ಈ ಹಿಂದೆ ನನ್ಸುತ್ಲೂ ಯಾರ್ಯಾರೋ-ಕಣ್ರಿ
ಹೋದರೆಲ್ಲಾ ತಂತಾನೆ-ನಾನೀಗ ಒಬ್ಬಂಟಿ
ಇವ್ನೊಬ್ಬನ್ನ ಬಿಟ್ಟು-ಅದೀ-ವಾಮನನೇ ಕಣ್ರಿ!
ಈ ಇವ್ನು ಅಗ್ರಜನೆ? ಸಹಪಾಠಿ? ಗೆಳೆಯ?
ಬಲಿಯ ತುಳಿದನಲ್ಲಾ?-ಆ ತರಹದ ಛಾಯ!
YNK-pun!-'ಒಂದು ಜರ್ನಿಯ ಹರ್ನಿಯ':
-ಈ ಮಹನೀಯನೊಂದು-'ಮಹಾಗಾಯ'
ಹಾಗೂ ನಾ ಬೇಡದೆ ಬಂದ ದೌರ್ಭಾಗ್ಯವು
ನಾ ಶ್ರೇಷ್ಠನೇನಲ್ಲ/ಅಲ್ಲ ಕನಿಷ್ಠ-ತ್ಯಾಜ್ಯನೂ!
ನನ್ನ alter-ego-ಇವ್ನಿಗೇ ಪರ್ಯಾಯವು
ಸದಾ ನನ್ಬೆನ್ನ ಹಿಂದೆ-ಅನುಕೂಲಕ್ಕೆಲ್ಲ ಇವನು
ನನ್ತಕಾರಾರೆಲ್ಲಾ ಗೊತ್ತಿತ್ತು-ಶುದ್ಧ-ಕಂಠಪಾಠ
ಮಟಮಟ ಮಧ್ಯಾಹ್ನವೇ ನನ್ನನೇ ಮಾರಾಟ!!
ಕನಸ-ಕನ್ನಡೀಲೂ ಈ-ಇವನದೇ ಪ್ರತಿಫಲನ
ಗೋಳೆನಗೆ-ಗೋರಿಯ ಮೇಲವನ ಗಾಯನ
ನನ್ನೊಳಗಿನ ಇನ್ನೊಬ್ಬನೆ ಇವ-ನನಗೇ ಶತ್ರುವು!
ನಾ-ಕಡಿಮೆ-ಹೆಚ್ಚವ್ನು/ವಾಮನಂದೇ ಕರಾಮತ್ತು!
ಅವನ ಮಿಕ-ನನಗೆಂದೆಂದೂ ಮುಜುಗರವು
ಅಡ್ಡಬಿದ್ರೂ ನೋವು/ಇವ್ನಿಗೇ ನಾ ಬಲಿ-ಯು!
ನಾ ಮಾಡಿದ್ದಿಷ್ಟೆ-ಒಂದ್ಕಟ್ಟು ಪೂರ್ತಾ ಬರೆದೆ-
ಅವ್ನ ಹೆಸ್ರ/ಗಂಟೆಸೆದೆ ಗಟಾರಕ್ಕೆ! ಸಮಾಧಾನಕ್ಕೆ!
ಈ ದೇಹ ನಿಮ್ಮದಲ್ಲ-Sirs!-ಬಾಡಿಗೆಗಿಡಬೇಡಿ
ನಿಮ್ಹಿಂದೇ ಇದ್ದಾನೆ ನಿಮ್ಮ ವಾಮನ/ನೀವೇ ಬಲಿ
ವಾಮನನಂತೋರಿಗಂತೂ ಬಾಡಿಗೆಗೆ ಕೊಡಬೇಡಿ
-ಶ್ರೇಯಸ್ ಪರಿಪರಿಚರಣ್
......ಹೃತ್ಪೂರ್ವಕ ಧನ್ಯವಾದಗಳು... Sir...🙏🏻🙏🏻🙏🏻🙏🏻🙏🏻