ಮಾಗಿಯ ಚಳಿಯಲ್ಲಿ
- ಪ್ರಭಾಕರ ತಾಮ್ರಗೌರಿ
- Oct 4, 2020
- 1 min read
ಹಗಲೆಲ್ಲಾ ದಹಿದಹಿಸುವ ಬಿಸಿಲಿನ ಬೇಗೆ ರಾತ್ರಿ ಕರುಳು ಕತ್ತರಿಸುವ ಚಳಿಯ ಅಲಗು ಹೊರಗಿರುವ ಶೀತಲ ಮಾರುತದ ಮೇಲೆ ನರ್ತಿಸುವ ಇಬ್ಬನಿ ಸೋನೆ ಹಣ್ಣಾಗಿ ಹನಿಯಂತುದುರುವ ಹಸಿರು ಕೊಂಬೆ ಕೊಂಬೆಗಳ ನಡುವೆ ಸಿಕ್ಕಿಕೊಂಡ ಉಸಿರು ಮಡುಗಟ್ಟಿ ನೀರು ಘನವಾಗಿ ಬೀಳುವ ಹನಿಹನಿ ಹಿಮ ಒಳಗರಳುವ ದಳವೂ ಮುದುರಿ ಮೊಗ್ಗಾಗಿ ಎದ್ದ ಗೋಡೆಗಳೂ ಬಿದ್ದು ಬಯಲಾಗಿ ಹಾಸಿದ ಹಾಸಿಗೆಯೂ ಚುಚ್ಚುವ ಮುಉಳ್ಳಾಗಿ ಹೊದ್ದ ಹೊದಿಕೆಯೂ ತಣ್ಣನೆಯ ರಾಶಿಯಾಗಿ ಈ ಮಾಗಿಯ ಚಳಿಯಲ್ಲಿ ಸಿಕ್ಕಿಕೊಂಡವರಿಗೆ ಉಸಿರಾಡಲು ಬೆಚ್ಚನೆಯ ತಾಣವೆಲ್ಲಿ...? ರಕ್ಷಣೆ ಎಲ್ಲಿ...? ಅದೇ ಪ್ರಿಯತಮೆಯ ಒಡಲು ಮಧುರ ಮಡಿಲು ಬಿಸಿ ನೆತ್ತರ ಕಡಲು ! ಅಲೆಗಳೆದ್ದ ಮಧುರಾಧರಗಳಲ್ಲಿಳಿದು ಕಾದ ಮೈ ಕಾವಲಿಯ ಮೇಲುರುಳಿ ಕಣಿವೆ ಕುಲುಮೆಯಲರಳಿ ಕಾದು ಕಡು ಕೆಂಪಾಗಿ ಹೊರಳಿ ಕುಡಿಯೊಡೆದು ಸೊಂಪಾಗಿ ತೆವಳಿ ಹದವಾದ ನೆಲದಲ್ಲಿ ಹಚ್ಚನೆಯ ಹಸಿರಾಗಿ ಚಿಮ್ಮಿ ಹೊಮ್ಮುವೆ ಮಾಗಿಯ ಚಳಿಗೆ...!
-ಪ್ರಭಾಕರ ತಾಮ್ರಗೌರಿ , ಗೋಕರ್ಣ
Comments