ಮತ್ತೆ ಎಷ್ಟು ದಿನ ಕಾಯಬೇಕು ಬಂಧನ ಮುಕ್ತಿಗೆ ರೀತಿ ರಿವಾಜುಗಳ ಲಕ್ಷ್ಮಣರೇಖೆಯ ಒಳಗಡೆ ಬಂಧಿಯಾಗಿದ್ದೇನೆ ಮೈ ಸುಟ್ಟು ಕೊಂಡಿದ್ದೇನೆ
ನೆತ್ತರಕ್ಕೆ ಸುತ್ತುವ ಧರೆಯೂ ತೊಯ್ದು ಸ್ತಬ್ದವಾಗಿದೆ
ಚಾಕರಿಯ ಮಾಡುತ್ತ ಕಾಲು ಸವೆದು ಬೊಬ್ಬೆ ಎದ್ದಿದೆ ಕಾಮದಾಹದ ತ್ರಷೆಯನ್ನು ತಿರಿಸಿದ್ದೇನೆ ಪಿಂಡ ಬೆಳೆಯುತ್ತಲೆ ಇದೆ ಉದರದಲಿ ಬಂಧನ ಮುಕ್ತವಾಗಲು ಕಾಯುತ್ತಾ ಇದ್ದೇನೆ ಅಹಲ್ಯೆಗೆ ಶಾಪ ವಿಮೋಚನೆ ಯಾದಂತೆ ಬಂಧನ ಮುಕ್ತಿಗೆ...............!
-ಅನಿಲ ಕಾಮತ, ಸಿದ್ದೇಶ್ವರ
ಅನಿಲ್ ಕಾಮತ ಸಿದ್ದೇಶ್ವರ: ಇವರು ಮೂಲತಃ ಗೋಕರ್ಣದ ಸಿದ್ದೇಶ್ವರದವರು.ವ್ಯಾಪಾರಿ ವೃತ್ತಿಯ ಜೊತೆಗೆ ಸಾಹಿತ್ಯದಲ್ಲೂ ಕೃಷಿಮಾಡುತ್ತಿದ್ದಾರೆ. ಇವರ ಚುಟುಕು, ಕವನ ಮತ್ತು ಮಕ್ಕಳ ಕಥೆಗಳು ಈಗಾಗಲೇ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಅವರು ಉತ್ತಮ ವ್ಯಂಗ್ಯ ಚಿತ್ರಕಾರರೂ ಹೌದು-ಸಂಪಾದಕ
ರೀತಿ ರಿವಾಜುಗಳ ಲಕ್ಷ್ಮಣ ರೇಖೆಯ ಬಂಧನದೊಳಗೆ ಒದ್ದಾಡುವ ಒಂದು ಸ್ಥಿತಿಯು ಮುಕ್ತಿಗಾಗಿ ತವಕಿಸುವುದನ್ನು ಕವಿತೆ ಹಿಡಿಯಲು ಯತ್ನಿಸಿದೆ..