ಮೂಡಿ ಬರಲಿ
ಮೂಡಿ ಬರಲಿ
ದೇಶಪ್ರೇಮ ನಮ್ಮಲಿ.
ಕೂಡಿ ಬರುವ
ಭಾವವೆಲ್ಲ
ಜಗದಲಿಂದು ಚಿಮ್ಮಲಿ.
ಮೇಲು-ಕೀಳು
ಕೊಳಕು ಕೊಚ್ಚಿ
ಮನವು ಸ್ವಚ್ಛವಾಗಲಿ.
ಒಳ್ಳೆ ಬೀಜ
ಪುಷ್ಟಿ ಗೊಬ್ಬರದಿಂದ
ಬೆಳೆಯು ಬೆಳೆದು ನಿಲ್ಲಲಿ.
ದಾನ-ಧರ್ಮವ
ಜಗಕೆ ಸಾರಿ
ಶ್ರೇಷ್ಠ ಭಾವವು ತುಂಬಲಿ.
ಸುಮತಿಯಿಂದ
ಕಾಂತಿ ಹೊಂದಿ
ಕತ್ತಲೋಡಿ ಹೋಗಲಿ.
ಊರಲೆಲ್ಲ
ಮಳೆಯು ಬಿದ್ದು
ಹಳ್ಳ-ಕೊಳ್ಳ ತುಂಬಿ ಹರಿಯಲಿ.
ಬಂಗಾರದಂತ ತೆನೆಯ
ಕಂಡ ಜನ
ನೃತ್ಯಕೆ ಹೆಜ್ಜೆಯ ಹಾಕಲಿ.
ದವಸ-ಧಾನ್ಯ
ಬೆಳೆದ ರೈತ
ನಾಡಲೆಲ್ಲ ಮೆರೆಯಲಿ.
ರಾಮರಾಜ್ಯ
ಪಡೆವ ಭಾಗ್ಯ
ಇಂದು ನಮ್ಮ ದಾಗಲಿ.
ಪೂಜಾ ನಾಯಕ ✍️.....
Comentários