ಬಂದೆಯಾ ಬಾರೊ ಶ್ರಾವಣ
ಹಸಿರೆ ಉಸಿರಾವನೆ
ಇಳೆಯೊಡಲ ಮಡಿಲಿಗೆ ಹಸಿರುಡಿಸಿದವನೆ
ಬಾ ಬಾರೊ ಶ್ರಾವಣ ಶೃಂಗಾರ ಸದನ
ಕುಣಿಯ ಬೇಡ ಮಣಿಯ ಬೇಡ
ಬಲೆಯ ನೇಯುತಿದೆ ಸಾವಿನ ಜೇಡ
ಸಡಗರದಿ ಬಂದ ಶ್ರಾವಣನೆ
ಬಿಡದೆ ಕಾಡುತಿಹನಿಲ್ಲಿ ಕೊರೊನಾ
ಹತ್ತು ತಲೆಗಳ ಹೊತ್ತು ಕುಣಿವ ರಾವಣ
ಕುಣಿದು ಕುಪ್ಪಳಿಸಿ ಅಟ್ಟಹಾಸ ಗೈವನು
ಮುರಿದು ಮುಕ್ಕುತ ಲಯಕರ್ತನಾಗಿಹನು
ಮನುಜರೆಲ್ಲ ಕಂಗಾಲಾಗಿ ದಿಕ್ಕೆಟ್ಟಿಹರು
ಬಾಂದೇವಿ ಕಣ್ಣೀರ ಮಳೆಗರೆಯುತಿಹಳು
ಜಗವೆಲ್ಲ ಸೂತಕದ ಮನೆಯಾಗಿ
ಆತಂಕ ಭಯವೆಲ್ಲ ಮನದಲ್ಲಿ ನೆಲೆಯಾಗಿ
ಎನಿತೊ ಮಂದಿ ಮೂಲೆ ಗುಂಪು ಶ್ರಾವಣ
ಮನೆಯೊಳಗೆ ಉಳಿದು ಬಿಡಿ ಬಾರದಿರಿ ಹೊರಗೆ
ಬಂದಿರಾದರೆ ಕಾಯ್ದುಕೊಳ್ಳಿ ಆರಡಿ ಅಂತರ
ಹೊರಗಡೆ ಹೊಂಚುಹಾಕುವ ಕೊರೊನಾ ಬೆಂತರ
ಸುದ್ದಿಗಳು ಕ್ಷಣ ಕ್ಷಣಕು ಬಸಿರಾಗಿ
ಭಯ ಭ್ರಾಂತರಾಗಿಸಿ ತಲ್ಲಣವ ಹಡೆಯುತಿವೆ
ಯಾರೇನ ಮಾಡುವರು ಯಾರಿಂದಲೇನಹುದು
ಕೊರೊನಾ ಒಡ್ಡಿದ ಮರಣತಂತ್ರವನೆಂತು ಮೀರಲಿ
ಇಂಥ ಕೇಡುಗಾಲದಿ ರೊಟ್ಟಿ ಸುಟ್ಟುಕೊಳ್ಳುವ
ಪುಡಿ ಪುಢಾರಿಗಳು!
ಸುಳ್ಳು ಲೆಕ್ಕವ ಬರೆದು ಕಳ್ಳರಾಗಿಹ ಖದೀಮರು
ಮಿತಿ ಮೀರಿ ಕಾಲನರ್ಭಟ ಸಾವಿರದ ಸಾವು
ಬದುಕಿ ಬಾಳಲಿ ಜಗದ ಜನರ ಹರಣವು
ಬಾ ಬಾರೊ ಶ್ರಾವಣ ದೂರ ಮಾಡೊ ಕೊರೊನಾ
- ಶ್ರೀಪಾದ ಶೆಟ್ಟಿ.
ಅಸ್ಖಲಿತ ವರುಷದಾರೆ ಯ್ನತೆ ಬೊ್ಗರಸಿರುವ ಆಲೊಚನೆಗಳು ಅ್ಪತ ವೆನಿಸುತ್ ಬೆರಗು ಹುಟಿಸು ತದೆ ತು್ಮಬ ಪ್ಪ್ಪಸುತ ವಾದ ಕವಿತೆ
ಜಸ್ಟ ಕನ್ಡಡ ದ ಮೊದಲ ಪ್ರಯ್ತನ
ಶ್ರಾವಣ ದ ಸಡಗರದ ಜೊತೆ ಕೊರೋನಾ ದ ನೋವಿನಲ್ಲೂ ಸಂಭ್ರಮ ಕವಿಯ ಕವಿತೆ ಸೂಪರ್ ಸರ್....