
ಎದೆಯ ಪುಟ್ಟ ಹಣತೆಯಲ್ಲಿ
ಮಾನವತೆಯ ಬತ್ತಿ ಇಟ್ಟು
ಪ್ರೀತಿಯೆಂಬ ತೈಲವೆರೆದು
ಸಮತೆ, ಮಮತೆ, ವಾತ್ಸಲ್ಯದ ಕಡ್ಡಿಯಿಂದ
ಹಚ್ಚಿ ದೀಪಗಳ ಸಾಲು ಸಾಲು
ಸುತ್ತ ಮುತ್ತಿರುವ ತಮವು ತೊಲಗಲಿ
ಎಲ್ಲೆಲ್ಲೂ ಬೆಳಕು ಚೆಲ್ಲಲಿ
ದಿವ್ಯ ಜ್ಯೋತಿ ಝಗಮಗಿಸಲಿ
ಮನುಜನೆದೆಯ ಗೂಡಲಿ
ಬೆಳಕು ಲೀಲೆ ಹರಡಲಿ
ಮಾನವ್ಯದ ಪಥದಲಿ
ಮನುಜ ಕುಲವು ಸಾಗಲಿ
