- ಜಯಂತ ಕಾಯ್ಕಿಣಿ

ಕಾಣಿಕೆ ಡಬ್ಬಿಯಲ್ಲಿ
ಅಳುಕಿನಿಂದಲೆ ಬಿದ್ದ
ಒಂಟಿ ಚಿಲ್ಲರೆ ನಾಣ್ಯದ
ಸಣ್ಣ ಸದ್ದನ್ನು
ನುಂಗಿಯೆ ಹಾಕಿತು
ದಾನಿಯ ಹೆಸರ ಕರ್ಕಶವಾಗಿ
ಕೊರೆದಿರುವ ದೊಡ್ಡ ಗಂಟೆಯ
ಢಣ್ ಣ್ ಣ್

ಅಗಮ್ಯದ ತಲಾಶಿನಲ್ಲಿದೆ
ಉತ್ಸವ ಮೂರ್ತಿ
ತುರ್ತು ಊರ ತುಂಬ
ಅಂಗಡಿಯವ ವಾಪಸು ಕೊಟ್ಟ ಚಿಲ್ಲರೆ
ಸರಿ ಇದೆಯೆ ಅಂತ ಪರಿಕಿಸುತ
ಅಲ್ಲೆ ನಿಲ್ಲುವುದು
ಹಳೆ ಕೈಗಡ ಮರಳಿಸುವಾಗ
ಕೊಟ್ಟಿದ್ದೇನೆ ಅಂತ ಬಾಯ್ಬಿಟ್ಟು
ಹೇಳುವುದು
ಮುಜುಗರ ಎಲ್ಲರಿಗೂ ಎಲ್ಲವೂ
ಕೊಕ್ಕೆಯ ಕಣ್ಣಿಗೆ ಬೀಳದೆ
ಬಚಾವಾದ ಚಿಲ್ಲರೆ ಹೂವು
ಬಿದ್ದು ಬಿದ್ದು ನಗುವವು
ಊರಿನ ಜೊತೆ
ಮಾತು ಬಿಟ್ಟವನನ್ನು
ಸಮುದ್ರವೇ ಸಂತೈಸಬೇಕು
ಸನ್ನೆಯಲ್ಲೆ
ಎಲ್ಲವನ್ನೂ ಹೇಳಲಾಗದು
ಹುಪ್ ಎಂದು ಮುಖ ಊದಿಸಿ ಕೂತ
ಮುರಿಯದ ನೋಟಿಗೆ
ನಗದು ಮುಕ್ತ ಅಗೋಚರ ಖಾತೆಗೆ
