top of page

ಬಂದು ಬಿಡು

ಮಲೆನಾಡ ಮಡಿಲಲಿ

ಏಕಾಂಗಿಯಾಗಿರಲು

ನೀ ಇರದ ಕೊರಗೊಂದು

ಕಾಡುತ್ತಿತ್ತು


ಸೌಂದರ್ಯ ಜಗದಲ್ಲಿ

ನಾ ಇದ್ದೆ ಅಂದರೂ

ನೀ ಇಲ್ಲದ ಮಂಕು

ಕಾಣುತ್ತಿತ್ತು


ಎಷ್ಟೊ ಕಾದವು ಮನವು

ದಾರಿ ಕಳೆದಂತೆಲ್ಲ

ಕಾಣದೇ ಹೋದಾಗ ನೋವು

ಎದೆಯ ತುಂಬಾ


ಆಸೆ ಹೊತ್ತ‌ಮನವು

ಭಾರವಾಯಿತು ಮನವು

ನೀನಿಲ್ಲ ಎಂಬ

ಅರಿವು ಬಂದು


ಈ ಮಡಿಲು ನಿನಗಾಗಿ

ಇಲ್ಲೊಮ್ಮೆ ಕಾಯುತಿದೆ

ಎಂತ ಒತ್ತಡವಿರಲಿ

ಬಂದು ಬಿಡು ನಲ್ಲೆ


...ಉಮೇಶ ಮುಂಡಳ್ಳಿ ಭಟ್ಕಳ

1 view0 comments

Comments


©Alochane.com 

bottom of page