ಭ್ರಂಗದ ಸಂಗ.

ಬೇಡ ಭ್ರಂಗ ನಿನ್ನ ಸಂಗ, ಮಧುವ ಹೀರ- ಲಾಗದು. ಹುಡುಕಿ,ಹುಡುಕಿ ದಣಿದರೂನು ನಗುವ ಹೂವು ದೊರಕದು. ಖುಷಿಯ ಕಸಿದ ಮನದ ಬಿಸಿಗೆ ಹಸಿರ ಬಸಿರು ಒಣಗಿದೆ. ನೋವು,ನರಳು, ಸಾವಿನುರುಳು ಬುವಿಯ ಕತ್ತ ಹಿಸುಕಿದೆ. ನೀರ ಹನಿಸಿ ಪೊರೆವರಿಲ್ಲ ಬಳ್ಳಿ ಪೂರ್ತಿ ಬಾಡಿದೆ. ಬಾಡಿ ಹೋದ ಬಳ್ಳಿಯಿಂದ ಹೂವು ಅರಳಿ ನಗುವುದೆ? ವ್ಯರ್ಥ ಶ್ರಮವು ಆಸೆ ಬೇಡ, ಹೂವಿನೊಡನೆ ಬೇಟವು. ನನ್ನ ನಿನ್ನ ಗುರಿ- ಯು ಮುಂದೆ 'ನಂದನ' ದ ತೋಟವು. ಬೇಡ ಭ್ರಂಗ ನಿನ್ನ ಸಂಗ, ಮಧುವ ಸವಿ- ಯಲಾಗದು. --ಅಬ್ಳಿ,ಹೆಗಡೆ.
24 views0 comments