top of page

ಮುಕ್ತಕಗಳು

ಮುಕ್ತಕ -೧


ಅರಮನೆಯ ಸಖ್ಯವಿದೆ ಎನ್ನುತಲಿ ಮೆರೆದಿಹರು

ನೆರೆಮನೆಯ ಸಂಬಂಧ ಕಡೆಗಣಿಸಿ ನಡೆದು

ಸರಳತನ ಮರೆಯುತ್ತ ದುರುಳತನ ಕಲಿತಿಹರು

ನೆರೆಹೊರೆಯ ದೂಷಿಸುತ - ಜಗದೀಶ್ವರ


ಮುಕ್ತಕ - ೨


ರವಿಕಿರಣ ಮೂಡುತಿರೆ ಕತ್ತಲೆಯು ಸರಿವಂತೆ

ಕವಿಭಾವ ಸವಿಯುತಲಿ ಜ್ಞಾನವದು ಬೆಳಗಿ

ಸುವಿಚಾರ ಸನ್ನಡತೆ ಮನದಲ್ಲಿ ಅರಳುತಲಿ

ಸವಿಯನ್ನು ಉಣಿಸುವುವು - ಜಗದೀಶ್ವರ


ಮುಕ್ತಕ -೩


ಒಡಲಕುಡಿ ಉನ್ನತಿಗೆ ಮಡದಿಜೊತೆ ದುಡಿಯುತ್ತ

ಸಡಗರದಿ ಬಹುಖುಷಿಯ ಪಡುತಿವರು ಸಾಗಿ

ಬಡತನವ ಅನುಭವಿಸಿ ಬಹುಕಷ್ಟ ಸಹಿಸುತಲಿ

ನಡೆದಿಹರು ಬದುಕಿನಲಿ - ಜಗದೀಶ್ವರ


ಮುಕ್ತಕ - ೪


ಸಾಧನೆಯ ಸಹಿಸದೆಯೆ ಕೇಡೆಣಿಪ ದುರುಳರಿಗೆ

ಬೋಧನೆಯ ಮಾಡಿದರೆ ಫಲವೇನು ಮನುಜ

ಸಾಧಿಸುತ ಮುನ್ನಡೆದು ಗುರಿಯನ್ನು ಮುಟ್ಟುತ್ತ

ಬೇಧಿಸುತ ಸಾಗಿನಡೆ - ಜಗದೀಶ್ವರ


ಬೋರೇಗೌಡ- ಅರಸೀಕೆರೆ

69 views0 comments

Comments


bottom of page