top of page

ಬಿಟ್ಟು ಹೋಗುವಾಗೊಮ್ಮೆ ಕಾಣದಂತೆ ಅಳಿಸಿಬಿಡು ಗುರುತು

ಬಿಟ್ಟು ಹೋಗುವಾಗೊಮ್ಮೆ ಕಾಣದಂತೆ ಅಳಿಸಿಬಿಡು ಗುರುತು

ನಿನ್ನ ನೆನಪಿನ ಕಂಬನಿಯ ಉಳಿಯದಂತೆ ಅಳಿಸಿಬಿಡು ಗುರುತು


ಹುದುಗಿದ ನೋವುಗಳಿಗೆ ತುಟಿಬಿರಿದು ಉಮ್ಮಳಿಸಲಿ ದು:ಖ

ಕಣ್ಣಂಚಿನಲಿ ಒದ್ದೆ ಕಣ್ಣೀರು ಹರಿಯದಂತೆ ಅಳಿಸಿಬಿಡು ಗುರುತು


ಮೊದಲ ಭೇಟಿಯಲಿ ಜೊತೆಗೂಡಿದ ನುಣುಪು ಕಿರುಬೆರಳು

ನಿನ್ನ ಬೇರ್ಪಡುವ ಮುನ್ನ ಸ್ಪರ್ಶವು ತಾಗದಂತೆ ಅಳಿಸಿಬಿಡು ಗುರುತು


ಬೆಳದಿಂಗಳ ಕಳೆ ತುಂಬಿದ ಹಾಲ್ಗೆನ್ನೆಯ ನಿನ್ನ ವದನದ ಕಾಂತಿ

ನೋಡಿದಾಗೆಲ್ಲ ನೆನಪುಗಳು ಮೂಡದಂತೆ ಅಳಿಸಿಬಿಡು ಗುರುತು


ನನ್ನ ಓರೆಕೋರೆಗಳ ತಿದ್ದಲು ಕನ್ನಡಿಯಾಗುಳಿದಿದ್ದೆ ನೀನು

ಒಡೆದ ಕನ್ನಡಿಯ ಕೊಂಕುನೋಟಕ್ಕೆ ಬೆದರದಂತೆ ಅಳಿಸಿಬಿಡು ಗುರುತು


ನಂಬಿಕೆಯ ಕೊರಳ ಹಿಸುಕಿ ನರ್ತಿಸುತಿದೆ ಅಗಲಿಕೆಯ ಭೂತ

'ಮಂಜು' ಅಗಲುವ ಮುನ್ನ ಪ್ರೇಮ ಉಳಿಯದಂತೆ ಅಳಿಸಿಬಿಡು ಗುರುತು


ಮಂಜುನಾಥ ನಾಯ್ಕ ಯಲ್ವಡಿಕವೂರ

9 views0 comments

Comments


bottom of page