top of page

ಬಾವ ಚಂದಿರ

ಬೆಳದಿಂಗಳಿರದ ಚಂದ್ರ

ದಾರಿಯಲ್ಲಿ ನಡೆದು ಬಂದ

ಮುಗುಳು ನಗೆಯ ಬೆಳಕಿನಿಂದ

ಉಲ್ಲಾಸವ ತಂದ//ಬೆಳದಿಂಗಳಿರದ ಚಂದ್ರ........//


ಹೆಗಲಿಗೊಂದು ಜೋಳಿಗೆ

ಕಣ್ಣಿಗಿಲ್ಲ ಕಾಡಿಗೆ

ಕಣ್ಣ ನೋಟ ಅಂಬಿಗೆ ಕಣ್ಣ

ಹುಬ್ಬ ಬಿಲ್ಲಿದೇ//ಬೆಳದಿಂಗಳಿರದ ಚಂದ್ರ........//


ದಿನಪ ನಡಿಗೆ ಮರೆತು ನಿಂತ,

ಅಂಬರದಲಿ ಸುಮ್ಮನೇ!

ಮನೆಗೆ ಈಗ ಹೋದರೇ,

ಮತ್ತೆ ನಾಳೆ ಸಿಗುವನೇ!?//ಬೆಳದಿಂಗಳಿರದ ಚಂದ್ರ.......//


ಯಾವ ಊರ ಬಾವನವರೋ!

ಇತ್ತ ಏಕೆ ಬಂದರೋ!?

ಬೆಳಕ ನಗೆಯ ಬಾವನವರ

ಕಂಡು,ಕೆಲಸ ಮರೆತರೋ!!

//ಬೆಳದಿಂಗಳಿರದ ಚಂದ್ರ........//


ಮದುವೆ ಇರದ ತಂಗಿಗೊಂದು

ಗಂಡನಿವನು ಆದರೆ!

,ಸನಿಹ ಸರಿದು ಕೇಳಿದರೆ,

ಬಾವನಾಗಿ ಬರುವರೇ!?//ಬೆಳದಿಂಗಳಿರದ ಚಂದ್ರ........//


ಅವರು ಇವರು ಮನದೊಳಿಂತು

ಸ್ವಗತದಲ್ಲೇ ಅಂದರು!

ಬೆಳಕ ನಗೆಯ ಬಾವನವರು

ನಗುತ ಮುಂದೆ ನಡೆದರು!//ಬೆಳದಿಂಗಳಿರದ ಚಂದ್ರ........//


ಗಣಪತಿ ಗೌಡ,ಹೊನ್ನಳ್ಳಿ, ಅಂಕೋಲಾ

5 views0 comments

Comments


bottom of page