಲ್ಲಾ....

ಅಪಮಾನ ಆದ್ರೂ ತಿಳ್ಕೊಳ್ಳೋ ಹಂಗಿಲ್ಲಾ.....


ಸುಖದ ಬುಟ್ಟಿ ತುಂಬಕೋತ ಹೋಗೂದು.....

ಎಲ್ಲಾರ ಜತೀಗೆ ದೋಸ್ತಿ ಮಾಡಕೋತ ಹೋಗೂದು..

ಸಿಟ್ಟು ಸೆಡವು ಮೋಹ ಇವನ್ನ ದೂರ ಮಾಡಕೋತ ಹೋಗೂದು......

ಸಂತೋಷ , ಆನಂದವನ್ನ ಹಂಚಿಕೋತ ಹೋಗೂದು..


ಮುದಿತನ ಸಹಿತ ಭಾಳಽಽ ಛಂದ ಇರ್ತದ.....

ಲೆನ್ಸ್ ಇಂಪ್ಲಾಂಟ್ ದಿಂದ ಸ್ವಚ್ಛ ಕಾಣಸ್ತದ......

ಹೊಸಾ ಹಲ್ಲಿನ ಸಿಟ್ಟಿನಿಂದ ಸಹಜ ತಿನ್ಲಿಕ್ಕೆ ಬರ್ತದ...

ಕಿವಿ ಯಂತ್ರ ದಿಂದ ಸ್ಪಷ್ಟ ಕೇಳಸ್ತದ...


ಪಾರ್ಕಿನ್ಯಾಗ ಹೋಗಿ ಮಸ್ತ್ ಅಡ್ಯಾಡಿ ಬರಬೇಕು.....ಕ್ಲಬ್ಬಿನ್ಯಾಗ ಹೋಗಿ ಮೂರೆಲಿ ಆಟಾ ಆಡಬೇಕು......

ದೇವ್ರ ಗುಡಿಗೆ ಹೋಗಿ ಭಜನೀ ಮಾಡಬೇಕು.... ಬೇಕಂದ್ರ ಟೀವಿ ಸೀರಿಯಲ್ ನೋಡಬೇಕು....

ಹಳೇ ದೋಸ್ತ್ರು ಭೆಟ್ಯಾದ್ರಂದ್ರ ಒಂದ ಪೆಗ್ ಇಳಸಬೇಕು......


ಮಗನ ಎದುರಿಗೆ ಸುಮ್ನಿರಬೇಕು.....

ಮೊಮ್ಮಕ್ಕಳ ಜತೀಗೆ ಆಡಕೋತ ಇರಬೇಕು.....

ಹೆಂಡತಿ ಜತೀಗೆ ಜಗಳಾಡಕೋತ ಇರಬೇಕು...ದೋಸ್ತ್ರ ಜತೀಗೆ ಹರಟೀ ಹೊಡಕೋತ ಇರಬೇಕು..........


ಸಾಧ್ಯ ಆದಾಗ ಎಲ್ಯರೇ ಟೂರಿಗೆ ಹೋಗಬೇಕು.......

ಹೆಂಡತಿ ಲಗೇಜನೂ ಜತೀಗೆ ಒಯ್ಯಬೇಕು.......

ಎಕದಮ್ ದಿಲ್ ಖುಲಾಸ್ ಆಗಿ ತಿರಗ್ಯಾಡಬೇಕು.......ದಣದೇವಿ ಅಂತ ಅನಸ್ತಂದ್ರ ಅಲ್ಲೇ ಕೂತ್ಕೋಬೇಕು..............


ಲಾಯನ್ಸ್ , ರೋಟರೀ ಅಂತ ಅಟೆಂಡ್ ಮಾಡೋದು.....

ವ್ಯಾಳ್ಯಾ ಇತ್ತಂದ್ರ ಹೆಂಗ ಬರ್ತದ ಹಂಗಽಽ ಹಾಡೋದು..

ಒಬ್ರ ಇದ್ದಾಗ ಮ್ಯೂಸಿಕ್ ಹಚ್ಚಿ ಕುಣಿಯೋದು....

ಯಾರರೇ ನೋಡಿದ್ರ ಏರೋಬಿಕ್ ಎಕ್ಸರಸೈಜ್ ಅಂತ ಅನ್ನೋದು.............


ಬ್ಯಾಸರಾತಂದ್ರ ಮಲಕೊಂಡ ಬಿಡೋದು.....

ಎಚ್ಚರಾತಂದ್ರ ಫೇಸ್ ಬುಕ್ ನೋಡೋದು......

ನೋಡ ನೋಡಕೋತ ಗೊರಕಿ ಹೊಡಿಯೋದು.....

ಯಾರರಽಽ ಎಬ್ಸಿದ್ರ ವಾಟ್ಸಾಪ್ ನೋಡಿದಹಂಗ ಮಾಡೋದು......


ಮನ್ಯಾಗ ಒಬ್ರ ಕಿಚನ್ ಸಂಭಾಳಿಸೋದು

ಹಾಲಿನ ಮ್ಯಾಲಿನ ಕೆನಿ ಗಾಯಬ್ ಮಾಡೋದು.....

ಹುಡಗೋರಿಗೆ ಅಂತ ಮಾಡಿದ ತಿಂಡಿ ಟೇಸ್ಟ ಮಾಡೋದು.......ಸ್ವೀಟ್ ಡಿಶ್ ಎದುರಿಗೆ ಕಂಡ್ರ ಡೈಯಾಬೇಟಿಕ್ ಅನ್ನೋದು ಮರತು ಕಟಿಯೋದು......


ಹಳೇ ಶರ್ಟ ಹಾಕ್ಕೋತ ಇರೋದು....

ಇರೋ ಅಷ್ಟು ಕೂದಲಾ ಸಾವರಿಸಿಕೋತ ಇರೋದು...

ಕನ್ನಡಿಯನ್ನಽಽ ಬೋಗಸ್ ಅನ್ನೋದು........

ಯಾರಿಲ್ಲಂದ್ರ ರಾಜಕುಮಾರ್ ಡಾಯಲಾಗ್ ಅಂದು ನೋಡೋದು....


ಸಪ್ತ ಸ್ವರಗಳ ಮೈಫಿಲ್ ನ್ನ ಭರ್ಜರಿ ರಂಗೇರಿಸಬೇಕು....

ಪಂಕ್ತಿ ಊಟದ ರುಚಿ , ಮಜಾ ಸವೀಲೇಬೇಕು....

ನಾಕ ಜನಾ ಕೂಡಿ ಹರಟೀ ಹೊಡೀಲೇಬೇಕು.....ಹೀಂಗಽಽ ಜೀವನದ ಆನಂದವನ್ನ ಅನುಭವಿಸ್ಲೇಬೇಕು......


ಸ್ವಾದ ತೊಗೋತ... ದಾಽದ ಕೊಟಗೋತ

ಸಂತೃಪ್ತ ಮನಸ್ಸಿನಿಂದ .....ಆನಂದವನ್ನ ಅನುಭವಿಸ್ಕೋತ.........

ಸಟಕ್ಕನಽಽ ನಾವೂ ಹೀಂಗ ಹೋಗಿ ಬಿಡಬೇಕಲ್ಲಾ.....

ಹೆಂಗಂದ್ರ ಹಣ್ಣೆಲಿ ಉದುರಿಧ್ಹಂಗ..... 🍁🍁🌷🍁🍁🌷🍁🍁


ದ.ರಾ.ಬೇಂದ್ರೆ.

8 views0 comments

Comments


bottom of page