ಪೂರ್ಣ ಗರ್ಭಿಣಿಯಾದ ಗ್ರಾಮೀಣ ಸ್ತ್ರೀಯೋರ್ವಳನ್ನು ಆಕೆಯ ಪತಿ ಕಷ್ಟಪಟ್ಟು ಬೆಂಗಳೂರು ನ ಹೆರಿಗೆ ಆಸ್ಪತ್ರೆಗೆ ಮುಟ್ಟಿಸಿದನು..
ಡಾಕ್ಟರ್ ಹೇಳಿದರು ಸಿಸೇರಿಯನ್ ಮಾಡಬೇಕಾದೀತು...
ತಮ್ಮ ಪತ್ನಿಯ ರಕ್ತ B+veನ ಒಂದು ಯುನಿಟ್ ರಕ್ತ ಬೇಕು..
ಬ್ಲಡ್ ಬ್ಯಾಂಕ್ ಕೋವಿಡ್ ಕಾರಣ ಬಂದ್ ಆಗಿದೆ!!!
ಸರ್ ನನ್ನ ರಕ್ತ A+ve ಅದು ಕೊಟ್ಟರೆ ಆಗಲ್ಲವೆ?
ಆಗಲ್ಲ B+veವೇ ಬೇಕೆಂದು ಡಾಕ್ಟರ ಉತ್ತರ!!!
ಅತ್ತ ತ್ತತ್ತರಿಸಿ ಹೋದ ಪತಿ ಮಹಾಶಯ ರಕ್ತ ಕಲೆಕ್ಟ್ ಮಾಡಲು ಆಸ್ಪತ್ರೆಯ ಹೊರಗಡೆ ಅತ್ತಿತ್ತ ಅಲೆಯುತಿರಲು...ಪೋಲೀಸೊಬ್ಬರ ಕಣ್ಣಿಗೆ ಬಿದ್ದ..ಇವನನ್ನು ಹಿಡಿದ ಪೋಲೀಸ್ ..ಲಾಕ್ಡೌನ್ ಇರುವೂದು ಗೊತ್ತಿಲ್ಲವೇ..ಯಾಕೆ ಹೀಗೆ ಹೊರಗೆ ಓಡಾಡುತ್ತಿಯಾ?
ಆದರೆ ತನ್ನ ಅಸಹಾಯಕತೆಯನ್ನು ಆ ಕಾನ್ಸ್‌ಟೇಬಲ್‌ನಲ್ಲಿ ವಿವರಿಸಿದಾಗ...ಪೋಲೀಸನು ನನ್ನ ರಕ್ತ B+ve ಆಗಿದೆಯೆಂದು ..ತಕ್ಷಣ ಆತನ ಜೊತೆ ಹೋಗಿ ರಕ್ತದಾನ ಮಾಡಬಹುದೆಂದು ಹೇಳಿ ಆಸ್ಪತ್ರೆಗೆ ಹೋಗಿ ರಕ್ತದಾನ ಮಾಡಿದನು..
ನಂತರದ ಕಾರ್ಯವೆಲ್ಲ ಚೆಂದವಾಗಿ ನಡೆದು ಮಗು ಮತ್ತು ಅಮ್ಮ ಆರಾಮವಾದರು...
ಈ ವಿಷಯವನ್ನರಿತ ಅಲ್ಲಿನ DCP ಸಾಹೇಬರು ತನ್ನ ಕಳಗೆ ಕಾರ್ಯ ನಿರ್ವಹಿಸುವ ಆ ಪೋಲೀಸ್‌ಗೆ 25000 ಬಹುಮಾನವಾಗಿ ಕೊಡುತ್ತಾರೆ...
ಈ 23 ಪ್ರಾಯ ವಯಸ್ಸಿನ ಪೋಲಿಸ್ ಉದ್ಯೋಗಸ್ಥನು ತನಗೆ ಬಹುಮಾಮವಾಗಿ ಸಿಕ್ಕ ಮೊತ್ತವನ್ನೆಲ್ಲ ತಾನು ರಕ್ತಕೊಟ್ಟ ಆ ಬಡ ಸ್ತ್ರೀಯ ಆಸ್ಪತ್ರೆಯ ಬಿಲ್ಲಿನ ಮೊತ್ತವನ್ನು ಕಟ್ಟಿ ಮಿಕ್ಕಿದ ಮೊತ್ತವನ್ನು ಆ ತಾಯಿ ಮತ್ತು ಮಗುವಿನ ಕೈಗಿತ್ತನು...
ಆ ಪೋಲೀಸ್ ಕಾನ್ಸ್‌ಟೇಬಲ್ ಮಂಜುನಾಥ
ಇತರರಿಗೆ ಆದರ್ಶವಾಗಲೀ ಎಂದು ಆಶಿಸೋಣ... ಅವರಿಗಾಗಿ ಅವರ ಒಳ್ಳೆಯ ಕೆಲಸಕ್ಕಾಗಿ ಪ್ರಾರ್ಥಿಸೋಣ 👏👏❤❤❤
ಇದು ನನ್ನ ಭಾರತ
Comentarios