top of page

ಬಿಟ್ಟ ಸ್ಥಳ


ಪರೀಕ್ಷೆಯ

ಉತ್ತರ ಪತ್ರಿಕೆಯ

ಕಷ್ಟವೆನಿಸಿದ

ಬಿಟ್ಟ ಸ್ಥಳಗಳನ್ನು

ಮೂರು ಘಂಟೆ

ಗಡುವಿನ ಕೊನೆಯ

ಸದ್ದಿನವರೆಗೂ ಕಾದಿರಿಸಿ

ಊಹಿಸುತ್ತ , ಅಂದಾಜಿಸುತ್ತ

ಅಥವಾ

ಕೂಡುತ್ತ , ಕಳೆಯುತ್ತ

ಗುಣಿಸುತ್ತ , ಭಾಗಿಸುತ್ತ

ಅಳೆದು , ತೂಗಿ

ಹಾಗೋ ಹೀಗೋ

ಹೇಗಾದರೂ

ಮನದ ಮೂಲೆಯ

ಒಂದಿಂಚೂ ಜಾಗವ

ಬಿಡದೇ ಶೋಧಿಸಿ

ಅಂತೂ ಇಂತೂ

ತುಂಬಿಸಬಹುದು ;

ಖಾಲಿ ರೇಖೆಗಳ

ಕಪ್ಪು ಬಿಳುಪು

ಚಿತ್ರಗಳಿಗೆ ಬೇಕಾದಂತೆ

ಆಯಾಯಾ ಚಿತ್ರಗಳಿಗನುಸಾರ

ಬಣ್ಣಗಳನ್ನು ತುಂಬಿ

ಪೂರ್ಣಗೊಳಿಸಬಹುದು ;

ಆದರೆ ,

ಬದುಕಿನ ಪರೀಕ್ಷೆಯ

ಉತ್ತರ ಪತ್ರಿಕೆಯ

ಬಿಟ್ಟಸ್ಥಳಗಳಿಗೆ

ಉತ್ತರಗಳನ್ನು

ಮತ್ತು ಚಿತ್ರಗಳ

ಖಾಲಿ ರೇಖೆಗಳಿಗೆ

ಬೇಕಾದಂತೆ ಬಣ್ಣಗಳನ್ನು

ತುಂಬಲೆತ್ನಿಸಿ

ಅಲ್ಲಿ ಇಲ್ಲಿ ಹುಡುಕಾಡಿ

ಅತ್ತ ಇತ್ತ ತಡಕಾಡಿ

ಕಂಗೆಟ್ಟು ತಿಪ್ಪರಲಾಗ

ಹಾಕಿ ಹೆಣಗಾಡಿದರೂ

ಉತ್ತರ ಪತ್ರಿಕೆಯ

ಕೆಲವು ಪ್ರಶ್ನೆಗಳು

ಖಾಲಿಯಾಗಿಯೇ

ಉಳಿದು ಹೋಗಿ

ಕೊನೆಯ ಘಂಟೆಯ

ಸದ್ದಿನವರೆಗೂ

ತುಂಬಿಸಲಾಗುವುದೇ

ಇಲ್ಲ

ಶಾಂತಲಾ ರಾಜಗೋಪಾಲ್

ಬೆಂಗಳೂರು

48 views0 comments

Comentários


bottom of page