ಮಹಾಭಾರತ ಹನಿಗವನಗಳು
- shreepadns
- Aug 27, 2023
- 1 min read
ಸಾಟಿ
*****
ಬರಿ ಐವರಿದ್ದರೇನು
ಪಾಂಡವರು
ನೂರಿದ್ದೂ
ಸಾಟಿಯಾಗಲಿಲ್ಲ
ಕೌರವರು!
ಕರ್ಣ
*****
ವೈರಿಯಾದರೂ
ಪಾಂಡವರಿಗೆ
ಕರ್ಣ
ಅದೇ ಬಳ್ಳಿಯ
ಪರ್ಣ!
ಮಹಾಭಾರತ
************
ಪ್ರಾರಂಭ
ಪಗಡೆಯಾಟ
ಮುಕ್ತಾಯ
ಹೊಡೆದಾಟ!
ಮರಣ ಶಾಸನ
**************
ದ್ರೌಪದಿಯ ಮುಡಿ ಹಿಡಿದು
ಸಭೆಗೆ ಎಳೆದು ತಂದಾಗಲೇ ದುಶ್ಯಾಸನ
ಬರೆದುಕೊಂಡ ತನ್ನ ಬದುಕಿಗೆ ಮರಣ ಶಾಸನ!
ಕಲಿವುದೇನು?
************
ಮಹಾಭಾರತದಿಂದ
ಕೊನೆಗೂ ಕಲಿವುದೇನು
ಮನುಜ?
ತುಂಡು ನೆಲಕ್ಕಾಗಿ
ಬಡಿದಾಡಿದರೆ
ಬಂಧುಗಳನ್ನೆಲ್ಲ
ಕಳೆದುಕೊಳ್ಳುವ
ನಿಜ
ವೆಂಕಟೇಶ ಬೈಲೂರು
ಸೃಜನಶೀಲ ಕವಿ ವೆಂಕಟೇಶ ಬೈಲೂರ ಅವರು ಮಹಾಭಾರತದ ಕುರಿತು ಬರೆದಿರುವ ಹನಿಗವನಗಳು ನಿಮ್ಮ ಓದಿಗಾಗಿ ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ

Comments