ಕನಸು ,ಕಲ್ಪನೆ ಇಲ್ಲದ
ಮರ ಕಡಿದಷ್ಟು ಚಿಗುರುವದು
ವಸಂತಕಾಲದ ಆಗಮನವ
ಸಂಭ್ರಮದಿಂದ ಜಗಕ್ಕೆ
ಪ್ರಕಟಗೊಳಿಸುವದು .....
ಬೇರುಗಳು ದಿನದಿಂದ
ದಿನಕ್ಕೆ ವಿಶಾಲವಾಗಿ ಹರಡುತ್ತಾ
ಭೂತಾಯಿಯ ಒಡಲಿಗೆ ಸೇರುವವು ಭದ್ರವಾಗಿ
ಮತ್ತೆ ಮತ್ತೆ ಮರವನು ಚೈತ್ರದ
ಸಡಗರದ ಭಾಗ ವೇ ಮಾಡುವವು .....
ಕನಸು ,ಮನಸು
ಒಲವು ಸ್ನೇಹ ಕಂಡ
ಜೀವ ಮುದುಡುವದು ಸೋಲಿಗೆ
ಶರಣಾಗಿ ತನ್ನ ತನವನೇ ಮರೆಯುವದು ....
ಸಿರಿ ಸಂಪತ್ತು ಇದ್ದೊಡೆ ತನ್ನವರನೇ
ದೂರ ಬದುಕುವುದು.
ಬಂಧ ,ಅನುಬಂಧಗಳು ಇದ್ದರೂ
ದ್ವೇಷದ ಭಾರವನು ಹೊತ್ತ ಬದುಕು
ಉರಿಯುತ್ತಲೇ ತನ್ನ ಇರವನು
ಸುಟ್ಟು ಬೂದಿಮಾಡಿಕೊಂಡು
ಬದಲಾಗದೆ ಹೋಗುವದು ???
ಸಿಟ್ಟು ಸೇಡವು ಮರದ ಬೇರನ್ನೆ
ನಾಚಿಸುವಂತೆ ಮನದಾಳಕ್ಕೆ
ಇಳಿದು ಮನುಷ್ಯ ತ್ವವ ತೊರೆಸುವವು....
ಆಹಂ ನ ಕೋಟೆಯಲ್ಲಿ
ಬಂಧಿಯಾಗಿಸುವವು ....
ಭಾವನೆಗಳು ಇಲ್ಲ ಮರ ಬಾಳುವದು
ನೂರಾರು ವರ್ಷಗಳು
ನೆರಳಾಗುವದು ತನ್ನರಸಿ ಬಂದ ಜೀವಿಗಳಿಗೊ ...!!
ತನ್ನಡೂಲನೆ ಗೂಡಾಗಿ ನೀಡುವದು ಪಕ್ಷಿಗಳಿಗೆ !
ಯಾವ ಕ್ಷಣ ಪ್ರಾಣ ಪಕ್ಷಿ ಹಾರುವದೂ ಎಂದು
ಸತ್ಯವ ಅರಿಯದ ಮನುಜ ಮಾತ್ರ
ಆದವರ ಹೋದವರ ನೆನೆಯದೆ
ಸ್ವಾರ್ಥದ ಪ್ರತಿರೂಪವಾಗಿ
ಚಿರಂಜೀವಿಯಾಗುವ ಹಂಬಲದಿಂದಲೇ
ಮಣ್ಣಲ್ಲಿ ಮಣ್ಣಾಗುವನು ....
-ರೇಶ್ಮಾ ಗುಳೇದಗುಡ್ಡಾಕರ್
Comments