top of page

ಬೇಲಿಯಾಚೆಗೆ

ಮನೆಯೆದುರು ಅಂಗಳ-

ದಲ್ಲಿ,ಸುತ್ತ ಬೇಲಿಹಾಕಿ,

ಹೂಗಿಡವೊಂದ ನೆಟ್ಟು,

ಗೊಬ್ಬರ ಹಾಕಿ,ನೀರೆರೆದು,

ಕಾಳಜಿಯಿಂದ,

ಪೋಷಿಸಿದಾಗ ಗಿಡ-

ಚಿಗುರಿ ಪಲ್ಲವಿಸುತ್ತದೆ.

ಹೂ,,,ಅರಳುವದೇ-

ಇಲ್ಲ.ಯಾವ ಕಾಲಕ್ಕೂ,,,.

ಗಮ-ಗಮಿಸುವದೇ ಇಲ್ಲ.

ಆದರೆ,,,ಕಾಡೆ ಅರಿಯದ,

ಎಲೆಯುದುರಿದ,

ಸಣಕಲು ಗಿಡವೊಂದು,

ಬೇಲಿಯಾಚೆಗೆ ಕಾಡಲ್ಲಿ,

ಹೂ,,,ಅರಳಿ,ಪರಿಮಳಿಸಿ,

ಮೋಹಕ ನಗು ಬೀರಿ,

'ಕಾಡು'ತ್ತಿದೆಯಲ್ಲ ನನ್ನ.,,!

ನನ್ನತ್ತ ನೋಡಿ,ಕೈಮಾಡಿ,

ಕರೆಯುತ್ತಿದೆಯಲ್ಲ,,ನನ್ನ,,,!

ನನ್ನೊಳಗಿನ ಎಷ್ಟೋ-

ಹುಟ್ಟುಗಳು,ಗುಟ್ಟುಗಳು

ಹುಟ್ಟಿದಾಗಲೆ ಸಾಯುತ್ತವೆ

ಬೇಲಿಯೊಳಗೆ.

ಎಷ್ಟೊ ಹುಟ್ಟುಗಳು

ಗುಟ್ಟಾಗಿಯೇ ಬದುಕುತ್ತವೆ

ಸತ್ತ ಮೇಲೂ,,,,

ಬೇಲಿಯಾಚೆಗೂ,,,!

--ಅಬ್ಳಿ,ಹೆಗಡೆ.**

10 views0 comments
bottom of page