ನಾವೆಲ್ಲ ಭಾರತಾಂಬೆಯ ಮಕ್ಕಳು
ಲೆಕ್ಕಕ್ಕೆ ನೂರಾರು ಕೋಟಿ
ಸತ್ತಂತಿರುವವರೇ ಬಹಳ!
ನಾವೆಲ್ಲ ಅಣ್ಣ -ತಮ್ಮಂದಿರು
ಕೌರವರು,ಪಾಂಡವರ ಹಾಗೆ
ಮಹಾಭಾರತ ನಿರ್ಮಿಸುತ್ತಲೇ ಇದ್ದೇವೆ
ಆಗೊಬ್ಬನೇ ಇದ್ದ ಶಕುನಿ
ಈಗ ಹೆಜ್ಜೆಗೊಬ್ಬ
ತಾನೊಬ್ಬ ಬದುಕಿದರಾಯ್ತೆಂಬ ನಾನು ಭಾವನೆ
ದುರ್ಯೋಧನನ ಛಲವಿಲ್ಲ
ಭೀಮನ ಬಲವಿಲ್ಲ
ಎಲ್ಲವೂ
ಉತ್ತರನ ಪೌರುಷದ ಹಾಗೆ!
ಮಾತುಗಳ ಮನೆ ಕಟ್ಟಿ
ಭರವಸೆಗಳ ಕಳಶವಿಟ್ಟು
ಎಲ್ಲರ ಕಣ್ಣು ಕುಕ್ಕಿಸುವವರು!
ನಾವೆಲ್ಲರೂ ಸಮಾನರು
ಕೆಲವರು ಮಾತ್ರ ಹೆಚ್ಚು
ಸಮಾನರು!
ಎಷ್ಟೆಲ್ಲ ಪುಣ್ಯವಂತೆ
ನಮ್ಮ ತಾಯಿ!
ಹೊಟ್ಟೆಗಿಲ್ಲದ ಮಕ್ಕಳೂ ಬದುಕಿದ್ದಾರೆ!
ವೆಂಕಟೇಶ ಹುಣಶಿಕಟ್ಟಿ
ಗುರುವರ್ಯ ಪ್ರೊ.ವೆಂಕಟೇಶ ಹುಣಶಿಕಟ್ಟಿಯವರ "ಮಹಾತಾಯಿಯ ಮಕ್ಕಳು" ನಿಮ್ಮ ಓದಿಗಾಗಿ.
ಸಂಪಾದಕ ಆಲೋಚನೆ.ಕಾಂ

ಹೌದಲ್ಲ ಸರ್