ಮತ್ತೆ ಕಾಡದಿರು ಓ ಕಹಿ ನೆನಪೆ ಮರಳಿ ನನ್ನೆದೆಗೆ ಬಂದು
ಜೀವ ಹಿಂಡದಿರು ಮರೆತು ಹೋದುದನು
ತಿರುಗಿ ಮನದೊಳಗೆ ತಂದು
ಅಳಿಸಿ ಎಲ್ಲವನು ಮುಂದೆ ನಡೆದಿಹೆನು
ಹೊಸ ಜೀವನ ನನದು ಇಂದು
ಮೆಟ್ಟಿ ಮೆರೆಯದಿರು ಬದುಕು ಕೆಡವದಿರು
ದಿನ ದಿನವೂ ನನ್ನ ಕೊಂದು
ಹಿಂದಿನದು ಮರೆತು ಮುಂದಿಹುದು ಹೊಸ ಬಾಳು
ಎಂದು ನಾನೀಗ ಎಣಿಸಿ
ಪಥವ ಸವೆಸಿಹೆನು ಖತಿಯ ಎದುರಿಸಲು
ಮನವ ಗಟ್ಟಿಗೊಳಿಸಿ
ಮುಗಿದು ಬೇಡುವೆನು ಮರಳಿ ಬಾರದಿರು
ನನ್ನೆದೆಯ ನೀನು ಅರಸಿ
ಮನದ ಕದವ ನೀ ಹೊರಳಿ ತಟ್ಟದಿರು
ಏನೇನೋ ನೆಪವ ಮುಂದಿರಿಸಿ
ವೆಂಕಟೇಶ ಬೈಲೂರು
ಸರಸ್ವತಿಯ ಕೃಪೆಗಾಗಿ ಅನುದಿನ ಕೋರುವ ಕವಿ ವೆಂಕಟೇಶ ಬೈಲೂರ ಅವರ ' ಮತ್ತೆ ಕಾಡದಿರು ಕಹಿ ನೆನಪೆ' ಕವನ ನಿಮ್ಮ ಓದಿಗಾಗಿ .ಸಂಪಾದಕ
Comments