ಬಾಯಾರಿಕೆ...

ನಾ ಸಾಕಿ ಸಲಹಿ

ಬೆಳೆಸಿದ್ದ ಟಾಮಿ...

ಅದಕೀಗ ಯೌವನ!

ಆಗ ಇನ್ನೂ ಕಾಲು ಬಳಿಯಿದ್ದಾಗ...

ಮನೆಯೊಳಗೆ ನನ್ನ ಬರುವನ್ನೆ

ಎದುರು ನೋಡಿ

ಬಾಲ ಬೀಸಣಿಗೆಯಾಡಿಸಿ

ಕಣ್ಣು ಕುಣಿಸುತಿದ್ದ

ದಿನಗಳಲ್ಲಿ

ನಾನೆ ನೆಟ್ಟ ಚಂದ್ರಸೀಬೆ

ಗಿಡದ ಪಾತಿಯಲ್ಲಿ

ಮಣ್ಣು ಮಿಶ್ರಿತ ನೀರ

ಲೊಚ ಲೊಚನೆ ನೆಕ್ಕುತ್ತ

ಮನೆಯ ಮುಂದಿನ ನಕ್ಷತ್ರವಾಗಿ ಮಿನುಗಿದ್ದ

ನನ್ನ ಟಾಮಿಗೀಗ

ಯೌವನ!

ಬಾಲ ಬೆಳೆದಿದೆ ಉದ್ದುದ್ದ

ಇನ್ನೂ ದುಂಡಗಾಗಿದೆ

ಕಣ್ಣುಗಳಲಿ ವಯೋಧಿಮಾಕು

ಚಿಮ್ಮುತ್ತಿದೆ ಹೊಸ ಹೊಸ ಹೊಳಪು...

ಆದರೆ...

ಅದೇಕೋ

ಬಕಾಸುರ ಬಾಯಲ್ಲಿ

ಊಟ ನೀರೂ ಸೇರುವುದೂ ಇಲ್ಲ

ಈಗೀಗ...

ಇನ್ನಾವ ನೀರ ಪಾತಿಯ ಹುಡುಕಿ ತರಲಿ ಟಾಮಿ

ನಿನಗೆ ಎಂದರೆ

ಪಾಪ ಎದುರು ಮನೆಯ

'ರೋಸ್'ನತ್ತ ನೋಡಿ ನೋಡಿ

ಬಾಲ ಆಡಿಸಿದ್ದ ನಮ್ಮ ಟಾಮಿ!

ಹೀಗೆ

ನಮ್ಮ ಮನೆಯ

ಎಲ್ಲರೆದೆಯೊಳಗೇ ಇಳಿದಿದ್ದ

ಮನೆ ಬಾಗಿಲಿಗೆ ಕಣ್ಣು ಇಣುಕಿಸಿದವನ

ಎದೆಯಿರಿವ ಭೀಮಗದೆ

ಯಾಗಿ ನಮ್ಮ ಸಲಹಿದ್ದ

ನಚ್ಚು...


ಈಗ

ನನ್ನ ಟಾಮಿ

ನಡೆದು ಬಿಟ್ಟು ನಭದೆಡೆಗೆ

ಸಾಕಷ್ಟಾಯಿತು ಕಾಲ...

ಮತ್ತೆ ನಾವು ಟಾಮಿ

ಯ ಬದಲು ಮತ್ತಾರತ್ತರಲೂ

ಯೋಚಿಸಿಲ್ಲ ಕನಸಲೂ...

ಬಹುಶಃ ಎಂದೆಂದಿಗೂ...

ಡಾ. ಹೆಬ್ಭಾಕ ನ. ಜಗನ್ನಾಥ.

125 views0 comments