ಬಾವುಟ [ಮಕ್ಕಳ ಕವಿತೆ ]

ಅತ್ತ ನೋಡು ಇತ್ತ ನೋಡು  ಸುತ್ತ ನೋಡು ಎತ್ತ ನೋಡು ಬೀದಿ ನೋಡು ಕೇರಿ ನೋಡು ನೋಡು ನೀನು ಬಾವುಟ  ಮಾಡು ನೀನು ಸೆಲ್ಯೂಟ್... ಕೆಸರಿ ಬಿಳಿ ಹಸಿರು  ಮೂರು ಬಣ್ಣ ನಡುವೆ  ಚಕ್ರ ಒಂದು ನೀಲಿ ನೋಡು ಸತ್ಯ ಶಾಂತಿ ನ್ಯಾಯ ಪ್ರೀತಿ ತ್ಯಾಗ ಶೌರ್ಯ ನೀತಿ ಮೌಲ್ಯ ಐಕ್ಯ ಒಂದು ಪ್ರತೀಕ ನೋಡು  ಪರತಂತ್ರವ ಕಳಚಿ ಬಿಟ್ಟು ಸ್ವಾತಂತ್ರವ ಮೆರೆಸಿ ಕೊಟ್ಟು ದೇಶದೊಂದು ಪ್ರತೀಕ ನೋಡು ಮೆಡಂ ಕಾಮಾ ಹಾರಿಸಿದ ಭಗತ ಗುರು ಪ್ರೇಮಿಸಿದ ಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು ಹಲವು ಭಾವ ಹಲವು ಭಾಷೆ ಹಲವು ಬಣ್ಣ ಹಲವು ವೇಷ ಎಲ್ಲರೊಂದು ಪ್ರತೀಕ ನೋಡು 


ಮಲಿಕಜಾನ ಶೇಖ

ಅಕ್ಕಲಕೋಟ, ಸೊಲ್ಲಾಪುರ

ಸಂಪರ್ಕ - 9423468808

111 views3 comments