ಬುಲ್ ಬುಲ್ ಮತ್ತು ಮೊಟ್ಟೆ ಮೂರು [ಕವನ]


ಮೈಯೆಲ್ಲಾ ಕಪ್ಪು ತಲೆಯ

ಮೇಲೆ ಪುಟ್ಟ ಜುಟ್ಟು

ಕಣ್ಣ ಅಂಚು ಕೆಂಪು

ಬಿಳಿಯ ಕೊರಳ ಅಡಿಯು

ಕೂಗಿ ಕೂಗಿ ಕರೆವ

ಇನಿಯನನ್ನು ಕೂಡಿ

ಜಾಗ ಹುಡುಕಿ ಮೊಟ್ಟೆ ಇಡಲು

ಬುಲ್ ಬುಲ್ ಗೂಡು ಕಟ್ಟಿತು

ಮೂರು ಮೊಟ್ಟೆ ಇಟ್ಟಿತು

ಏಳು ದಿನದ ಸರತಿಯಲ್ಲಿ

ಕಾವು ಕೊಟ್ಟಿತು

ಮರಿಯು ಹೊರಗೆ ಬರಲು

ಜಗಕ್ಕೆಲ್ಲ ಸಾರುವಂತೆ

ಕೂಗಿ ಕೂಗಿ ಹೇಳಿತು


ಮತ್ತೆ ಮತ್ತೆ ಬಂದು

ಅಪ್ಪಿ ಅಪ್ಪಿ ಬಿಸಿಯ ನೀಡಿತು

ಈಗ ನೋಡಿ ಅಪ್ಪ-ಅಮ್ಮ

ಹೊತ್ತು ತರುವ ಗುಟುಕಿಗೆ

ಬಾಯಿ ತೆರೆದು

ಕಾದು ಕುಳಿತು ಕರೆದವು

ಗೊತ್ತು ಗುರಿ ಇಲ್ಲದೇ

ಹಾರಿ ಹೋಗಲು

ರೆಕ್ಕೆ ಬಡಿದು ಬುಲ್ ಬುಲ್

ಹೆತ್ತವರ ಮರೆತು

ಕಂಠ ತುಂಬ ಕೂಗಲು

ತನ್ನ ಇರುವ ಸಾರಲು

*****0****ದೇವಿದಾಸ ಜಿ ಭಟ್ , ಬೆಂಗಳೂರು

32 views1 comment