ವರಗಳ ನೀಡುತ ಕರುಣವ ತೋರಯ್ಯ
ಸರಳತೆ ನಿನಗೆ ಚಂದಾವೋ/ಸಿವಯ್ಯ
ದುರುಳರ ಮಣಿಸೆ ಬಾರಯ್ಯ//೧//
ಸೂಲವ ಧರಿಸಿಹೆ ಕೂಳರ ಮರ್ದಿಸೆ
ಪಾಲದ ನೇತ್ರ ತೆರೆಯಯ್ಯ/ ಸಿವಯ್ಯ
ಜಾಲದ ಭವವ ಕಳೆಯಯ್ಯ//೨//
ಮುಡಿದಿಹೆ ಗಂಗೆಯ ಕುಡಿದಿಹೆ ವಿಷವನು
ಪಿಡಿದಿಹೆ ಡಮರು ಕೈಯಾಗ/ ಸಿವಯ್ಯ
ಪೊಡವೀಯ ಸಲುಹೆ ಇಳಿಯಯ್ಯ//೩//
ಗಿರಿಜೆಯ ಪತಿರಾಯ ಅರಿಗಳ ನಾಶಕ
ಪರಸುವ ಹಿಡಿದು ಪೊರೆವವ್ನೆ/ ಸಿವಯ್ಯ
ಹರಸುತ ತಿರೆಯ ಕಾಯಯ್ಯ//೪//
ಚೆಲುವೀನ ಮನಸೀನ ಒಲವೀನ ಈಸನೆ
ಹುಲಿಯಣ್ನ ತೊಗಲ ಉಟ್ಟವ್ನೆ/ಸಿವಯ್ಯ
ಮಲಿನತೆ ಅಳಿಸೆ ಬಾರಯ್ಯ//೫//
ಚಂದಿರನ ಸೂಡವ್ನೆ ಬಂಧುರವ ಹಾಸವ್ನೆ
ಸುಂದರ ಮೊಗವ ತೋರುತ್ತ /ಸಿವಯ್ಯ
ಚಂದದಿ ತಿಮಿರ ತೊಡೆಯಯ್ಯ//೬//
ಇಳೆಯಲ್ಲಿ ಜನಪದ ಕೊಳೆಯಲ್ಲಿ ಮಿಂದೈತೆ
ತೊಳೆಯಲಿ ನಿನ್ನ ರಾತ್ರಿಯು/ಸಿವಯ್ಯ
ಕೊಳಕೀನ ಭಾವ ಜನರಲ್ಲಿ//೭//
ಶುಭಲಕ್ಷ್ಮಿ ನಿರಂಜನ್ ವಂದಿಗೆ
コメント