ಮನೆಮದ್ದಿನಲ್ಲಿ ಶತಾವರಿ

ಇದು" ಶತಾವರಿ" ಅಥವಾ ಹಾಲು ಮಕ್ಕಳ ತಾಯಿ

ಅಸ್ಪರಾಗಸ್ ರೆಸಿಮೊಸ್

ಅಸ್ಪರಾಗೇಸಿಯೇ/ಲಿಲಿಯೇಸಿ

ಇದಕ್ಕೆ ಹಲವು ಮಕ್ಕಳತಾಯಿ ಅಂತಾನೂ ಕರೆಯುತ್ತಾರೆ ಕಾರಣ....??

ಹಾ ...ಹೇಳ್ತೀನಿ ನೋಡಿ ನೀವು ಆಗಿಡ ಕಿತ್ತಾಗ ಮೂಲಂಗಿಯನ್ನು ಹೋಲುವ ಬಹಳಷ್ಟು ಗಡ್ಡೆ ಜೋಡಿಸಿಟ್ಟಂತೆ ಕಾಣುತ್ತದೆ ಹಾಗಾಗಿ ಹಲವು ಗಡ್ಡೆ ಒಂದೇ ಗಿಡದಲ್ಲಿ ಕಾಣುವದರಿಂದ ಹಲವು ಮಕ್ಕಳತಾಯಿ ಅಂತ ಕರೀತಾರೆ.( ಇದು ನನ್ನ ಭಾವನೆ )

ಸಂಸ್ಕೃತ:.ಶತಾವರಿ, ಶತಮೂಲಿ

ಹಿಂದಿ.ಶತಮೂಲಿ

ಇಂಗ್ಲೀಷ್.ವೈಲ್ಡ ಅಸ್ಪರಾಗಸ್

ಪರಿಚಯ.:ಶತಾವರಿ ಬಳ್ಳಿಯಾಗಿದ್ದು ಇದರಲ್ಲಿ ಹೂಗಳು ಬಿಳಿಬಣ್ಣ ಮತ್ತು ಅದು ಫಲಿತು ಸಣ್ಣ ಸಣ್ಣ ಕಾಯಿ ಆಗುತ್ತದೆ ಇದೇ ಹಣ್ಣಾಗಿ ಬೀಜದ ಮೂಲಕ ಗಿಡ ಮಾಡಲು ಸಾದ್ಯ

ಈ ಬಳ್ಳಿ ಹೆಚ್ಚಾಗಿ ಸಹ್ಯಾದ್ರಿ, ಪಶ್ಚಿಮಕರಾವಳಿಯಲ್ಲಿ ಹೆಚ್ಚಾಗಿ ಕಾಡುಗಳಲ್ಲಿ ಬೆಳೆಯುತ್ತದೆ .ಇದರ ಉಪಯುಕ್ತ ಭಾಗ ಬೇರು/ ಗಡ್ಡೆ.

ಯಾವ ಕಾಯಿಲೆಗೆ

೧.ಸ್ತ್ರೀಯರ ಆವರ್ತ ದೋಷ

೨.ಬಿಳುಪು ಹೋಗೋದು

೩.ಎದೆ ಹಾಲು ವೃದ್ಧಿ

೪.ಕರುಳು ಹುಣ್ಣು

೫.ಪಿತ್ತದಿಂದಾದ ಹೊಟ್ಟೆನೋವು

೫.ಇರುಳುಗಣ್ಣು

೬.ಮೂತ್ರದಲ್ಲಿ ರಕ್ತ

೭.ಪಶುಗಳಲ್ಲಿ ಹಾಲು ವೃದ್ಧಿ.

೧.ಮಕ್ಕಳಿಗೆ ಅಥವಾ ಸ್ತೀಯರಿಗೆ ಬಿಳುಪು( ಧಾತು) ಹೋಗುತ್ತಿದ್ದರೆ ಶತಾವರಿಗಡ್ಡೆ ೧ ನೆಲತೆಂಗು ೧ ತೊಲೆ ಜೀರಿಗೆ ಅರ್ಧತೊಲೆ ಇವನ್ನು ಕುಟ್ಟಿ ೧ ಸೇರು ನೀರಿಗೆ ಹಾಕಿ ಕುದಿಸಿ ಕಾಲು ಸೇರಿಗೆ ಇಳಿಸಿ ಕುಡಿಯಿರಿ

೨. ಆವರ್ತ ದೋಷ

ಪ್ರತೀದಿನ ಬೆಳಿಗ್ಗೆ ಅರ್ಧ ತೊಲೆ ಶತಾವರಿ ಚೂರ್ಣ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಇದರಿಂದಾಗಿ ಮುಟ್ಟಿನ ಎಲ್ಲಾಬಗೆಯ ತೊಂದರೆ ನಿವಾರಣೆಯೊಂದಿಗೆ ಸ್ರ್ತೀಯರಲ್ಲಿ ಅಂಡಾಣು ಕೂಡ ಉತ್ತಮ ಗುಣಮಟ್ಟದ್ದು ಆಗುತ್ತದೆ ಅಲ್ಲ್ದೇ ಮುಟ್ಟು ನಿಲ್ಲುವ ಸಮಯದಲ್ಲಿ ಆಗುವ ಹಲವಾರು ತೊಂದರೆ ನಿವಾರಣೆ ಆಗುತ್ತದೆ

೩ಎದೆ ಹಾಲುವೃದ್ಧಿ

ಶತಾವರಿ ಗಡ್ಡೆ ತಂದು ಕತ್ತರಿಸಿ ಒಣಗಿಸಿ ಪುಡಿಮಾಡಿ ಅದನ್ನು ಬೆಳಿಗ್ಗೆ ಸಾಯಂಕಾಲ ೫ ಗ್ರಾಂ ಹಾಲು ಮತ್ತು ಕಲ್ಲುಸಕ್ಕರೆ ಸೇರಿಸಿ ಸೇವಿಸಿ ಹಲವಾರುದಿನ ಮುಂದುವರಿಸಿ

೪. ಕರುಳ ಹುಣ್ಣು ನಿವಾರಣೆ

ಪ್ರತೀದಿನ ಶತಾವರಿ ಚೂರ್ಣ ೫ ಗ್ರಾಂ+ ಹಾಲು+ ಜೇನುತುಪ್ಪ ಸೇರಿದಿ ೪೫ ದಿನ ಆಹಾರದ ನಂತರ ಸೇವಿಸಿ

೫.ಪಿತ್ತದಿಂದಾದ ಹೊಟ್ಟೆಯ ನೋವು

ಇದಕ್ಕೆ ಹಸೀ ಶತಾವರಿ ಗಡ್ಡೆ ರಸ ೨ ಚಮಚ ೧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿ.

೬.ಇರುಳುಗಣ್ಣು/ ದೃಷ್ಟಿ ದೋಷ ನಿವಾರಣೆ

ರಾಸಾಯನಿಕ ಮುಕ್ತವಾದ ಅಕ್ಕಿಯನ್ನು ಪಾಯಸ/ ಗಂಜಿಮಾಡಿ ಇದಕ್ಕೆ ಶತಾವರಿ ಚೂರ್ಣ ೨ ಗ್ರಾಂ ಹಾಕಿ ಬೆಳಿಗ್ಗೆ ಕಾಲಿ ಹೊಟ್ಟೆಯಲ್ಲಿ ನಲ್ವತ್ತೈದು ದಿನ ಸೇವಿಸಿ ಪರಿಣಾಮ ಕಂಡಲ್ಲಿ ಮುಂದುವರಿಸಿ

೭.ಮೂತ್ರದಲ್ಲಿ ರಕ್ತ

ಮೂತ್ರದಲ್ಲಿ ರಕ್ತ ಮಿಶ್ರಿತವಾಗಿ ಹೋಗುತ್ತಿದ್ದರೆ ಶತಾವರಿ+ ನೆಗ್ಗಿಲುಮುಳ್ಳು ಸಮಪ್ರಮಾಶ್ನದಲ್ಲಿ ಸೇರಿಸಿ ಪುಡಿ ಮಾಡಿ ಶಿಷೆಯಲ್ಲಿ ತುಂಬಿಡಿ ಈ ಮೇಲಿನ ಸಮಸ್ಯೆ ಕಂಡು ಬಂದಾಗ ದಿನಕ್ಕೆರಡುಸಲ ೩ ಗ್ರಾಂ ಚೂರ್ಣ ಎಳೆನೀರಿನಲ್ಲಿ ಹಾಕಿ ಕುಡಿಯಿರಿ.

ಪಶುಗಳ ಹಾಲು ವೃದ್ಧಿ

ಶತಾವರಿಯ ಚೂರ್ಣ ೨೫೦ ಗ್ರಾಂ + ಅಶ್ವಗಂಧ ೨೫ ಗ್ರಾಂ ಸೇರಿಸಿ ಒಂದು ವಾರ ಯಾವುದೇ ವಿಧದಲ್ಲಿ ತಿನ್ನಿಸಿ

ಅಥವಾ ೫/೧೦ ಗಡ್ಡೆ ಮದ್ಯಮ ಗಾತ್ರದ ತೆಂಗಿನ ಕಾಯಿಯೊಂದಿಗೆ ರುಬ್ಬಿ ಬೆಲ್ಲ ಹಾಕಿ ತಿನ್ನಿಸಿ

ಶತಾವರೆಕ್ಸ್ ಎಂಬ ಗ್ರಾನ್ಯುಯೆಲ್ಸ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಇದನ್ನು ಹಾಲು ಕಡಿಮೆ ಇರುವ ಬಾಳಂತಿ ಸೇವಿಸಬಹುದು ಇಲ್ಲವಾದಲ್ಲಿ ತಿಳಿಸಿದ ವಿಧಾನ ಅನುಸರಿಸಿ.

ಬೆಳಿಗ್ಗೆ ನಾಟೀ ಆಕಳಹಾಲಿನಲ್ಲಿ ೧/೨ ಗಡ್ಡೆ ಅರೆದು ಕುಡಿದರೆ ಹಲವಾರು ತೊಂದರೆ ನಿವಾರಣೆ ಆಗುತ್ತದೆ ಕೆಲವರಿಗೆ ನೋವು ನಿವಾರಕ ಮಾಡಿ ನೋಡಿ ಯಾವದೇ ಅಪಾಯವಿಲ್ಲದ ಔಷಧ / ಟಾನಿಕ್.


ಪ್ರದೀಪ್ ಜಿ. ಹೆಗಡೆ ಬರಗದ್ದೆ ಕುಮಟಾ
15 views0 comments