ಆಕಾಶದಲ್ಲಿ ಸೂರ್ಯ ಪಡುವಣ ದಿಕ್ಕಿನಿಂದ
ಪುಟ್ಟದಾಗಿ ಬಿರಿದು ಅರಳುತ್ತಿದ್ದ,
ವಿಶಾಲ ತಾರಸಿಯ ಮೇಲೆ
ಹಿತವಾದ ಸಂಗೀತದಲ್ಲಿ
ಕೊಳಲಿನ ನಾದ ಲಯಬದ್ಧವಾಗಿ
ಭಾವತುಂಬಿಕೊಂಡು ಗಾಳಿಯಲ್ಲಿ ತುಂಬುತ್ತಿತ್ತು,
ಬೆಳ್ಳಂಬೆಳಗು,ಬೆಳ್ಳಕ್ಕಿ,ಪಕ್ಷಿಗಳು
ಹಾರಾಡುತ್ತ ಆಕಾಶವನ್ನು
ವಶಕ್ಕೆ ತೆಗೆದುಕೊಂಡಿದ್ದವು,
ಎಲ್ಲಿಂದಲೋ ಕರುವಿನ ಕೂಗು,
ಪಕ್ಷಿಗಳ ಕಲರವ ಮೊದಲಾಗಿತ್ತು,
ಕೆಳಗೆ ಅಬ್ಬಲೆ,ಮಲ್ಲೆ,
ಹಲವಾರು ಹೂಗಳು
ಕೊಯ್ಯುದೆ ಬಿಟ್ಟಿರುವ ಅಂಗಳಗಳು
ಕಡುಹಸಿರಿನ ನಡುವೆ
ಕೆಂಪೇ ಮೇಲಾಗಿ
ಕಂಪುಕೆಂಪಾಗಿ ಗೋಚರಿಸುತ್ತಿದ್ದುವು.
ವರ್ಷ ಋತುವಿನ ಶ್ವೇತವರ್ಣಕ್ಕೆ
ತಿರುಗಿದ ಆಗಸ
ಬೂದಿವರ್ಣಲೇಪಿತ ಮೋಡಗಳನ್ನು
ಆದಷ್ಟು ವೇಗವಾಗಿ
ತನ್ನಂತೋರನ್ನ ಭೇಟಿ ಮಾಡಲು
ಮತ್ತೊಂದೂರಿಗೆ ಹೊತ್ತುಕೊಂಡು
ಕರೆದೊಯ್ಯುತ್ತಿದ್ದ
